ನಂಜನಗೂಡಿನಲ್ಲಿ ಮಾರಕ ಸೋಂಕು ನಿವಾರಣೆಗಾಗಿ ಚಂಡಿಕಾ ಯಾಗ ಮಾಡಿಸಿದ ಶಾಸಕ: ಕೊರೋನಾಮುಕ್ತ ಜಿಲ್ಲೆಯತ್ತ ಮೈಸೂರು

ಸಹಜ ಸ್ಥಿತಿಯತ್ತ ಬರುತ್ತಿರುವ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಿಧಾನಗತಿಯಲ್ಲಿ ಮೆಲೇಳುತ್ತಿದೆ. ಇತ್ತ ನಗರ ಪ್ರದೇಶದಲ್ಲಿ ಹಂತ ಹಂತವಾಗಿ ಸಡಿಲವಾಗುತ್ತಿರುವ ಲಾಕ್ಡೌನ್‌ನಿಂದಾಗಿ ನಗರದ ಹಲವು ಪ್ರದೇಶದಲ್ಲಿ ಮುಕ್ತವಾಗಿ ಜನರು ಓಡಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮೈಸೂರಿನಲ್ಲಿ ಕೊರೋನಾ ಮುಕ್ತ ದಿನ ಹತ್ತಿರವಾಗುವಂತೆ ತೋರುತ್ತಿದೆ.

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಚಂಡಿಕಾ ಯಾಗ ಮಾಡಿಸಿದ ಶಾಸಕ ಹರ್ಷವರ್ಧನ್.

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಚಂಡಿಕಾ ಯಾಗ ಮಾಡಿಸಿದ ಶಾಸಕ ಹರ್ಷವರ್ಧನ್.

  • Share this:
ಮೈಸೂರು: ಕೊರೋನಾ ಕ್ಲಸ್ಟರ್‌ ಆಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಕೊರೋನಾ ಮುಕ್ತವಾಗುವಂತೆ ಲಾಕ್‌ಡೌನ್ ನಡುವೆ ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್ ಅವರು ನಂಜುಡೇಶ್ವರ ದೇಗುಲದಲ್ಲಿ ಚಂಡಿಕಾಯಾಗ ಮಾಡಿಸಿದ್ದಾರೆ.

ನಿನ್ನೆ ಹುಣ್ಣಿಮೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಿರುವ ಬಿಜೆಪಿ ಶಾಸಕ ಹರ್ಷವರ್ಧನ್ ನಂಜನಗೂಡು ದೇವಾಲಯದಲ್ಲಿ ಚಂಡಿಕಾ ಯಾಗ ಹೋಮ ಮಾಡಿಸಿ ನಂಜುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ನಡೆದಿರುವ ಚಂಡಿಕಾ ಯಾಗದಲ್ಲಿ ಆಪ್ತರ ಜೊತೆ ಭಾಗಿಯಾಗಿದ್ದ ಶಾಸಕ ಹರ್ಷವರ್ಧನ್ ಲೋಕಕಲ್ಯಾಣಕ್ಕಾಗಿ ಪೂಜೆ ಮಾಡಿಸಿರುವುದಾಗಿ ಹೇಳಿದ್ದಾರೆ.

ದೇವಾಲಯ ಆವರಣದಲ್ಲಿ ಚಂಡಿಕಾ ಯಾಗ ಮಾಡಿರುವ ಅರ್ಚಕರು ಸುಮಾರು 2 ಗಂಟೆಗಳ ಕಾಲ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ನಂಜನಗೂಡಿನ ಜುಬಿಲೆಂಟ್ಸ್‌ ಕಾರ್ಖಾನೆಯೊಂದರಲ್ಲೆ 74 ಕೊರೋನಾ ಪಾಸಿಟಿವ್‌ ಪತ್ತೆಯಾದ ಹಿನ್ನೆಲೆಯಲ್ಲಿ, ಹಿಂದೆ ಉಸ್ತುವಾರಿ ಮಂತ್ರಿಯಾಗಿದ್ದ ಸಚಿವ ವಿ,ಸೋಮಣ್ಣ ವಿಶೇಷ ಪೂಜೆ ಮಾಡಿಸುವಂತೆ ಸೂಚನೆ ನೀಡಿದ್ದರು. ಅಂದು ಇಡೀ ತಾಲ್ಲೂಕು ಲಾಕ್‌ಡೌನ್ ಕಠಿಣವಾಗಿ ಜಾರಿಯಾಗಿದ್ದರಿಂದ ನಿನ್ನೆ ಅಧಿಕೃತವಾಗಿ ಪೂಜೆ ನೆರವೇರಿಸಲಾಗಿದೆ.

ಇನ್ನು ಅರಮನೆ ನಗರಿ ಮೈಸೂರಿಗೆ ಕೊರೋನಾ ಬಗ್ಗೆ ಗುಡ್​ ನ್ಯೂಸ್ ಸಿಕ್ಕಿದ್ದು, ಸತತ 10 ದಿನಗಳಿಂದ ಒಂದೇ ಒಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹತ್ತು ದಿನಗಳಿಂದ ಮೈಸೂರು ಕೊರೋನಾಮುಕ್ತ ಊರಾಗಿದ್ದು, ಏಪ್ರಿಲ್ 29ರಂದು ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿತ್ತು. ಅದನ್ನು ಬಿಟ್ಟರೆ ಇಂದಿನವರೆಗೂ ಒಂದೇ ಒಂದು ಪಾಸಿಟಿವ್ ಪತ್ತೆಯಾಗಿಲ್ಲ.

10 ದಿನದಲ್ಲಿ 32 ಮಂದಿ ಸೋಂಕಿತರು ಡಿಸ್ಚಾರ್ಜ್ ಆಗಿ ಆಸ್ಪತ್ರೆಯಿಂದ ಹೊರಬಂದಿದ್ದಾರೆ. 10 ದಿನದಲ್ಲಿ 809 ಮಂದಿ ಕ್ವಾರಂಟೈನ್​ನಿಂದ ಬಿಡುಗಡೆಯಾಗಿದ್ದು, ಅದೇ 10 ದಿನದಲ್ಲೇ ಮೈಸೂರಿನಲ್ಲಿ ಬಹುತೇಕ ನಿಯಂತ್ರಣಕ್ಕೆ ಬಂದ ಕೊರೋನಾ ಸೋಂಕು ಮತ್ಯಾರಿಗೂ ಹರಡದಂತೆ ಸುಮ್ಮನಾಗಿದೆ. ಇನ್ನು ಸಹಜ ಸ್ಥಿತಿಯತ್ತ ಬರುತ್ತಿರುವ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಿಧಾನಗತಿಯಲ್ಲಿ ಮೆಲೇಳುತ್ತಿದೆ. ಇತ್ತ ನಗರ ಪ್ರದೇಶದಲ್ಲಿ ಹಂತ ಹಂತವಾಗಿ ಸಡಿಲವಾಗುತ್ತಿರುವ ಲಾಕ್ಡೌನ್‌ನಿಂದಾಗಿ ನಗರದ ಹಲವು ಪ್ರದೇಶದಲ್ಲಿ ಮುಕ್ತವಾಗಿ ಜನರು ಓಡಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಮೈಸೂರಿನಲ್ಲಿ ಕೊರೋನಾ ಮುಕ್ತ ದಿನ ಹತ್ತಿರವಾಗುವಂತೆ ತೋರುತ್ತಿದೆ.

ಇದಲ್ಲದೆ ಮೈಸೂರನ್ನು ರೆಡ್​ ಜೋನ್​ನಿಂದ ಆರೆಂಜ್ ಜೋನ್‌ಗೆ ಬದಲಾಯಿಸಿ ಅಂತ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಕಡಿಮೆ ಆಗುತ್ತಿದೆ. ಕ್ವಾರೈಂಟೈನ್ ಸಂಖ್ಯೆಯು ಸಂಪೂರ್ಣ ಇಳಿದಿದೆ. ಹೀಗಾಗಿ ರೆಡ್​ ಜೋನ್​ನಿಂದ ಜಿಲ್ಲೆಯನ್ನು ಆರೆಂಜ್ ಜೋನ್ ಗೆ ಬದಲಾಯಿಸಿ ಎಂದು ಸಿಎಂ ಬಳಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಜೊತೆ ಸಂಪರ್ಕಿಸಿ ಅಂತಿಮ ತೀರ್ಮಾನ ಕೈಗೋಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನು ಓದಿ: ಇಂದು ಒಂದೇ ದಿನ 48 ಪ್ರಕರಣಗಳು ದಾಖಲು; ರಾಜ್ಯದಲ್ಲಿ 753ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ

ಮೈಸೂರಿನಲ್ಲಿ ಸದ್ಯಕ್ಕೆ ಲಾಕ್‌ಡೌನ್‌ ಮುಂದುವರೆದಿದೆ. ಇನ್ಮುಂದೆ ಕೇಸ್‌ಗಳು ಪತ್ತೆಯಾಗದೆ ಇದ್ದರೆ ಲಾಕ್‌ಡೌನ್‌ನಲ್ಲೂ ಸಹ ಸಡಿಲಿಕೆಯಾಗಲಿದೆ. ಕೊರೋನಾ ನಿಯಂತ್ರಿಸುವಲ್ಲಿ ಮೈಸೂರು ಜಿಲ್ಲಾಡಳಿತ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಜಿಲ್ಲಾಡಳಿತಕ್ಕೆ ನಾನು ಪ್ರಶಂಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
First published: