ಮೈಸೂರಿನಲ್ಲಿ ವೈರಸ್ ಶಂಕೆಯಲ್ಲಿ ನೋಟು ಸುಟ್ಟುಹಾಕಿದ ಜನರು

ಮೈಸೂರಿನಲ್ಲಿ ಈಗ ಜನರು ಕೊರೋನಾ ವಿರುದ್ಧ ಅಕ್ಷರಶಃ ಭಯಭೀತರಾಗಿದ್ದಾರೆ. ನಜರಾಬಾದ್​ನಲ್ಲಿ ನೋಟು ಸುಟ್ಟ ಘಟನೆಯೇ ಇದಕ್ಕೆ ಸಾಕ್ಷಿ.

news18-kannada
Updated:April 18, 2020, 3:46 PM IST
ಮೈಸೂರಿನಲ್ಲಿ ವೈರಸ್ ಶಂಕೆಯಲ್ಲಿ ನೋಟು ಸುಟ್ಟುಹಾಕಿದ ಜನರು
ಮೈಸೂರಿನಲ್ಲಿ ನೋಟು ಸುಡುತ್ತಿರುವ ಜನರು
  • Share this:
ಮೈಸೂರು(ಏ. 18): ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ ಎತ್ತದೇ ಸುಮ್ಮನಿರಲು ಸಾಧ್ಯವಿಲ್ಲ. ಅಂಥದ್ದರಲ್ಲಿ 100 ರೂ ನೋಟು ಕೆಳಗೆ ಬಿದ್ದರೆ ಜನರು ತೆಗೆದುಕೊಳ್ಳದೆ ಸುಮ್ಮನಿರುತ್ತಾರೆಯೇ? ಈಗ ಕಾಲ ಬದಲಾಗಿದೆ. ಮೈಸೂರಿನ ಜನರು ಬೀದಿಯಲ್ಲಿ ಬಿದ್ದ ನೋಟು ಕಂಡು ಹೌಹಾರುತ್ತಾರೆ. ನಜರಾಬಾದ್​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿ ರಸ್ತೆಯಲ್ಲಿ ಬಿದ್ದಿದ್ದ 100 ರೂ ನೋಟನ್ನೇ ಜನರು ಸುಟ್ಟುಹಾಕಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಜರಾಬಾದ್​ನ ಮೆಡಿಕಲ್ ಸ್ಟೋರ್​ವೊಂದರ ಮುಂಭಾಗ ಈ ನೋಟು ಬಿದ್ದಿತ್ತು. ಅದನ್ನ ನೋಡಿದ ಜನರಿಗೆ ಈ ನೋಟಿಗೆ ಯಾರೋ ವೈರಸ್ ಅಂಟಿಸಿರುವ ಅನುಮಾನ. ಸ್ಯಾನಿಟೈಸರ್ ಹಾಕಿ ನೋಡಿದರೂ ಸಮಾಧಾನವಾಗಲಿಲ್ಲ. ಕೊನೆಗೆ ಬೆಂಕಿ ಹಚ್ಚು ನೋಟನ್ನೇ ಸುಟ್ಟುಹಾಕಿಬಿಟ್ಟರು.

ಅರಮನೆ ನಗರಿಯಲ್ಲಿ ಈಗ ಕೊರೋನಾ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಮೈಸೂರಿನಲ್ಲಿ ಜುಬಿಲೆಂಟ್ ಕಾರ್ಖಾನೆ ಕಾರ್ಮಿಕರು ಮತ್ತು ತಬ್ಲಿಘಿ ಜಮಾತ್ ಸದಸ್ಯರಿಗೆ ಮಾತ್ರ ಬಹುತೇಕ ಸೀಮಿತವಾಗಿದ್ದ ಸೋಂಕು ಈಗ ಬೇರೆಯವರಲ್ಲೂ ವ್ಯಾಪಿಸಿರುವುದು ಗೋಚರವಾಗುತ್ತಿದೆ. ಮೈಸೂರಿನಲ್ಲಿ ಈಗ ಜನರು ಕೊರೋನಾ ವಿರುದ್ಧ ಅಕ್ಷರಶಃ ಭಯಭೀತರಾಗಿದ್ದಾರೆ. ನಜರಾಬಾದ್​ನಲ್ಲಿ ನೋಟು ಸುಟ್ಟ ಘಟನೆಯೆ ಇದಕ್ಕೆ ಸಾಕ್ಷಿ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಭೀಕರ ಮಳೆ; ಬೆಳೆ, ಜಾನುವಾರು ಹಾನಿಯಿಂದ ಕಂಗೆಟ್ಟ ರೈತರು

ಇದೇ ವೇಳೆ, ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಮಾಜಿ ಮೇಯರ್​ವೊಬ್ಬರಿಗೆ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ಧಾರೆ. ಮೈಸೂರಿನ ಮಾಜಿ ಮೇಯರ್ ಆಯೂಬ್ ಖಾನ್ ಹೀಗೆ ಪೊಲೀಸರಿಂದ ಬುದ್ಧಿ ಹೇಳಿಸಿಕೊಂಡವರು. ಉದಯಗಿರಿ ಪ್ರದೇಶದಲ್ಲಿ ನಿರ್ಬಂಧಿತ ಮಹದೇವಪುರ ಮುಖ್ಯ ರಸ್ತೆಯಲ್ಲಿ ಆಯೂಬ್ ಖಾನ್ ಮಾಸ್ಕ್ ಧರಿಸದೇ ಅಡ್ಡಾಡುತ್ತಿದ್ದುದನ್ನು ಕಂಡ ಪೊಲೀಸರು, ಅವರನ್ನು ತಡೆದು ಮಾಸ್ಕ್ ಹಾಕಿಕೊಳ್ಳುವಂತೆ ತಾಕೀತು ಮಾಡಿದರು. ಅದಾದ ಬಳಿಕ ಮಾಜಿ ಮೇಯರ್ ಅವರು ವಾಪಸ್ ಹೊರಟುಹೋದರು.

ಇನ್ನು, ಮೈಸೂರಿನಲ್ಲಿ ಸ್ಕೇಟಿಂಗ್ ತಂಡವೊಂದರಿಂದ ಕೊರೋನಾ ವಿರುದ್ಧ ವಿಭಿನ್ನ ಜಾಗೃತಿ ನಡೆಯಿತು. ಫ್ರೀ ರೈಡ್ ಎಂಬ ತಂಡದ ಸದಸ್ಯರು, ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂಬ ಸಂದೇಶದ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹರಿಬಿಟ್ಟಿದ್ಧಾರೆ. ಮನೆಯಲ್ಲೇ ಸ್ಕೇಟಿಂಗ್ ಆಡುತ್ತಾ ಈ ತಂಡದ ಪುಟಾಣಿ ಸದಸ್ಯರು ಈ ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಅಂತರ ಪಾಲಿಸಿ; ಸದಾ ಕೈ ತೊಳೆಯಿರಿ, ಕೊರೋನಾ ಸೋಂಕಿನ ಸರಣಿ ಮುರಿಯೋಣ ಇತ್ಯಾದಿ ಸಂದೇಶಗಳು ಈ ವಿಡಿಯೋಗಳಲ್ಲಿವೆ.

First published: April 18, 2020, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading