ಮೈಸೂರಿನ ಕೊರೋನಾ ಹಾಟ್​ಸ್ಪಾಟ್ ಜುಬಿಲೆಂಟ್ ಕಾರ್ಖಾನೆಗೆ ಸೋಂಕು ಬರಲು 4 ಕಾರಣ ಬಿಚ್ಚಿಟ್ಟ ಶಾಸಕ ಹರ್ಷವರ್ಧನ್

Coronavirus In Karnataka: ಒಂದು ಮೆಡಿಸನ್ ಕಂಪನಿಯಲ್ಲಿ ಎಷ್ಟು ಮುಂಜಾಗ್ರತಾ ಕ್ರಮ ‌ಕೈಗೊಳ್ಳಬೇಕಿತ್ತು. ಒಬ್ಬ ವ್ಯಕ್ತಿಯಿಂದ ಇಷ್ಟೊಂದು ಜನರಿಗೆ ಸೋಂಕು ಹರಡಲು ಸಾಧ್ಯವೇ.? ಅದೇನು ಫ್ಲೋರ್ ಮಿಲ್ಲಾ ಎಂದು ಬಿಜೆಪಿ ಶಾಸಕ ಪ್ರಶ್ನಿಸಿದ್ದಾರೆ.

news18-kannada
Updated:April 14, 2020, 12:43 AM IST
ಮೈಸೂರಿನ ಕೊರೋನಾ ಹಾಟ್​ಸ್ಪಾಟ್ ಜುಬಿಲೆಂಟ್ ಕಾರ್ಖಾನೆಗೆ ಸೋಂಕು ಬರಲು 4 ಕಾರಣ ಬಿಚ್ಚಿಟ್ಟ ಶಾಸಕ ಹರ್ಷವರ್ಧನ್
ನಂಜನಗೂಡು ಶಾಸಕ ಹರ್ಷವರ್ಧನ್
  • Share this:
ಮೈಸೂರು(ಏ. 13): ನಂಜನಗೂಡು ಜುಬಿಲೆಂಟ್ ಕಾರ್ಖಾನೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣದ ಬಗ್ಗೆ ಬಿಜೆಪಿ ಶಾಸಕ ಹರ್ಷವರ್ಧನ್ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಕಾರ್ಖಾನೆಗೆ ಕೋರಿಯಾದಿಂದ ಬಂದಿದ್ದ ವ್ಯಕ್ತಿಗಳಿಂದಲೂ ಸೋಂಕು ಹರಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಂದು ಮೈಸೂರಿನಲ್ಲಿ ನ್ಯೂಸ್‌18‌ ಕನ್ನಡದ ಜೊತೆ ಮಾತನಾಡಿದ ಶಾಸಕ ಹರ್ಷವರ್ಧನ್, ಕಾರ್ಖಾನೆಗೆ ಸೋಂಕು ತಗುಲೋಕೆ ನಾಲ್ಕು ಕಾರಣಗಳಿವೆ. ನಾಲ್ಕರಲ್ಲಿ ಒಂದಾದರೂ ಸತ್ಯವಾಗಿರಬೇಕಲ್ವೇ.? ಎಂದು ಪ್ರಶ್ನಿಸಿದರು. ಈ ಬಗ್ಗೆ ಹಿಂದಿನ ಉಸ್ತುವಾರಿ ಸಚಿವ ವಿ. ಸೋಮಣ್ಣ ಜೊತೆ ಚರ್ಚೆ ನಡೆಸುವಾಗ ಆಗಿದ್ದ ಒಂದಿಷ್ಟು ಸಂಭಾಷಣೆಯನ್ನು ಶಾಸಕ ಹರ್ಷವರ್ಧನ್ ವಿವರಿಸಿದರು. ಅವರು ಹೇಳಿದ ನಾಲ್ಕು ಕಾರಣಗಳು ಇಲ್ಲಿವೆ:

1) ಕಾರ್ಖಾನೆಗೆ ಕಂಟೈನರ್‌ನಿಂದ ಸೋಂಕು ಬಂತಾ.?

2) ಕೋರಿಯಾದಿಂದ ಬಂದ ವ್ಯಕ್ತಿಗಳಿಂದ ಬಂತಾ.?

3) ದೆಹಲಿಯಿಂದ ಬಂದ ಮುಖ್ಯಸ್ಥರಿಂದ ಬಂತಾ?.

4) ಆಸ್ಟ್ರೇಲಿಯಾದಿಂದ ಬಂದಿದ್ದ ವ್ಯಕ್ತಿಯಿಂದ ಬಂತಾ.?

ಈ ನಾಲ್ಕು ಕಾರಣದಿಂದ ಸೋಂಕು ಬಂದಿರಬಹುದು. ಇದೇ ವಿಚಾರವನ್ನ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಅವರೊಂದಿಗೂ ಚರ್ಚಿಸಲಾಗಿದೆ. ಆದರಿಂದ ಈ‌ ಬಗ್ಗೆ ತನಿಖೆ ಆಗಲಿ ಎಂಬುದೇ ನನ್ನ ಆಗ್ರಹ ಎಂದು ನಂಜನಗೂಡು ಕ್ಷೇತ್ರದ ಶಾಸಕರು ತಿಳಿಸಿದರು.ಇದನ್ನೂ ಓದಿ: 12 ಸಾವಿರ ಕಾರ್ನರ್ ಸೈಟ್​ಗಳ ಹರಾಜು ಸಾಧ್ಯತೆ; ಆದಾಯ ಹೆಚ್ಚಳಕ್ಕೆ ಸರ್ಕಾರದ ವಿವಿಧ ಕಸರತ್ತು

ಕಾರ್ಖಾನೆ ಲಾಕ್ ಔಟ್ ಆಗಿದೆ. ಅದರ ಪುನರಾರಂಭಕ್ಕೆ‌ ನನ್ನ ವಿರೋಧ ಇಲ್ಲ. ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯೋದು ನನಗೂ ಇಷ್ಟ ಇಲ್ಲ. ಲಾಕ್‌ಡೌನ್ ಮುಗಿಯೋದರೊಳಗೆ ತನಿಖೆ ಮಾಡಿ‌ ಮುಗಿಸಿ ಎಂದವರು ಮತ್ತೆ ಒತ್ತಾಯಿಸಿದರು.

ಇಂದು ಸಹ ಕಾರ್ಖಾನೆ ಮೇಲೆ ಕೆಂಡಕಾರುವುದನ್ನು ಮುಂದುವರಿಸಿದ ಹರ್ಷವರ್ಧ್, ಜುಬಿಲೆಂಟ್‌ನವರು ಫಾರ್ಮಸಿಸ್ ಕಂಪನಿ ನಡೆಸುತ್ತಿದ್ದಾರಾ.? ಅಥವಾ ಸೌದೆ ಹೊಡೆಯೋ ಡಿಪೋ ನಡೆಸುತ್ತಿದ್ದಾರಾ.? ಎಂದು ಖಾರವಾಗಿ ಪ್ರಶ್ನಿಸಿದರು.

ಒಂದು ಮೆಡಿಸನ್ ಕಂಪನಿಯಲ್ಲಿ ಎಷ್ಟು ಮುಂಜಾಗ್ರತಾ ಕ್ರಮ ‌ಕೈಗೊಳ್ಳಬೇಕಿತ್ತು. ಒಬ್ಬ ವ್ಯಕ್ತಿಯಿಂದ ಇಷ್ಟೊಂದು ಜನರಿಗೆ ಸೋಂಕು ಹರಡಲು ಸಾಧ್ಯವೇ.? ಅದೇನು ಫ್ಲೋರ್ ಮಿಲ್ ಹಾ.? ಕಾರ್ಖಾನೆಯಲ್ಲಿ ಈವರೆಗು ಆಗಿರೋ ಬೆಳವಣಿಗೆ ನನಗೆ ಸಮಾಧಾನ ತಂದಿಲ್ಲ, ಕನಿಷ್ಠ ಪಕ್ಷ ಕಾರ್ಖಾನೆಯಿಂದಾದರೂ ತಪಿತಸ್ಥರ ವಿರುದ್ಧ ಕ್ರಮ ಆಗಲಿ ಎಂದು ಆಗ್ರಹಿಸಿದರು.

ಇನ್ನು ಹರ್ಷವರ್ಧನ್ ಅವರ ಮಾವ ಹಾಗೂ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಸಹ, ಜುಬಿಲೆಂಟ್ಸ್ ಕಾರ್ಖಾನೆಯಿಂದಲೇ ಪಾಸಿಟಿವ್ ಪ್ರಕರಣ ಹೆಚ್ಚಾಗಿದೆ, ಅದಕ್ಕೆ ಕಾರಣ ಏನು ಎಂಬುದು ಗೊತ್ತಾಗಬೇಕಿದೆ ಎಂದು ಕೇಳಿದ್ದಾರೆ.

ಇದನ್ನೂ ಓದಿ: ಗದಗ್​ನಲ್ಲಿ ಪೊಲೀಸರಂತೆ ಲಾಠಿ ಹಿಡಿದು ನಿಂತ ಆಶಾ ಕಾರ್ಯಕರ್ತೆಯರು; ಮಾಸ್ಕ್ ಹಾಕದವರಿಗೆ ಕಜ್ಜಾಯ

ಜಿಲ್ಲಾಡಳಿತ, ಸಚಿವರು ಈಗಾಗಲೇ ತನಿಖೆಯ ಹಾದಿಯಲ್ಲಿದ್ದಾರೆ. ತನಿಖೆ ಹಂತದಲ್ಲಿರುವ ಕಾರಣ ಶೀಘ್ರದಲ್ಲೇ ಮಾಹಿತಿ ಗೊತ್ತಾಗಲಿದೆ. ಲಾಕ್ ಔಟ್ ಆಗಿರುವ ಜುಬಿಲೆಂಟ್ಸ್ ಫ್ಯಾಕ್ಟರಿಯನ್ನ ತೆರೆಯೋಬೇಕೋ.? ಬೇಡವೋ ಎಂಬುದನ್ನ ತನಿಖೆಯ ವರದಿ ಬಂದ ಬಳಿಕ ತೀರ್ಮಾನ ಮಾಡಲಾಗುವುದು.‌ಹರ್ಷವರ್ಧನ್ ಕೂಡ ಈ ಕಂಪನಿ ಬಗ್ಗೆ ಕ್ರಮ ಕೈಗೊಳ್ಳೋ ಬಗ್ಗೆ ಹೇಳಿದ್ದಾರೆ. ತನಿಖೆ ಹಂತದಲ್ಲಿ ಇರುವ ಕಾರಣ ತನಿಖೆ ನಂತರ ಕ್ರಮದ ಬಗ್ಗೆ ತೀರ್ಮಾನ ಆಗಲಿ ಎಂದು ಸಲಹೆ ನೀಡಿದರು. ಜುಬಿಲೆಂಟ್ಸ್ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡಿ ಎಂದು ಸರ್ಕಾರಕ್ಕೆ ವರದಿ ನೀಡಿ‌ ಯಾವುದೇ ಒತ್ತಡಕ್ಕು ಮಣಿಯದೆ ತನಿಖೆ ನಡೆಯಬೇಕೆಂದು ಅಧಿಕಾರಿಗಳಿಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದರು.

ಇವೆಲ್ಲದರ ನಡುವೆ ಮೈಸೂರಿನಲ್ಲಿ ಮತ್ತೊಬ್ಬ ಕೊರೋನಾ ಸೋಂಕಿತ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದು, ಜುಬಿಲೆಂಟ್ಸ್ ಕಾರ್ಖಾನೆ ನೌಕರನಾಗಿದ್ದ ಸೋಂಕಿತ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಡಿಸಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದು, ಈ‌ ಮೂಲಕ ಮೈಸೂರಿನಲ್ಲಿ‌ ಒಟ್ಟು 10 ಮಂದಿ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದಂತಾಗಿದೆ.‌ ಸದ್ಯ ಮೈಸೂರಿನಲ್ಲಿ ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣ 48 ಇದ್ದು, ಈವರೆಗೆ  ಡಿಸ್ಜಾರ್ಜ್ ಆದವರು 10 ಮಂದಿ ಬಿಟ್ಟು ಆಕ್ಟೀವ್ ಪಾಸಿಟಿವ್ ಪ್ರಕರಣ 38ಕ್ಕೆ ಇಳಿದಿದೆ.

ಇಂದು ಡಿಸ್ವಾರ್ಜ್ ಆದ ಜುಬಿಲೆಂಟ್ಸ್ ಕಾರ್ಖಾನೆ ನೌಕರ ಚಿಕಿತ್ಸೆ ನೀಡಿ ಗುಣಮುಖ ಮಾಡಿದ್ದಕ್ಕೆ ಧನ್ಯವಾದ ತಿಳಿಸಿ ಡಿಸಿಗೆ ಪತ್ರ ಬರೆದಿದ್ದಾರೆ. ನನನ್ನ ಅತ್ಯಂತ ಕಾಳಜಿಯಿಂದ ನೋಡಿಕೊಂಡಿದ್ದೀರಾ ನನಗೆ ಪ್ರತಿಯೊಂದು ಇಲಾಖೆ ಕೂಡ ಸಹಕಾರ ಕೊಟ್ಟಿದ್ದೀರಿ, ನಿಮ್ಮೆಲ್ಲರಿಗು ಧನ್ಯವಾದ ಎಂದು ಉಲ್ಲೇಖಿಸಿ ಡಿಸಿಗೆ ಪತ್ರ ಬರೆದಿದ್ದು, ಆ ಪತ್ರವನ್ನ ಸ್ವತಹ ಜಿಲ್ಲಾಧಿಕಾರಿ ಬಹಿರಂಗ ಪಡಿಸಿದ್ದಾರೆ.

First published: April 13, 2020, 9:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading