ಕೋವಿಡ್​​-19 ಅವ್ಯವಹಾರ ಆರೋಪ: ಸಿದ್ದರಾಮಯ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ - ನಳಿನ್​​ ಕುಮಾರ್​ ಕಟೀಲ್

ರಾಜ್ಯದಲ್ಲಿ ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​​ ಕಟೀಲ್ ತಿರುಗೇಟು ನೀಡಿದ್ಧಾರೆ.

news18-kannada
Updated:July 11, 2020, 1:07 PM IST
ಕೋವಿಡ್​​-19 ಅವ್ಯವಹಾರ ಆರೋಪ: ಸಿದ್ದರಾಮಯ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ - ನಳಿನ್​​ ಕುಮಾರ್​ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
  • Share this:
ಕೊಡಗು(ಜು.11): ರಾಜ್ಯದಲ್ಲಿ ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​​ ಕಟೀಲ್ ತಿರುಗೇಟು ನೀಡಿದ್ಧಾರೆ. ಈ ಸಂಬಂಧ ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮೆಡಿಕಲ್​​ ಕಿಟ್​​​​ ಖರೀದಿಯಲ್ಲಿ ಅವ್ಯವಹಾರ ಎಂದ ಸಿದ್ದರಾಮಯ್ಯ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಎಷ್ಟು ಅವ್ಯವಹಾರ ನಡೆಸಿದರು ಎನ್ನೋದು ಗೊತ್ತಿದೆ. ಮೊದಲು ಅದರ ಲೆಕ್ಕವನ್ನು ಕೊಡಲಿ. ಈಶ್ವರ ಕಂಡ್ರೆ ಅವರು ಮನೆ ನಿರ್ಮಿಸುವಾಗ ಎಷ್ಟು ಲೂಟಿ ಹೊಡೆದರು ಎನ್ನೋದು ಗೊತ್ತಿದೆ. ಅದೆಲ್ಲವನ್ನೂ ಮೊದಲು ರಾಜ್ಯದ ಜನತೆ ಮುಂದಿಡಲಿ, ಆಮೇಲೆ ರಾಜ್ಯ ಬಿಜೆಪಿ ಸರ್ಕಾರದ ಅವ್ಯವಹಾರದ ಬಗ್ಗೆ ಮಾತನಾಡಲಿ ಎಂದರು ನಳಿನ್​​ ಕುಮಾರ್​ ಕಟೀಲ್​​.

ಇನ್ನು, ಅವ್ಯವಹಾರ ನಡೆದಿದ್ದರೆ ಸೂಕ್ತ ದಾಖಲೆ ಕೊಡಿ ಆರೋಪಿಸಲಿ ಎಂದು ಸಿಎಂ ಕೇಳಿದರು. ಜತೆಗೆ ಒಂದು ಸಭೆಗೂ ಆಹ್ವಾನಿಸಿದರು. ಆದರೆ, ಸಿದ್ದರಾಮಯ್ಯ ಮಾತ್ರ ಸಭೆಗೆ ನಾನ್ಯಾಕೇ ಬರಲಿ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಈ ಹಿಂದೆಯೇ ಕೋವಿಡ್-19 ಚಿಕಿತ್ಸಾ ಪರಿಕರ ಖರೀದಿಯಲ್ಲಿ ರಾಜ್ಯ ಸರ್ಕಾರ 2200 ಕೋಟಿ ರೂ.‌ ಲೂಟಿ ಹೊಡೆದಿದೆ. ಕೋವಿಡ್- 19 ವಿವಿಧ ಪರಿಕರ ಖರೀದಿಯ ಮಾರುಕಟ್ಟೆ ಬೆಲೆ 1163.65 ಕೋಟಿ ರೂ., ಆದರೆ ಸರ್ಕಾರ 3,392 ಕೋಟಿ ರೂ. ಖರ್ಚು ಮಾಡಿ ಪರಿಕರಗಳನ್ನು ಖರೀದಿ‌ ಮಾಡಿದೆ. ಈ ಮೂಲಕ ಸರ್ಕಾರ 2,200 ಕೋಟಿ ರೂ. ‌ಲಪಟಾಯಿಸಿದೆ ಎಂದು ಎಂದು ಪ್ರತಿಪಕ್ಷ ‌ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: Coronavirus Updates: ದೇಶದಲ್ಲಿ 8 ಲಕ್ಷ ದಾಟಿದ ಕೊರೋನಾ ಪೀಡಿತರ ಸಂಖ್ಯೆ; ಕಳೆದ ನಾಲ್ಕು ದಿನದಲ್ಲಿ 1 ಲಕ್ಷ ಕೇಸ್​​ ಪತ್ತೆ

ಕೊರೊನಾ ಚಿಕಿತ್ಸಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಸಿಎಂ ಬಿ.ಎಸ್‌ ಯಡಿಯೂರಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದರು. ಸಿದ್ದರಾಮಯ್ಯನವರು ಬಂದು ಎಲ್ಲಾ ಅಂಕಿ ಅಂಶಗಳನ್ನು ನೋಡಲಿ. ಎಲ್ಲವನ್ನು ಪರಿಶೀಲನೆ ಮಾಡಲು ಅವರಿಗೆ ಅವಕಾಶ ನೀಡುತ್ತೇವ. ಎಲ್ಲಾದರೂ ಲೋಪದೋಷಗಳು ಕಂಡುಬಂದರೆ ಹೇಳಲಿ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದಿದ್ದರು. ಹಾಗೆಯೇ ದಾಖಲೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದರು.
Published by: Ganesh Nachikethu
First published: July 11, 2020, 1:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading