Narendra Modi On Lockdown: 4.0 ಲಾಕ್​ಡೌನ್​ ಹೊಸ ನಿಯಮಗಳೊಂದಿಗೆ ಹೊಸ ರೂಪದಲ್ಲಿರುತ್ತದೆ; ಪ್ರಧಾನಿ ಮೋದಿ

Lockdown 4.0: ನಾವು ಮಾಸ್ಕ್​ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ, ಅದು ನಮ್ಮ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ. ಹಾಗಾಗಿ 4.0 ಲಾಕ್​ಡೌನ್​ ಹೊಸ ನಿಯಮಗಳೊಂದಿಗೆ ಹೊಸ ರೂಪದಲ್ಲಿರುತ್ತದೆ. ಮೇ 18ರಂದು ಈ ಬಗ್ಗೆ ತಿಳಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.

news18-kannada
Updated:May 12, 2020, 9:13 PM IST
Narendra Modi On Lockdown: 4.0 ಲಾಕ್​ಡೌನ್​ ಹೊಸ ನಿಯಮಗಳೊಂದಿಗೆ ಹೊಸ ರೂಪದಲ್ಲಿರುತ್ತದೆ; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ: ನವದೆಹಲಿ: ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಭಾಷಣದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಮಹತ್ವ ಹಾಗೂ ಪಾತ್ರದ ಬಗ್ಗೆ ತಿಳಿಸಿದರು. ಜೊತೆಗೆ ಈ ಬಿಕ್ಕಟ್ಟಿನಿಂದ ಉಂಟಾಗಿರುವ ಆರ್ಥಿಕತೆಗೆ ಉತ್ತೇಜನ ನೀಡಲು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದರು. ಜೊತೆಗೆ 4.0 ಲಾಕ್​ಡೌನ್​ ಬಗ್ಗೆಯೂ ಮಾಹಿತಿ ನೀಡಿದ್ದಾರೆ.


ಹಾಲಿ ವಿಧಿಸಲಾಗಿರುವ ಲಾಕ್​ಡೌನ್​ ಮೇ 17ರವರೆಗೆ ಮುಂದುವರೆಯಲಾಗಿದೆ. ಅದಾದ ಮರುದಿನ 4.0 ಲಾಕ್​ಡೌನ್ ರೂಪುರೇಷೆ ಬಗ್ಗೆ ಪ್ರಕಟಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಕೊರೋನಾ ವೈರಸ್ ಬಹಳ ಸಮಯದವರೆಗೆ ನಮ್ಮ ಜೀವನದ ಒಂದು ಭಾಗವಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ನಮ್ಮ ಜೀವನವನ್ನು ಕೊರೋನಾ ವೈರಸ್ ಸುತ್ತಲೂ ಸೀಮಿತವಾಗಿರಲು ನಾವು ಬಿಡುವುದಿಲ್ಲ. ನಾವು ಮಾಸ್ಕ್​ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ, ಅದು ನಮ್ಮ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ. ಹಾಗಾಗಿ 4.0 ಲಾಕ್​ಡೌನ್​ ಹೊಸ ನಿಯಮಗಳೊಂದಿಗೆ ಹೊಸ ರೂಪದಲ್ಲಿರುತ್ತದೆ. ಮೇ 18ರಂದು ಆಯಾ ರಾಜ್ಯಗಳ ಸಲಹೆ ಪಡೆದು ಈ ಬಗ್ಗೆ ತಿಳಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನು ಓದಿ: PM Narendra Modi Speech: 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್, ಲಾಕ್​ಡೌನ್​ ವಿಸ್ತರಣೆ; ಮೋದಿ ಘೋಷಣೆ
First published: May 12, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading