ಮೈಸೂರು ಈಗ ಕೊರೋನಾಮುಕ್ತ: ಶರವೇಗದಲ್ಲಿ ಹಬ್ಬಿ ಅಷ್ಟೇ ಬೇಗ ಜಿಲ್ಲೆಯಿಂದ ಮಾಯವಾದ ಸೋಂಕು

ಜಿಲ್ಲೆಯಲ್ಲಿ ಜುಬಿಲೆಂಟ್ ಸಂಬಂಧ 74 ಪ್ರಕರಣ, ಇದ್ದರೆ, ತಬ್ಲಿಘಿಗಳ ಸಂಪರ್ಕದಿಂದ 10 ಪ್ರಕರಣ ದಾಖಲಾಗಿತ್ತು. ದುಬೈನಿಂದ ಬಂದವರು 3 ಉಸಿರಾಟದ ಸಮಸ್ಯೆಯ ಮೂರು ಕೇಸ್​ಗಳು ದಾಖಲಾಗಿದ್ದವು. ಮೈಸೂರು ಜಿಲ್ಲೆಯ 90 ಪಾಸಿಟಿವ್ ಕೇಸ್‌ಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್‌ ಆಗಿದ್ದು, ಒಂದೇ ಒಂದು ಕೊರೋನಾ ಸಾವು ಸಂಭವಿಸದೆ ಇರೋದು ಜಿಲ್ಲೆಗೆ ಹೆಮ್ಮೆ ತಂದಿದೆ.

ಜಿಲ್ಲೆಯಲ್ಲಿ ಜುಬಿಲೆಂಟ್ ಸಂಬಂಧ 74 ಪ್ರಕರಣ, ಇದ್ದರೆ, ತಬ್ಲಿಘಿಗಳ ಸಂಪರ್ಕದಿಂದ 10 ಪ್ರಕರಣ ದಾಖಲಾಗಿತ್ತು. ದುಬೈನಿಂದ ಬಂದವರು 3 ಉಸಿರಾಟದ ಸಮಸ್ಯೆಯ ಮೂರು ಕೇಸ್​ಗಳು ದಾಖಲಾಗಿದ್ದವು. ಮೈಸೂರು ಜಿಲ್ಲೆಯ 90 ಪಾಸಿಟಿವ್ ಕೇಸ್‌ಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್‌ ಆಗಿದ್ದು, ಒಂದೇ ಒಂದು ಕೊರೋನಾ ಸಾವು ಸಂಭವಿಸದೆ ಇರೋದು ಜಿಲ್ಲೆಗೆ ಹೆಮ್ಮೆ ತಂದಿದೆ.

ಜಿಲ್ಲೆಯಲ್ಲಿ ಜುಬಿಲೆಂಟ್ ಸಂಬಂಧ 74 ಪ್ರಕರಣ, ಇದ್ದರೆ, ತಬ್ಲಿಘಿಗಳ ಸಂಪರ್ಕದಿಂದ 10 ಪ್ರಕರಣ ದಾಖಲಾಗಿತ್ತು. ದುಬೈನಿಂದ ಬಂದವರು 3 ಉಸಿರಾಟದ ಸಮಸ್ಯೆಯ ಮೂರು ಕೇಸ್​ಗಳು ದಾಖಲಾಗಿದ್ದವು. ಮೈಸೂರು ಜಿಲ್ಲೆಯ 90 ಪಾಸಿಟಿವ್ ಕೇಸ್‌ಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್‌ ಆಗಿದ್ದು, ಒಂದೇ ಒಂದು ಕೊರೋನಾ ಸಾವು ಸಂಭವಿಸದೆ ಇರೋದು ಜಿಲ್ಲೆಗೆ ಹೆಮ್ಮೆ ತಂದಿದೆ.

  • Share this:
ಮೈಸೂರು: ಅರಮನೆಗಳ ನಗರಿ ಮೈಸೂರು ಜಿಲ್ಲೆ ಇಂದಿಗೆ ಕೊರೋನಾ ಮುಕ್ತ ಜಿಲ್ಲೆಯಾಗಿದೆ. ಮೈಸೂರಿನಲ್ಲಿ ಇವತ್ತಿನ ಮಟ್ಟಿಗೆ ಯಾವುದೇ ಕೊರೋನಾ ಪಾಸಿಟಿವ್ ಇಲ್ಲದೆ ಇದ್ದರೂ, ಕೊರೋನಾ ಆತಂಕ ಮಾತ್ರ ದೂರವಾಗಿಲ್ಲ. ಇಡೀ ಜಿಲ್ಲೆಯಲ್ಲಿ ಕೊರೋನಾ ಶರವೇಗದಲ್ಲಿ ವ್ಯಾಪಿಸಿ, ಅಷ್ಟೇ ಶರವೇಗದಲ್ಲಿ ಜಿಲ್ಲೆಯಿಂದ ದೂರವಾಗಿದೆ. ಹಾಗಾದರೆ ಜಿಲ್ಲೆಗೆ ಮೊದಲು ಬಂದ ಕೇಸ್‌ ಯಾವುದು, ಆಮೇಲೆ ಯಾರಿಗೆ ಬಂತು ಯಾವತ್ತು ಯಾರ್ಯಾರು ಡಿಸ್ಚಾರ್ಜ್ ಆದರೂ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಮಾರ್ಚ್ 21 ಮೊದಲ ಪ್ರಕರಣ ದುಬೈನಿಂದ ಬಂದಿದ್ದ ವ್ಯಕ್ತಿಗೆ ಸೋಂಕು. ಮಾರ್ಚ್ 23 ಎರಡನೆ ಪಾಸಿಟಿವ್ ಪತ್ತೆ. ದುಬೈನಿಂದ ಬಂದಿದ್ದ ವ್ಯಕ್ತಿ. ಮಾರ್ಚ್ 26 ಮೂರನೆ ಪಾಸಿಟಿವ್ ಪತ್ತೆ. ಜುಬಿಲೆಂಟ್ಸ್ ಕಾರ್ಖಾನೆ ನೌಕರನನಲ್ಲಿ ಪತ್ತೆ. ಮಾರ್ಚ್ 27 ನಂಜನಗೂಡು ರೆಡ್​ಜೋನ್​. ಮಾರ್ಚ್ 28ರಂದು 5 ಮಂದಿಗೆ ಪಾಸಿಟಿವ್ ಪತ್ತೆ. ಕೊರೋನಾ ಪಾಸಿಟಿವ್ 8ಕ್ಕೆ ಏರಿಕೆ. 5 ಮಂದಿ ಜುಬಿಲೆಂಟ್ಸ್ ಕಾರ್ಖಾನೆ ಸಂಪರ್ಕಿತ ವ್ಯಕ್ತಿಗಳು. ಮಾರ್ಚ್ 30ಕ್ಕೆ 4 ಮಂದಿಗೆ ಪಾಸಿಟಿವ್. ಜುಬಿಲೆಂಟ್ಸ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳು. ಮೈಸೂರಿನಲ್ಲಿ 12ಕ್ಕೇರಿದ ಪಾಸಿಟಿವ್ ಪ್ರಕರಣ. ಮಾರ್ಚ್ 31ಕ್ಕೆ 2 ಪಾಸಿಟಿವ್ ಪ್ರಕರಣ ಪತ್ತೆ. ಜುಬಿಲೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ತಕ್ತಿಗಳು. 14ಕ್ಕೇರಿದ ಮೈಸೂರಿನ ಪಾಸಿಟಿವ್ ಪ್ರಕರಣ. ಏಪ್ರಿಲ್ 1ರಂದು 5 ಪಾಸಿಟಿವ್ ಪ್ರಕರಣ ಪತ್ತೆ. ಜುಬಿಲೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳು. 19ಕ್ಕೇರಿದ ಪಾಸಿಟಿವ್ ಸೋಂಕಿತರ ಸಂಖ್ಯೆ. ಏಪ್ರಿಲ್ 2ಕ್ಕೆ 2 ಪಾಸಿಟಿವ್ ಪ್ರಕರಣ ಪತ್ತೆ . ಜುಬಿಲೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿಗಳು. 21ಕ್ಕೇರಿದ ಪಾಸಿಟಿವ್ ಪ್ರಕರಣ.

ಏಪ್ರಿಲ್ 4ಕ್ಕೆ 7 ಪಾಸಿಟಿವ್ ಪ್ರಕರಣ ಪತ್ತೆ. 5 ಮಂದಿ ದೆಹಲಿ ನಿಜಾಮುದ್ದೀನ್ ಸಂಬಂಧಿತ ವ್ಯಕ್ತಿ. 2 ಮಂದಿ ಜುಬಿಲೆಂಟ್ ಕಾರ್ಖಾನೆ ನೌಕರರ ಸಂಪರ್ಕಿತ ವ್ಯಕ್ತಿ. 28ಕ್ಕೇರಿದ ಮೈಸೂರು ಪಾಸಿಟಿವ್ ಪ್ರಕರಣಗಳು. ಏಪ್ರಿಲ್ 6ರಂದು 7 ಪಾಸಿಟಿವ್ ಪ್ರಕರಣ ಪತ್ತೆ. 3 ದೆಹಲಿ ಸಂಬಂಧಿತ ವ್ಯಕ್ತಿಗಳು. 2 ಜುಬುಲೆಂಟ್ ಕಾರ್ಖಾನೆ ನೌಕರರ ಸಂಬಂಧಿತ ವ್ಯಕ್ತಿಗಳು. 1 ದುಬೈನಿಂದ ಬಂದಿದ್ದ ವ್ಯಕ್ತಿ. 1 ವ್ಯಕ್ತಿಯ ಮೂಲ ಪತ್ತೆಯಾಗಿಲ್ಲ. ಏಪ್ರಿಲ್ 7 ರಂದು ಪಿ-20 ದುಬೈನಿಂದ ಬಂದಿದ್ದ ಮೊದಲ ಮೈಸೂರಿನ ಸೋಂಕಿತ ಆಸ್ಪತ್ರೆಯಿಂದ ಡಿಸ್ವಾರ್ಜ್. 18 ದಿನಗಳ ಕಾಲ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ವಾರ್ಜ್. 34 ಕ್ಕೇ ಆಕ್ಟಿವ್ ಸೋಂಕಿತರ ಪ್ರಕರಣ. ಏಪ್ರಿಲ್ 9ರಂದು 2 ಪಾಸಿಟಿವ್ ಪ್ರಕರಣ. ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತ ವ್ಯಕ್ತಿಗಳಿಗೆ ಸೋಂಕು ಧೃಡ. 37 ಕ್ಕೇ ಏರಿದ ಮೈಸೂರು ಕೊರೊನಾ ಪಾಸಿಟಿವ್ ಪ್ರಕರಣಗಳು. ಓರ್ವ ಡಿಸ್ವಾರ್ಜ್ ಸೇರಿ 36 ಆಕ್ಟಿವ್ ಪಾಸಿಟಿವ್ ಪ್ರಕರಣ.

ಏಪ್ರಿಲ್ 10ರಂದು ಮತ್ತೆ 5 ಮಂದಿಯಲ್ಲಿ ಪಾಸಿಟಿವ್ ಪ್ರಕರಣ ಪತ್ತೆ. ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತ ವ್ಯಕ್ತಿಗಳಿಗೆ ಸೋಂಕು ದೃಢ. ಒಟ್ಟು 42ಕ್ಕೆರಿದ ಮೈಸೂರು ಸೋಂಕಿತರ ಸಂಖ್ಯೆ. ಆಕ್ಟಿವ್ ಸೋಂಕಿತ ಪ್ರಕರಣ 41. ಏಪ್ರಿಲ್ 10ರ ಸಂಜೆ ಎರಡನೆ ಸೋಂಕಿತ ಡಿಸ್ವಾರ್ಜ್. ಜುಬಿಲೆಂಟ್ ಕಾರ್ಖಾನೆ ಮೊದಲ ಸೋಂಕಿತ ಡಿಸ್ವಾರ್ಜ್. ಡಿಸ್ವಾರ್ಜ್ ಆದ ಸೋಂಕಿತನಿಂದ ಜಿಲ್ಲಾಡಳಿತ ಧನ್ಯವಾದ ತಿಳಿಸಿ ಪತ್ರ. ಏಪ್ರಿಲ್ 10ರಂದು ಸಂಜೆ ಆಕ್ಟಿವ್ ಪಾಸಿಟಿವ್ ಪ್ರಕರಣ 40ಕ್ಕೆ ಇಳಿಕೆ. ಏಪ್ರಿಲ್ 11ರಂದು ಮತ್ತೆ 5 ಪಾಸಿಟಿವ್ ಪ್ರಕರಣ ಪತ್ತೆ. 47ಕ್ಕೇರಿದ ಮೈಸೂರು ಕೊರೋನಾ ಪಾಸಿಟಿವ್ ಪ್ರಕರಣಗಳು. 5 ಮಂದಿಯೂ ಜುಬಿಲೆಂಟ್ ಕಾರ್ಖಾನೆ ನೌಕರರಿಗೆ ಸೋಂಕು ದೃಢ. ಆಕ್ಟಿವ್ ಕೊರೋನಾ ಪಾಸಿಟಿವ್ ಪ್ರಕರಣ 45ಕ್ಕೆ ಏರಿಕೆ. ಏಪ್ರಿಲ್ 12ರಂದು 7 ಮಂದಿ ಸೋಂಕಿತರು ಆಸ್ಪತ್ರೆಯಿಂದ ಡಿಸ್ವಾರ್ಜ್. 6 ಮಂದಿ ಜುಬಿಲೆಂಟ್ ಕಾರ್ಖಾನೆ ನೌಕರರು 1 ದುಬೈನಿಂದ ಬಂದಿದ್ದ ವ್ಯಕ್ತಿ ಡಿಸ್ವಾರ್ಜ್. 38ಕ್ಕೇ ಇಳಿದ ಮೈಸೂರು ಕೊರೋನಾ ಆಕ್ಟಿವ್ ಪ್ರಕರಣ. ಏಪ್ರಿಲ್ 12ರಂದು ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆ. ಮೈಸೂರಿನಲ್ಲಿ 48ಕ್ಕೆ ಏರಿಕೆಯಾದ ಕೊರೋನಾ ಪಾಸಿಟಿವ್ ಪ್ರಕರಣಗಳು. ಆಕ್ಟಿವ್ ಕೊರೋನಾ ಪಾಸಿಟಿವ್ ಪ್ರಕರಣ 39ಕ್ಕೆ ಏರಿಕೆ.

ಏಪ್ರಿಲ್ 13ರಂದು ಮತ್ತೊಬ್ಬ ಸೋಂಕಿತ ಡಿಸ್ವಾರ್ಜ್. ಜುಬಿಲೆಂಟ್ ಕಾರ್ಖಾನೆ ನೌಕರ ಡಿಸ್ವಾರ್ಜ್. 38ಕ್ಕೆ ಇಳಿಕೆಯಾದ ಮೈಸೂರು ಕೊರೋನಾ ಆಕ್ಟಿವ್ ಪ್ರಕರಣ. ಏಪ್ರಿಲ್ 14ರಂದು ಇಬ್ಬರು ಸೋಂಕಿತರು ಆಸ್ಪತ್ರೆಯಿಂದ ಡಿಸ್ವಾರ್ಜ್. ಮೈಸೂರಿನಲ್ಲಿ 36ಕ್ಕೇ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಒಟ್ಟು 12 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್. ಆಸ್ಪತ್ರೆಯಿಂದ ಡಿಸ್ವಾರ್ಜ್ ಆದ ಸೋಂಕಿತರ ವಿಡಿಯೋ ಬಿಡುಗಡೆ ಮಾಡಿದ ಜಿಲ್ಲಾಡಳಿತ. ಏಪ್ರಿಲ್ 15 ರಂದು ಮತ್ತೆ 10 ಮಂದಿಗೆ ಸೋಂಕು ದೃಢ. ಜುಬಿಲೆಂಟ್ ಕಾರ್ಖಾನೆಯ 9 ಮಂದಿ ಹಾಗೂ ಉಸಿರಾಟದ ಸಮಸ್ಯೆ ಇದ್ದ ಒಬ್ಬರಿಗೆ ಸೋಂಕು ದೃಢ. ಜುಬಿಲೆಂಟ್, ತಬ್ಲಿಘಿಗಳು ಅಥವಾ ದುಬೈನಿಂದ ಬಂದವರ ಸಂಪರ್ಕ ಇಲ್ಲದ 72 ವರ್ಷದ ವೃದ್ದನಿಗೆ ಸೋಂಕು.

ಹೊಸ 10 ಪ್ರಕರಣದಿಂದ 58ಕ್ಕೇರಿದ ಮೈಸೂರು ಪಾಸಿಟಿವ್ ಕೇಸ್. ಮೈಸೂರಿನಲ್ಲಿ ಏಪ್ರಿಲ್ 15ರಂದು 46 ಆಕ್ಟಿವ್ ಪಾಸಿಟಿವ್ ಕೇಸ್. ಏಪ್ರಿಲ್ 16ರಂದು 3 ಪಾಸಿಟಿವ್ ಪ್ರಕರಣ ಪತ್ತೆ. 61ಕ್ಕೆ ಏರಿದ ಪಾಸಿಟಿವ್ ಮೈಸೂರು ಪ್ರಕರಣಗಳು. ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತ 3 ವ್ಯಕ್ತಿಗಳಿಗೆ ಸೋಂಕು. ಕಾರ್ಖಾನೆಯ 2 ನೌಕರರು ಹಾಗೂ ಓರ್ವ ನೌಕರನ ಪತ್ನಿಗೆ ಸೋಂಕು ದೃಢ. ಆಕ್ಟಿವ್ ಕೇಸ್​ಗಳು 49ಕ್ಕೆ ಏರಿಕೆ. ಏಪ್ರಿಲ್ 17 ರಂದು ಮತ್ತೆ 12 ಕೇಸ್ ಪಾಸಿಟಿವ್ ಕೇಸ್ ಪತ್ತೆ. 73ಕ್ಕೆ ಏರಿದ ಮೈಸೂರು ಪಾಸಿಟಿವ್ ಪ್ರಕರಣಗಳು. ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತ 11 ಮಂದಿಗೆ ಸೋಂಕು. 72 ವರ್ಷದ ವೃದ್ದನಿಂದ ಮಹಿಳೆಗೆ ಸೋಂಕು. ಮೈಸೂರಿನಲ್ಲಿ ಒಟ್ಟು 61ಕ್ಕೆ ಏರಿದ ಆಕ್ಟಿವ್ ಪಾಸಿಟಿವ್ ಪ್ರಕರಣಗಳು. ಏಪ್ರಿಲ್ 17 ರಂದು ಓರ್ವ ಸೋಂಕಿತ ಡಿಸ್ವಾರ್ಜ್. 60ಕ್ಕಿಳಿದ ಕೊರೋನಾ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ ಒಟ್ಟು 13 ಮಂದಿ ಡಿಸ್ವಾರ್ಜ್. ಏಪ್ರಿಲ್ 18ರಂದು 7 ಮಂದಿ ಪಾಸಿಟಿವ್ ಪತ್ತೆ. ಮೈಸೂರಿನಲ್ಲಿ 80ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ. ಆಕ್ಟಿವ್ ಕೇಸ್ 67ಕ್ಕೆ ಏರಿಕೆ.

ಏಪ್ರಿಲ್ 18ರ ಸಂಜೆ 9 ಮಂದಿ ಡಿಸ್ವಾರ್ಜ್. ಮೈಸೂರಿನಲ್ಲಿ 58ಕ್ಕೆ ಇಳಿದ ಆಕ್ಟಿವ್ ಕೇಸ್​ಗಳು. ಒಟ್ಟು 22 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್. ಏಪ್ರಿಲ್ 19ರಂದು ಮತ್ತೆ 4 ಪಾಸಿಟಿವ್ ಕೇಸ್ ಪತ್ತೆ. 84ಕ್ಕೆ ಏರಿದ ಕೊರೋನಾ ಪಾಸಿಟಿವ್ ಕೇಸ್​ಗಳು. 2 ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತ ವ್ಯಕ್ತಿಗಳು. 2 ತಬ್ಲಿಘಿಗಳ ಸಂಪರ್ಕದಿಂದ ಸೋಂಕು ದೃಢ. ಆಕ್ಟಿವ್ ಕೇಸ್​ಗಳು 62ಕ್ಕೆ ಏರಿಕೆ.ಏಪ್ರಿಲ್ 21ರಂದು ಮತ್ತೆ 2 ಕೊರೋನಾ ಪಾಸಿಟಿವ್ ಕೇಸ್ ಪತ್ತೆ. 86ಕ್ಕೆ ಏರಿಕೆಯಾದ ಕೊರೋನಾ ಸೋಂಕಿತರ ಸಂಖ್ಯೆ. ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತರ ಇಬ್ಬರಿಗೆ ಸೋಂಕು ದೃಢ. ಆಕ್ಟಿವ್ ಪಾಸಿಟಿವ್ ಕೇಸ್ 62ಕ್ಕೆ ಏರಿಕೆ. ಏಪ್ರಿಲ್ 21 ಸಂಜೆ 7 ಮಂದಿ ಕೊರೋನಾ ಸೋಂಕಿತರು ಡಿಸ್ವಾರ್ಜ್. 55ಕ್ಕೆ ಇಳಿದ ಕೊರೋನಾ ಆಕ್ಟಿವ್ ಸೋಂಕಿತರ ಸಂಖ್ಯೆ. ಒಟ್ಟು ಮೈಸೂರಿನಲ್ಲಿ 31 ಮಂದಿ ಡಿಸ್ವಾರ್ಜ್.

ಏಪ್ರಿಲ್ 22ರಂದು ಮತ್ತೆ 2 ಕೊರೋನಾ ಪಾಸಿಟಿವ್ ಪತ್ತೆ. 88ಕ್ಕೆ ಏರಿಕೆಯಾದ ಕೊರೋನಾ ಸೋಂಕಿತರ ಸಂಖ್ಯೆ. ಆಕ್ಟಿವ್ ಸೋಂಕಿತರ ಸಂಖ್ಯೆ 57ಕ್ಕೆಏರಿಕೆ. ಏಪ್ರಿಲ್ 22ರಂದು ಸಂಜೆ 2 ಕೊರೋನಾ ಸೋಂಕಿತರು ಡಿಸ್ವಾರ್ಜ್. 55ಕ್ಕೆ ಇಳಿದ ಕೊರೋನಾ ಆಕ್ಟಿವ್ ಕೇಸ್. ಒಟ್ಟು ಮೈಸೂರಿಲ್ಲಿ 33 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್. ಏಪ್ರಿಲ್ 24ರಂದು 1 ಸೋಂಕಿತ ಆಸ್ಪತ್ರೆಯಿಂದ ಡಿಸ್ವಾರ್ಜ್. 54ಕ್ಕೆ ಇಳಿದ ಆಕ್ಟಿವ್ ಕೊರೋನಾ ಪಾಸಿಟಿವ್ ಸೋಂಕಿತರ ಸಂಖ್ಯೆ. ಒಟ್ಟು ಮೈಸೂರಿನಲ್ಲಿ ಡಿಸ್ವಾರ್ಜ್ ಆದವರ ಸಂಖ್ಯೆ 34ಕ್ಕೆ ಏರಿಕೆ. ಏಪ್ರಿಲ್ 25ರಂದು 1 ಪಾಸಿಟಿವ್ ಕೇಸ್ ಪತ್ತೆ. ನಂಜನಗೂಡು ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತ ಮಹಿಳೆಗೆ ಸೋಂಕು. 89ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ ಆಕ್ಟಿವ್ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ. ಏಪ್ರಿಲ್ 25ರ ಸಂಜೆ 4 ಮಂದಿ ಕೊರೋನಾ ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ 51ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ ಒಟ್ಟು ಆಸ್ಪತ್ರೆಯಿಂದ ಡಿಸ್ವಾರ್ಜ್ ಆದವರ ಸಂಖ್ಯೆ 38ಕ್ಕೆ ಏರಿಕೆ.

ಏಪ್ರಿಲ್ 27 ರಂದು 5 ಮಂದಿ ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ 46ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ ಒಟ್ಟು ಡಿಸ್ವಾರ್ಜ್ ಆದವರು 43 ಮಂದಿ. ತಬ್ಲಿಘಿ ಕೇಸ್ ಮೊದಲ ಸೋಂಕಿತ ಡಿಸ್ವಾರ್ಜ್. ಏಪ್ರಿಲ್ 28 ರಂದು 8 ಮಂದಿ ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ 38ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ ಒಟ್ಟು ಡಿಸ್ವಾರ್ಜ್ ಆದವರ ಸಂಖ್ಯೆ 51ಕ್ಕೆ ಏರಿಕೆ. ಏಪ್ರಿಲ್ 29 ರ ಸಂಜೆ 1 ಪಾಸಿಟಿವ್ ಕೇಸ್ ಪತ್ತೆ. 90ಕ್ಕೆ ಏರಿದ ಮೈಸೂರು ಪಾಸಿಟಿವ್ ಸೋಂಕಿತರ ಸಂಖ್ಯೆ. ಜುಬಿಲೆಂಟ್ ಕಾರ್ಖಾನೆ ಸಂಪರ್ಕಿತ ವ್ಯಕ್ತಿಗೆ ಸೋಂಕು. ಮೈಸೂರಿನಲ್ಲಿ 39ಕ್ಕೆ ಏರಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಏಪ್ರಿಲ್ 29 ರ ಸಂಜೆ 7 ಮಂದಿ ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ 32ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ ಒಟ್ಟು ಡಿಸ್ವಾರ್ಜ್ ಆದವರ ಸಂಖ್ಯೆ 58ಕ್ಕೆ ಏರಿಕೆ. ಏಪ್ರಿಲ್ 30 ರಂದು 7 ಮಂದಿ ಸೋಂಕಿತರು ಡಿಸ್ವಾರ್ಜ್. ಬೆಳಗ್ಗೆ 4 ಮಂದಿ ಸಂಜೆ 3 ಮಂದಿ ಡಿಸ್ವಾರ್ಜ್. ಮೈಸೂರಿನಲ್ಲಿ 25ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ.

ಮೈಸೂರಿನಲ್ಲಿ 65ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 1 ರಂದು 1  ಸೋಂಕಿತ ಡಿಸ್ವಾರ್ಜ್. ಮೈಸೂರಿನಲ್ಲಿ 24ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ 66ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 2 ರಂದು 3 ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ 21ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ 69ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 3 ರಂದು 3 ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ 13ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. 77ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 4 ರಂದು 2 ಸೋಂಕಿತರು ಡಿಸ್ವಾರ್ಜ್. 11ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. 79ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 5 ರಂದು 3 ಸೋಂಕಿತರು ಡಿಸ್ವಾರ್ಜ್. 8ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. 82ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 6 ರಂದು 1 ಸೋಂಕಿತ ಡಿಸ್ವಾರ್ಜ್. 7ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. 83ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 8 ರಂದು 2 ಸೋಂಕಿತರು ಡಿಸ್ವಾರ್ಜ್. 5ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. 85ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ.

ಇದನ್ನು ಓದಿ: ಅತ್ತ 15 ತಿಂಗಳ ಮಗುವಿನ ಕರುಳಿನ ಕರೆ; ಇತ್ತ ರೋಗಿಗಳ ಸೇವೆ – ಕೊರೋನಾ ವಾರಿಯರ್ ದಾದಿಯ ಮನಕಲಕುವ ಕಥೆ

ಮೇ 9 ರಂದು 1 ಸೋಂಕಿತ ಡಿಸ್ವಾರ್ಜ್. ಮೈಸೂರಿನಲ್ಲಿ 4 ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. 86ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ. ಮೇ 13 ರಂದು 2 ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ 2ಕ್ಕೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ 88ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆಮೇ 15 ರಂದು 2 ಸೋಂಕಿತರು ಡಿಸ್ವಾರ್ಜ್. ಮೈಸೂರಿನಲ್ಲಿ ಸೊನ್ನೆಗೆ ಇಳಿದ ಆಕ್ಟಿವ್ ಸೋಂಕಿತರ ಸಂಖ್ಯೆ. ಮೈಸೂರಿನಲ್ಲಿ 90ಕ್ಕೆ ಏರಿದ ಡಿಸ್ವಾರ್ಜ್ ಆದವರ ಸಂಖ್ಯೆ.

ಜಿಲ್ಲೆಯಲ್ಲಿ ಜುಬಿಲೆಂಟ್ ಸಂಬಂಧ 74 ಪ್ರಕರಣ, ಇದ್ದರೆ, ತಬ್ಲಿಘಿಗಳ ಸಂಪರ್ಕದಿಂದ 10 ಪ್ರಕರಣ ದಾಖಲಾಗಿತ್ತು. ದುಬೈನಿಂದ ಬಂದವರು 3 ಉಸಿರಾಟದ ಸಮಸ್ಯೆಯ ಮೂರು ಕೇಸ್​ಗಳು ದಾಖಲಾಗಿದ್ದವು. ಮೈಸೂರು ಜಿಲ್ಲೆಯ 90 ಪಾಸಿಟಿವ್ ಕೇಸ್‌ಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್‌ ಆಗಿದ್ದು, ಒಂದೇ ಒಂದು ಕೊರೋನಾ ಸಾವು ಸಂಭವಿಸದೆ ಇರೋದು ಜಿಲ್ಲೆಗೆ ಹೆಮ್ಮೆ ತಂದಿದೆ.
First published: