ಸಾಂಸ್ಕೃತಿಕ ನಗರಿಯಲ್ಲಿ ಆನ್‌ಲೈನ್‌ ಸಂಗೀತ; ಲಾಕ್‌ಡೌನ್‌ನಲ್ಲೂ ಗಾನಭಾರತಿಯಿಂದ ಸಂಗೀತ ರಸದೌತಣ

ಕಲಾವಿದರ ಮನೆಯಿಂದ ಈ ಲೈವ್ ಪ್ರಸಾರ ನಡೆಸುವ ವ್ಯವಸ್ಥೆ ಮಾಡಲಾಯಿತು. ಎಲ್ಲಿಯೂ ಸಹ 3 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವುದಿಲ್ಲ, ಗಲಾಟೆ ಗದ್ದಲ ಇಲ್ಲ, ಅದೆ ಸಂಗೀತ, ಅದೆ ಸಾಹಿತ್ಯ, ಅದೆ ನೃತ್ಯ, ಆದರೆ ಪ್ರೇಕ್ಷಕರ ನೇರ ಚಪ್ಪಾಳೆ ಮಾತ್ರ ಕಲಾವಿದರಿಗೆ ಸಿಗೋಲ್ಲ. ಬದಲಿಗೆ ಲೈಕ್‌ ಮತ್ತು ಶೇರ್‌ಗಳೇ ಕಲಾವಿದರ ಪ್ರಶಂಸೆಯ ಗರಿ.   

news18-kannada
Updated:May 23, 2020, 3:46 PM IST
ಸಾಂಸ್ಕೃತಿಕ ನಗರಿಯಲ್ಲಿ ಆನ್‌ಲೈನ್‌ ಸಂಗೀತ; ಲಾಕ್‌ಡೌನ್‌ನಲ್ಲೂ ಗಾನಭಾರತಿಯಿಂದ ಸಂಗೀತ ರಸದೌತಣ
ಗಾನಭಾರತಿಯಿಂದ ಆನ್​ಲೈನ್​ನಲ್ಲಿ ಸಂಗೀತ ಕಾರ್ಯಕ್ರಮ.
  • Share this:
ಮೈಸೂರು: ಇಡೀ ದೇಶ ಲಾಕ್‌ಡೌನ್ ಆಗಿದ್ದು ಮಾಲ್‌, ಸಿನಿಮಾ, ವೇದಿಕೆ ಕಾರ್ಯಕ್ರಮಗಳು ಇಲ್ಲದೆ  ಕಳೆದ 2 ತಿಂಗಳುಗಳಿಂದ ಜನರಿಗೆ ಮನರಂಜನೆಯೇ ಮಾಯವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ವೇದಿಕೆ ಮನರಂಜನೆ ಕಾರ್ಯಕ್ರಮಗಳು ಬಂದ್ ಆಗಿದ್ದು, ಸಾರ್ವಜನಿಕರು ಗುಂಪುಗುಂಪಾಗಿ ಸೇರಬಾರದು ಎಂಬ ಆದೇಶ ಇದೆ.

ಈ ನಡುವೆ ವಾರಕ್ಕೆ ಒಂದೊ ಎರಡೋ ಸಂಗೀತ ಕಾರ್ಯಕ್ರಮ ನೋಡಿ ಮನಸಿಗೆ ಮುದ ತಂದುಕೊಳ್ಳುತ್ತಿದ್ದ ಸಂಗೀತಾಸಕ್ತರು ಸಂಗೀತ ಕಛೇರಿಗಳನ್ನು ಮಿಸ್ ಮಾಡಿಕೊಂಡಿದ್ದರು.  ಆದರೆ ಮೈಸೂರಿನ ಗಾನಭಾರತಿ ಸಂಗೀತ ನೃತ್ಯ ಶಾಲೆ  ಹಾಗೂ ಸಂಗೀತ ಸಭಾ ಸಂಸ್ಥೆ, ಸಂಗೀತಾಸಕ್ತರಿಗೆ ಲಾಕ್​ಡೌನ್ ವೇಳೆಯು ಮನರಂಜನೆ ನೀಡಿದೆ. ಆನ್‌ಲೈನ್‌ ಮೂಲಕ ತನ್ನ ಕಲಾಸಕ್ತರನ್ನು ರಂಜಿಸಿರುವ ಈ ಸಂಸ್ಥೆ, ಲಾಕ್‌ಡೌನ್‌ಗೆ ಸೆಡ್ಡು ಹೊಡೆದು  ಸಂಗೀತ ಪ್ರಿಯರ ಮೆಚ್ಚುಗೆ ಗಳಿಸಿದೆ.  ಗಾನಭಾರತಿಯ ಈ ಪ್ರಯತ್ನ ಕೇಳುಗರ ಹಾಗೂ ನೋಡುಗರ ಮನಸೆಳೆದಿದೆ.

ಗಾನಭಾರತಿ... ಮೈಸೂರಿನ ಸಂಗೀತಾಸಕ್ತರು ಈ ಹೆಸರನ್ನು ಕೇಳಿಯೇ ಇರುತ್ತಾರೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ಸಂಗೀತ ಕಲಿಯುತ್ತಿದ್ದಾರೆ. ಇಲ್ಲಿ ಸಂಗೀತ ಕಲಿತ ಹಲವರು ಸಂಗೀತ ವಿದ್ವಾಂಸರಾಗಿದ್ದಾರೆ. ಈ ಸಂಗೀತ ಸಭೆ ಸಂಸ್ಥೆಯಲ್ಲಿ ಪ್ರತಿ ವಾರ ಶಾಸ್ತ್ರೀಯ ಸಂಗೀತ ಕಛೇರಿ, ಭರತನಾಟ್ಯ ಹಾಗೂ ಸಂಗೀತ ಸಂಬಂಧಿತ ಕಾರ್ಯಕ್ರಮಗಳು ನೆರವೇರುತ್ತಿದ್ದವು. ವಾರಕ್ಕೊಂದು ಎರಡು ಹಾಗೂ ವಿಶೇಷ ಸಂದರ್ಭದಲ್ಲಿ ಹಲವು ಪ್ರದರ್ಶನವನ್ನು ಸಭಾಂಗಣದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಇರೋದ್ರಿಂದ ಈಗ ಎಲ್ಲಾ ಮನರಂಜನಾ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿದೆ. ಸಭಾಂಗಣ ಸಹ ಬಂದ್ ಆಗಿದೆ. ಲಾಕ್‌ಡೌನ್‌ 1,0ನಲ್ಲಿ ಗಾನಭಾರತಿ ಸಂಸ್ಥೆ ಎಲ್ಲರಂತೆ ಸಭಾಂಗಣ ಬಂದ್ ಮಾಡಿತ್ತು. ಆದರೆ 2.0 ಲಾಕ್‌ಡೌನ್‌ಲ್ಲಿ ಸಂದರ್ಭದಲ್ಲಿ ಗಾನಭಾರತಿ ಕೊಂಚ ವಿಭಿನ್ನ ಆಲೋಚನೆ ಮಾಡಿ ಆನ್ ಲೈನ್ ಸಂಗೀತ ಕಛೇರಿಗಳನ್ನ ಆರಂಭಿಸಿತು. ಕಳೆದ ಒಂದೂವರೆ ತಿಂಗಳಿನಿಂದ ಸಂಗೀತ ಕಚೇರಿಗಳನ್ನ ನಡೆಸಿಕೊಂಡು ಬರುತ್ತಿರುವ ಗಾನಭಾರತಿ ವಾರಕ್ಕೆ ಒಂದು ಎರಡರಂತೆ ಕಾರ್ಯಕ್ರಮ ಮಾಡಿ ಆನ್‌ಲೈನ್‌ಲ್ಲೆ ಸಂಗೀತ ರಸದೌತಣ ನೀಡುತ್ತಿದೆ.

ಸಾಂಸ್ಕೃತಿಕ ನಗರಿಯಲ್ಲಿ ಸಂಗೀತ ಕಛೇರಿ ನಡೆಸೋಕೆ ಗಾನಭಾರತಿ ಹುಡುಕಿಕೊಂಡ ಪರ್ಯಾಯ ಮಾರ್ಗ ಫೇಸ್‌ಬುಕ್‌ ಲೈವ್‌. ತನ್ನ ಅಧಿಕೃತ ಫೇಸ್‌ಬುಕ್‌ ಖಾತೆಯಿಂದ ಲೈವ್ ಮಾಡಿ ಅದರ ಲಿಂಕ್‌ಗಳನ್ನ ವಾಟ್ಸಪ್‌ನಲ್ಲಿ ಶೇರ್‌ ಮಾಡಿದರು. ಅದು ಜನರಿಂದ ಜನರಿಗೆ ತಲುಪಿ ನೂರಾರು ಸಂಖ್ಯೆಯಿಂದ ಸಾವಿರಾರು ಸಂಖ್ಯೆಗೆ ವಿವರ್ಸ್‌ಗಳು ಸಿಕ್ಕಿದರು. ಇನ್ನು ಗಾನಭಾರತಿ ಸಭಾಂಗಣ ಹಾಗೂ ಕಲಾವಿದರ ಮನೆಯಿಂದ ಈ ಲೈವ್ ಪ್ರಸಾರ ನಡೆಸುವ ವ್ಯವಸ್ಥೆ ಮಾಡಲಾಯಿತು. ಎಲ್ಲಿಯೂ ಸಹ 3 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವುದಿಲ್ಲ, ಗಲಾಟೆ ಗದ್ದಲ ಇಲ್ಲ, ಅದೆ ಸಂಗೀತ, ಅದೆ ಸಾಹಿತ್ಯ, ಅದೆ ನೃತ್ಯ, ಆದರೆ ಪ್ರೇಕ್ಷಕರ ನೇರ ಚಪ್ಪಾಳೆ ಮಾತ್ರ ಕಲಾವಿದರಿಗೆ ಸಿಗೋಲ್ಲ. ಬದಲಿಗೆ ಲೈಕ್‌ ಮತ್ತು ಶೇರ್‌ಗಳೇ ಕಲಾವಿದರ ಪ್ರಶಂಸೆಯ ಗರಿ.

ಈಗಾಗಲೇ ಫೇಸ್‌ಬುಕ್‌ ಮೂಲಕವೇ ತಬಲಾ, ವೀಣೆ, ಸಂಗೀತಾ, ಭರತ ನಾಟ್ಯ ಹೀಗೆ ಹಲವು  ಕಛೇರಿಗಳನ್ನ ಆಯೋಜನೆ ಮಾಡಲಾಗಿದೆ. ಅದರಲ್ಲು ಮೈಸೂರಿನ ಸ್ಥಳೀಯ ಹೆಸರಾಂತ ಕಲಾವಿದರನ್ನ ಬಳಸಿಕೊಂಡು ಈ ಪ್ರಯೋಗ ಮಾಡಲಾಗಿದೆ. ಸದ್ಯ ಇದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದ್ದು, ದಿನೆ ದಿನೆ ಹೆಚ್ಚೆಚ್ಚು ಜನರು ಇದನ್ನ ನೋಡಲಾರಂಭಿಸಿದ್ದಾರೆ. ಅದೇ ರೀತಿ ವಾರದಲ್ಲಿ ಒಮ್ಮೆ ಮಾತ್ರ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಇದೀಗಾ ವಾರಕ್ಕೆ ಎರಡು ಅಥವಾ ಮೂರು ಬಾರಿ ಒಂದು ಗಂಟೆಗಳ ಕಾಲ ಲೈವ್ ಕಾರ್ಯಕ್ರಮ ನಡೆಸಲಾಗುತ್ತಿದೆ.

ಇದನ್ನು ಓದಿ: ಕೊರೋನಾ ಅಟ್ಟಹಾಸದ ನಡುವೆಯೂ ಎಂಎಲ್​ಸಿ ನಾಮನಿರ್ದೇಶನ ಸ್ಥಾನಕ್ಕೆ ಲಾಬಿ ಶುರು

ಒಟ್ಟಾರೆ, ಲಾಕ್ ಡೌನ್ ವೇಳೆಯು ಸಂಗೀತ ಪ್ರಿಯರಿಗೆ ಗಾನಭಾರತಿ ಸಾಮಾಜಿಕ ಆಂತರದ ಮೂಲಕ ಮನರಂಜನೆ ಕೊಡುತ್ತಿದೆ. ಇದೇ ರೀತಿ ಸಂಗೀತಾ ಕಾರ್ಯಕ್ರಮಗಳು ಸಂಗೀತ ಪ್ರಿಯರನ್ನ ತಲುಪಲಿ, ಸಾಮಾಜಿಕ ಅಂತರದಲ್ಲೂ ಸಂಗೀತ ಕ್ಷೇತ್ರ ತನ್ನ ಶಿಸ್ತು ಕಾಪಾಡಿಕೊಳ್ಳಲಿ ಅನ್ನೋದೆ  ಸಂಗೀತ ಪ್ರಿಯರ ಆಶಯವಾಗಿದೆ.
First published: May 23, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading