ದೆಹಲಿ ಧಾರ್ಮಿಕ ಸಭೆಯಲ್ಲಿ ಮೈಸೂರಿನ 75 ಜನ ಭಾಗಿ; 58 ಜನರಿಗೆ ಕ್ವಾರಂಟೈನ್​, 17 ಮಂದಿ ನಾಪತ್ತೆ

ಮೈಸೂರು‌ ನಗರದಿಂದ 62 ಮಂದಿ ದೆಹಲಿ ಧಾರ್ಮಿಕ ಸಭೆಗೆ ಹೋಗಿದ್ದರು. ಅದರಲ್ಲಿ 45 ಮಂದಿ ವಾಪಾಸ್ ಬಂದಿದ್ದಾರೆ. ಅವರನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

news18-kannada
Updated:April 2, 2020, 10:43 AM IST
ದೆಹಲಿ ಧಾರ್ಮಿಕ ಸಭೆಯಲ್ಲಿ ಮೈಸೂರಿನ 75 ಜನ ಭಾಗಿ; 58 ಜನರಿಗೆ ಕ್ವಾರಂಟೈನ್​, 17 ಮಂದಿ ನಾಪತ್ತೆ
ಸಾಂಧರ್ಭಿಕ ಚಿತ್ರ
  • Share this:
ಮೈಸೂರು (ಏ. 2): ಸುಮಾರು 4 ಸಾವಿರ ಜನರು ಪಾಲ್ಗೊಂಡಿದ್ದ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಿಂದ ದೇಶದಲ್ಲಿ ಕೊರೋನಾ ಭೀತಿ ಹೆಚ್ಚಾಗಿದೆ. ಈ ಸಭೆಗೆ ತೆರಳಿದ್ದವರಲ್ಲಿ 10 ಮಂದಿ ಈಗಾಗಲೇ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕರ್ನಾಟಕದಿಂದ ಸುಮಾರು 300 ಜನ ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಕಲೆಹಾಕಿದ್ದು, ಸಭೆಯಲ್ಲಿ ಭಾಗವಹಿಸಿದವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸಬೇಕೆಂದು ಸಚಿವ ಶ್ರೀರಾಮುಲು ಮನವಿ ಮಾಡಿದ್ದರು.

ಮೈಸೂರಿನಿಂದ ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಸಭೆಗೆ 75 ಮಂದಿ ಹೋಗಿದ್ದರು ಎಂಬ ಮಾಹಿತಿಯನ್ನು ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ನೀಡಿದ್ದಾರೆ. ಮೈಸೂರು‌ ನಗರದಿಂದ 62 ಮಂದಿ ದೆಹಲಿ ಧಾರ್ಮಿಕ ಸಭೆಗೆ ಹೋಗಿದ್ದರು. ಅದರಲ್ಲಿ 45 ಮಂದಿ ವಾಪಾಸ್ ಬಂದಿದ್ದಾರೆ. ಅವರನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಉಳಿದ 17 ಮಂದಿ ವಾಪಾಸ್ ಮೈಸೂರಿಗೆ ಬಂದೇ ಇಲ್ಲ. ಮೈಸೂರು ಗ್ರಾಮಾಂತರ ಪ್ರದೇಶದ 13 ಜನ ವಾಪಾಸ್ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಬಗ್ಗೆ ಜನರೇ ಮಾಹಿತಿ ನೀಡಿ; ಶ್ರೀರಾಮುಲು ಮನವಿ

ಹೆಚ್.ಡಿ.ಕೋಟೆಯ 6, ಬನ್ನೂರಿನ 1, ಪಿರಿಯಾಪಟ್ಟಣದ ಒಬ್ಬರನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ. ದೆಹಲಿಯಲ್ಲಿ ಇಬ್ಬರು, ಬೆಂಗಳೂರಿನಲ್ಲಿ ಇಬ್ಬರನ್ನು ಹೋಂ ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಒಟ್ಟು ಮೈಸೂರಿನ 75 ಮಂದಿಯ ಮಾಹಿತಿ ಲಭ್ಯವಾಗಿದೆ. ಈಗಾಗಲೇ ವಾಪಾಸ್ ಬಂದವರಲ್ಲಿ ಯಾರೊಬ್ಬರಿಗೂ ಸೋಂಕು ತಗುಲಿಲ್ಲ. ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ. ಸೋಂಕು ತಗುಲಿಲ್ಲವಾದರೂ ಮುಂಜಾಗ್ರತಾ ಕ್ರಮದಿಂದ ಅವರನ್ನು ಕ್ವಾರೆಂಟೈನ್ ಮಾಡಲಾಗುತ್ತಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading