ರಾಜ್ಯ ರಾಜಧಾನಿಯನ್ನೇ ಓವರ್ ಟೇಕ್ ಮಾಡಿದ ಮೈಸೂರು; ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದ ಕುಖ್ಯಾತಿ

ಬೆಂಗಳೂರನ್ನೂ ಮೀರಿಸಿರುವ ಮೈಸೂರು ಆಕ್ಟೀವ್ ಕೇಸ್ ಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದ ಕುಖ್ಯಾತಿಗೆ ಒಳಗಾಗಿದೆ. ಹೀಗಾಗಿ ಜಿಲ್ಲೆಯ ಮೇಲೆ ಸಾಕಷ್ಟು ನಿಗಾ ವಹಿಸಲಾಗಿದೆ. ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಅಂತಹ ಪ್ರದೇಶಗಳ ಸುತ್ತಾ ನಾಕಾ ಬಂದಿ ಸ್ಥಾಪಿಸಿ ಬಿಗಿ ಬಂದೋಬಸ್ತ್‌ ನೀಡಲಾಗುತ್ತಿದೆ.

news18-kannada
Updated:April 16, 2020, 1:10 PM IST
ರಾಜ್ಯ ರಾಜಧಾನಿಯನ್ನೇ ಓವರ್ ಟೇಕ್ ಮಾಡಿದ ಮೈಸೂರು; ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದ ಕುಖ್ಯಾತಿ
ಮೈಸೂರಿನಲ್ಲಿ ಕೊರೋನಾ ಬಗ್ಗೆ ಅರಿವು ಮೂಡಿಸುತ್ತಿರುವ ಕಲಾವಿದರು.
  • Share this:
ಬೆಂಗಳೂರು (ಏಪ್ರಿಲ್ 16); ಕೊರೋನಾ ಪಾಸಿಟಿವ್‌ ಕೇಸ್‌ಗಳ ಪೈಕಿ ಸಾಂಸ್ಕೃತಿಕ ನಗರಿ ಮೈಸೂರು, ರಾಜ್ಯ ರಾಜಧಾನಿ ಬೆಂಗಳೂರನ್ನೇ ಮೀರಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಇನ್ನೂ ನಂಜನಗೂಡಿನ ನಂಜು ಮೈಸೂರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ.

ಬೆಂಗಳೂರಿನಲ್ಲಿ ಒಟ್ಟು ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 71. ಈ ಪೈಕಿ 35 ಜನರನ್ನು ಗುಣಮುಖರನ್ನಾಗಿಸಿ ಮನೆಗೆ ಕಳುಹಿಸಲಾಗಿದೆ, ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರಸ್ತುತ ಆಕ್ಟೀವ್ ಆಗಿರುವ ಪ್ರಕರಣಗಳ ಸಂಖ್ಯೆ 34 ಮಾತ್ರ.

ಆದರೆ, ಮೈಸೂರಿನಲ್ಲಿ 58 ಕೊರೋನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿದ್ದು, 12 ಜನರನ್ನು ಡಿಸ್ಜಾರ್ಜ್‌ ಮಾಡಲಾಗಿದೆ. ಹೀಗಾಗಿ ಆಕ್ಟೀವ್ ಕೊರೋನಾ ಪೀಡಿತರ ಸಂಖ್ಯೆ 46. ಅಸಲಿಗೆ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಮೈಸೂರಿನಲ್ಲಿ ಕೊರೋನಾ ಸೋಂಕು ತಡವಾಗಿ ಪತ್ತೆಯಾಗಿತ್ತು. ನಂಜನಗೂಡಿನಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಆದರೆ, ಅಲ್ಲಿಂದ ಅತ್ಯಂತ ವೇಗವಾಗಿ ಎಲ್ಲೆಡೆ ಹರಡುತ್ತಿದೆ.

ಇದೀಗ ಬೆಂಗಳೂರನ್ನೂ ಮೀರಿಸಿರುವ ಮೈಸೂರು ಆಕ್ಟೀವ್ ಕೇಸ್ ಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದ ಕುಖ್ಯಾತಿಗೆ ಒಳಗಾಗಿದೆ. ಹೀಗಾಗಿ ಜಿಲ್ಲೆಯ ಮೇಲೆ ಸಾಕಷ್ಟು ನಿಗಾ ವಹಿಸಲಾಗಿದೆ. ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಅಂತಹ ಪ್ರದೇಶಗಳ ಸುತ್ತಾ ನಾಕಾ ಬಂದಿ ಸ್ಥಾಪಿಸಿ ಬಿಗಿ ಬಂದೋಬಸ್ತ್‌ ನೀಡಲಾಗುತ್ತಿದೆ.

 

ಇದನ್ನೂ ಓದಿ : ಚೀನಾದಿಂದ ಭಾರತಕ್ಕೆ 6.5 ಲಕ್ಷ ರಾಪಿಡ್‌ ಟೆಸ್ಟಿಂಗ್ ಕಿಟ್‌ಗಳ ಆಮದು; ಕಳಪೆ ಗುಣಮಟ್ಟದ ಆರೋಪ
 
First published: April 16, 2020, 1:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading