ಪ್ರವಾಸಿಗರ ಸ್ವರ್ಗ ಮೈಸೂರಿಗೆ ಕೊರೋನಾಘಾತ; ನಷ್ಟದಿಂದಾಗಿ ಪ್ರತಿಷ್ಠಿತ ಸದರನ್‌ ಸ್ಟಾರ್ ಹೋಟೆಲ್‌ಗೆ ಬೀಗ!

ಮೈಸೂರಿನ ಹೆಸರಾಂತ ಹಳೆಯ ಸ್ಟಾರ್ ಹೋಟೆಲ್ಲಾದ ಸದರ್ನ್ ಸ್ಟಾರ್, ಇನ್ನು ನಿರ್ವಹಣೆ ಕಷ್ಟ ಅಂತ ಶಾಶ್ವತ ಬಂದ್ ಮಾಡಲು ನಿಶ್ಚಯಿಸಿದೆ. ಈ ವಿಚಾರವಾಗಿ ಇಂದು ಹೋಟೆಲ್ ಆಡಳಿತ ಮಂಡಳಿ ತನ್ನ ಉದ್ಯೋಗಿಗಳಿಗೆಲ್ಲ ನೋಟಿಸ್ ನೀಡಿದ್ದು,  ಇನ್ನು ಮುಂದೆ ಹೋಟೆಲ್‌ ನಡೆಸೋಲ್ಲ ಅಂತ ಸಿಬ್ಬಂದಿಗೆ ಹೇಳಿದೆ. 

news18-kannada
Updated:May 19, 2020, 6:44 PM IST
ಪ್ರವಾಸಿಗರ ಸ್ವರ್ಗ ಮೈಸೂರಿಗೆ ಕೊರೋನಾಘಾತ; ನಷ್ಟದಿಂದಾಗಿ ಪ್ರತಿಷ್ಠಿತ ಸದರನ್‌ ಸ್ಟಾರ್ ಹೋಟೆಲ್‌ಗೆ ಬೀಗ!
ಮೈಸೂರಿನ ಸದರನ್​ ಸ್ಟಾರ್ ಹೋಟೆಲ್.
  • Share this:
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಹೇಳಿ ಕೇಳಿ ಪ್ರವಾಸಿಗರ ಸ್ವರ್ಗ ಅಂತ ಕರೆಸಿಕೊಳ್ಳುತ್ತೆ. ಮೈಸೂರಿನ ಪ್ರವಾಸಿತಾಣಗಳೆಂದರೆ ಅವುಗಳು ಪ್ರವಾಸಿಗರ ಮೆಚ್ಚಿನ ಜಾಗಗಳು. ಅಂತಹ ಪ್ರವಾಸಿಗರನ್ನೇ ನಂಬಿ ಮೈಸೂರಿನಲ್ಲಿ ಹಲವು ಉದ್ಯಮಗಳು ಆರಂಭವಾಗಿದ್ದವು. ಆದರೆ ಈ ಕೊರೋನಾದಿಂದ ಇಡೀ ಪ್ರವಾಸೋದ್ಯಮವೇ ಹಳ್ಳ ಹಿಡಿದಿದ್ದು, ಇದರ ಭಾಗವಾದ ಹೋಟೆಲ್ ಉದ್ಯಮ ಸಂಪೂರ್ಣ ನಷ್ಟಕ್ಕೆ ಒಳಗಾಗಿದೆ.

ಮೈಸೂರಿನಲ್ಲಿ ಸ್ಟಾರ್ ಹೋಟೆಲ್​ಗಳೇ ಶಾಶ್ವತವಾಗಿ ಬಂದ್ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇಂದು ಪ್ರತಿಷ್ಠಿತ ಸ್ಟಾರ್ ಹೋಟೆಲ್ ಆದ ಸದರನ್‌ ಸ್ಟಾರ್ ಹೋಟೆಲ್‌ ತಮ್ಮ ಉದ್ಯಮ ನಿಲ್ಲಿಸುವುದಾಗಿ ಘೋಷಣೆ ಮಾಡಿಕೊಂಡಿದೆ.

ಸಾಂಸ್ಕೃತಿಕ ರಾಜಧಾನಿ, ಪ್ರವಾಸಿಗರ ಸ್ವರ್ಗ, ಅರಮನೆ ನಗರಿ ಹೀಗೆ ನಾನಾ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ನಗರಕ್ಕೆ ಕೊರೋನಾ ದೊಡ್ಡ ಮಟ್ಟದ ಹೊಡೆತ ನೀಡಿದೆ. ದೇಶದಲ್ಲೇ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿದ್ದ ನಗರ ಅಂದ್ರೆ ಅದು ಮೈಸೂರು. ಮೈಸೂರಿನ ಸಾಂಸ್ಕೃತಿಕ ನೆಲೆಗಟ್ಟು, ಇಲ್ಲಿನ ಇತಿಹಾಸ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಆದರೆ ಈಗ ಕೊರೋನಾ ನೀಡಿರುವ ಆಘಾತ ಅಷ್ಟಿಷ್ಟಲ್ಲ. ಎಷ್ಟೋ ಕಡೆ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದೀಗಾ ಮೈಸೂರು ಈ ಸಾಲಿಗೆ ಸೇರಿಕೊಳ್ಳುತ್ತಿದೆ.

ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಹೋಟೆಲ್ ಉದ್ಯಮ ಇದೀಗ ಭಾರಿ ನಷ್ಟಕ್ಕಿಡಾಗಿದ್ದು, ಮೈಸೂರಿನ ಹೆಸರಾಂತ ಹಳೆಯ ಸ್ಟಾರ್ ಹೋಟೆಲ್ಲಾದ ಸದರ್ನ್ ಸ್ಟಾರ್, ಇನ್ನು ನಿರ್ವಹಣೆ ಕಷ್ಟ ಅಂತ ಶಾಶ್ವತ ಬಂದ್ ಮಾಡಲು ನಿಶ್ಚಯಿಸಿದೆ. ಈ ವಿಚಾರವಾಗಿ ಇಂದು ಹೋಟೆಲ್ ಆಡಳಿತ ಮಂಡಳಿ ತನ್ನ ಉದ್ಯೋಗಿಗಳಿಗೆಲ್ಲ ನೋಟಿಸ್ ನೀಡಿದ್ದು,  ಇನ್ನು ಮುಂದೆ ಹೋಟೆಲ್‌ ನಡೆಸೋಲ್ಲ ಅಂತ ಸಿಬ್ಬಂದಿಗೆ ಹೇಳಿದೆ.

ಇನ್ನು ತನ್ನ ನೌಕರರಿಗೆ ಕೊಡಬೇಕಾದ ಬಾಕಿ ಹಣ ನೀಡಿ ಸೆಟ್ಲ್​ಮೆಂಟ್ ಮಾಡುವುದಾಗಿ ಹೇಳಿರುವ ಆಡಳಿತ ಮಂಡಳಿ, ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಹೆಚ್ವು ಮಂದಿಗೆ ನೋಟಿಸ್‌ ಮೂಲಕ ಮಾಹಿತಿ ನೀಡಿದೆ. ಜೊತೆಗೆ ಒಂದು ತಿಂಗಳ ಸಂಬಳ ಹಾಕಿ ಮುಂದಿನ ತಿಂಗಳಿನಿಂದ ಕೆಲಸಕ್ಕೆ ಬರಬೇಡಿ ಎಂದು ಹೇಳಿದೆ. ಇದೀಗ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ 150ಕ್ಕು ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಮಾಹಿತಿ ನೀಡಿದ್ದು, ಸದರನ್‌ ಸ್ಟಾರ್‌ ಹೋಟೆಲ್ ಮುಚ್ಚುವುದಾಗಿ ಘೋಷಣೆ ಮಾಡಿಕೊಂಡಿರೋದು ನಿಜ. ಅಲ್ಲಿ 150ಕ್ಕು ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಅವರೆಲ್ಲರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೋವಿಡ್‌ನಿಂದಾಗಿ ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಹೋಟೆಲ್‌ಗಳಲ್ಲಿ ಇಂತದ್ದೆ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನು ಈ ಪರಿಸ್ಥಿತಿ ಬೇರೆ ಹೋಟೆಲ್‌ಗಳಲ್ಲಿ ಹೊರತಾಗಿಲ್ಲ. ಒಂದು ಸ್ಟಾರ್ ಹೋಟೆಲ್ ನಿರ್ವಹಣೆ, ಸಂಬಳ ಇತರೆ ಖರ್ಚು ಎಲ್ಲಾ ಸೇರಿ 50 ಲಕ್ಷದಷ್ಟು ಬೇಕಾಗುತ್ತಂತೆ. ಇದೇ ರೀತಿ ಹೋಟೆಲ್ ನಿರ್ವಹಣೆ ಮಾಡಲು ಕಷ್ಟವಾಗುತ್ತಿದ್ದು, ಇನ್ನು ಶೇ 35 ರಷ್ಟು ಹೋಟೆಲ್ ಗಳು ಮೈಸೂರಿನಲ್ಲಿ ಬಾಗಿಲು ಬಂದ್ ಮಾಡುವ ಸಾಧ್ಯತೆ ಇದೆಯಂತೆ.ಇದನ್ನು ಓದಿ: SSLC Exam Time Table: ಎಸ್​ಎಸ್​ಎಲ್​ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆ

ಈ ಕೋವಿಡ್ ನಿಂದ ಕಳೆದ ಎರಡು ತಿಂಗಳಿಂದ ಮೈಸೂರಿನಲ್ಲೇ ಅಂದಾಜು ಒಂದು ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ತೀರಾ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್ ಉದ್ಯಮ ಈಗಾಗಲೇ ಸಾಕಷ್ಟು ನಷ್ಟಕೀಡಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ನೆರವಿಗೆ ಧಾವಿಸದಿದ್ದರೆ ಮತ್ತಷ್ಟು ಹೋಟೆಲ್​ಗಳು ಮುಚ್ಚುವಂತಾಗಿ, ಇನ್ನು ಸಾವಿರಾರು ಸಂಖ್ಯೆಯಲ್ಲಿ ಹೋಟೆಲ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗುವುದರಲ್ಲಿ ಅನುಮಾನವೇ ಇಲ್ಲ.
First published: May 19, 2020, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading