News18 Make your own Mask ಅಭಿಯಾನಕ್ಕೆ ಮೈಸೂರಿನ ಕಂಠಿ ಗಾರ್ಮೆಂಟ್ಸ್‌ ಸಾಥ್‌; ಕಡಿಮೆ ಬೆಲೆಗೆ 10,000 ಮಾಸ್ಕ್‌ ಪೂರೈಕೆ

Make your Own Mask: ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ತಯಾರಿಸಿ, ಸಿಂಗಲ್ ಲೆಯರ್ 12ರೂ, ಡಬಲ್ ಲೆಯರ್ ಮಾಸ್ಕ್ 15ರೂಗೆ ಮಾರಟ ಮಾಡುತ್ತಿದ್ದಾರೆ. ಒಂದು ಲಕ್ಷ ಮಾಸ್ಕ್ ಹೊಲಿಯುವ ಗುರಿ ಹೊಂದಿರೋ ಕಂಠಿ ಗಾರ್ಮೆಂಟ್ಸ್‌ ಮಾಲೀಕ ದಯಾನಂದ್ ಸದ್ಯ 10 ಸಾವಿರ ಮಾಸ್ಕ್ ತಯಾರಿಸಿ ಪೂರೈಸಿದ್ದಾರೆ.

news18-kannada
Updated:April 22, 2020, 7:28 PM IST
News18 Make your own Mask ಅಭಿಯಾನಕ್ಕೆ ಮೈಸೂರಿನ ಕಂಠಿ ಗಾರ್ಮೆಂಟ್ಸ್‌ ಸಾಥ್‌; ಕಡಿಮೆ ಬೆಲೆಗೆ 10,000 ಮಾಸ್ಕ್‌ ಪೂರೈಕೆ
ಕಂಠಿ ಗಾರ್ಮೆಂಟ್ಸ್‌ ಮಾಲೀಕ ದಯಾನಂದ್.
  • Share this:
ಮೈಸೂರು (ಏಪ್ರಿಲ್ 22); ದೇಶದಲ್ಲಿ ಕೊರೋನಾ ವಿರುದ್ದ ಹೋರಾಡೋಕೆ ಅತ್ಯಗತ್ಯ ವಸ್ತುಗಳಲ್ಲಿ ಮಾಸ್ಕ್ ಸಹ ಒಂದು. ಅಂತ ಮಾಸ್ಕ್ ಅನ್ನ ನೀವೆ ಮನೆಯಲ್ಲಿ ತಯಾರಿಸಿಕೊಳ್ಳಿ ಅಂತ NEWS18 ಕನ್ನಡ MAKE YOUR OWN MASK ಅಭಿಯಾನ ಮಾಡುತ್ತಿದ್ದು, ನಮ್ಮ ಅಭಿಯಾನಕ್ಕೆ ಬೆಂಬಲವಾಗಿ ಮೈಸೂರಿನಲ್ಲಿ ಶಾಲಾ ಸಮವಸ್ತ್ರ ತಯಾರಿಸುತ್ತಿದ್ದ ಸಂಸ್ಥೆಯೊಂದು ಇದೀಗ ಮಾಸ್ಕ್ ತಯಾರಿಸಿ ಕಡಿಮೆ‌ ಬೆಲೆಗೆ ಲಭ್ಯವಾಗುವಂತೆ ಮಾಡಿದೆ.

ಮೈಸೂರಿನ ಕಂಠಿ ಯೂನಿಫಾರ್ಮ್ಸ್‌ ಗಾರ್ಮೆಂಟ್ಸ್‌ನಲ್ಲಿ ಕಳ‌ದೊಂದು ವಾರದಿಂದ ಮಾಸ್ಕ್ ತಯಾರಿಸುವ ಕೆಲಸ ನಡೆಯುತ್ತಿದೆ. ಉದಯಗಿರಿಯ ಮುಖ್ಯರಸ್ತೆಯಲ್ಲಿರೋ ಕಂಠಿ ಯೂನಿಫಾರ್ಮ್ಸ್ ಗಾರ್ಮೆಂಟ್ಸ್ ಇಷ್ಟು ಕೇವಲ ಶಾಲಾ ಸಮವಸ್ತ್ರ ಹಾಗೂ ಕಾಲೇಜು ಮತ್ತು ಪ್ರಮುಖ ಸಂಸ್ಥೆಗಳ ಸಮವಸ್ತ್ರಗಳು ಮಾತ್ರ ತಯಾರಾಗುತ್ತಿತ್ತು.

ಇತರೆ ಟೈಲರ್‌ಗಳಂತೆ ಬೇರೆ ಆರ್ಡ‌ರ್‌ಗಳನ್ನ ಇವರು ತಯಾರಿಸೋದೆ ಇಲ್ಲ, ಲಾಕ್‌ಡೌನ್ ಆದಾಗ ಕಂಠಿ ಗಾರ್ಮೆಂಟ್ಸ್ ಬಂದ್ ಆಗಿತ್ತು. 21 ದಿನಗಳ‌ಕಾಲ ಎಲ್ಲ ನೌಕರರಿಗೆ ರಜೆ ನೀಡಿದ್ದ ಮಾಲೀಕರು ಎರಡನೆ ಬಾರಿ ಲಾಕ್‌ಡೌನ್ ಆದಾಗ ಮಾಸ್ಕ್ ಮಾಡುವ ಚಿಂತನೆ ಮಾಡಿದರು. ತನ್ನ ಬಳಿ  ಕೆಲಸ ಮಾಡುವ 13 ಮಂದಿಯಲ್ಲಿ 5 ಮಂದಿಯನ್ನ‌ ಸಂಸ್ಥೆಗೆ ಕರೆಸಿಕೊಂಡು ಮಾಸ್ಕ್ ತಯಾರು ಮಾಡ್ತಿದ್ದಾರೆ.

ಪ್ರಮುಖವಾಗಿ ತನ್ನ ಬಳಿ ಇದ್ದ ಸಮವಸ್ತ್ರದ ಬಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮಾಸ್ಕ್ ತಯಾರಿಸುತ್ತಿರುವ ಸಂಸ್ಥೆಯ ಮಾಲೀಕ‌ ಧನಂಜಯ್  ಕೇವಲ 15ರೂಗೆ ಮಾಸ್ಕ್ ಮಾರಾಟ ಮಾಡ್ತಿದ್ದಾರೆ. ಲಾಕ್‌ಡೌನ್‌ನಿಂದ ತೊಂದರೆಯಾದ ಕೆಲಸಗಾರರಿಗೆ ಮನೆಯಲ್ಲೇ ಕೆಲಸ ನೀಡಿರುವ ಇವರು ಹೊಲಿಗೆ ಯಂತ್ರ ಇಲ್ಲದ 5 ಮಂದಿಗೆ ಮಾತ್ರ ಗಾರ್ಮೆಂಟ್ಸ್‌ನಲ್ಲಿ ವ್ಯವಸ್ಥೆ ಮಾಡಿ, ಉಳಿದ 8 ಮಂದಿಗೆ ಮನೆಯಲ್ಲೆ ಮಾಸ್ಕ್ ತಯಾರಿಸಲು ಹೇಳಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ತಯಾರಿಸಿ, ಸಿಂಗಲ್ ಲೆಯರ್ 12ರೂ, ಡಬಲ್ ಲೆಯರ್ ಮಾಸ್ಕ್ 15ರೂಗೆ ಮಾರಟ ಮಾಡುತ್ತಿದ್ದಾರೆ. ಒಂದು ಲಕ್ಷ ಮಾಸ್ಕ್ ಹೊಲಿಯುವ ಗುರಿ ಹೊಂದಿರೋ ಕಂಠಿ ಗಾರ್ಮೆಂಟ್ಸ್‌ ಮಾಲೀಕ ದಯಾನಂದ್ ಸದ್ಯ 10 ಸಾವಿರ ಮಾಸ್ಕ್ ತಯಾರಿಸಿ ಪೂರೈಸಿದ್ದಾರೆ.

ಎಲ್ಲೆಡೆ ದುಪ್ಪಟ್ಟು ಬೆಲೆಗೆ ಮಾಸ್ಕ್ ಮಾರಾಟ ಮಾಡ್ತಿರೋರಿಗೆ ಬ್ರೇಕ್ ಹಾಕಲು ಹಾಗೂ ಜನರಿಗೆ ಉತ್ತಮ‌ಗುಣಮಟ್ಟದ ಸುರಕ್ಷಿತವಾದ ಮಾಸ್ಕ್ ನೀಡಲು ಈ ಪ್ರಯತ್ನ ಮಾಡಿದ್ದು, ಬೇಡಿಕೆ ಹೆಚ್ಚಾದಂತೆ ಹೆಚ್ಚು ಮಾಸ್ಕ್ ತಯಾರಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. "ನನಗೆ ಲಾಭ ಬೇಡ, ಇದನ್ನ ನಂಬಿದವರ ಹೊಟ್ಟೆಪಾಡು ಜೀವನ ಮುಖ್ಯ. ಹಾಗಾಗಿ ಮಾಸ್ಕ್ ತಯಾರಿಸಿ ಜನರಿಗೆ ಅನುಕೂಲವಾಗಲು ಮಾಸ್ಕ್ ತಯಾರಿಸುತ್ತಿದ್ದೇವೆ. N-95 ಮಾಸ್ಕ್ ಕೂಡ 50ರೂ ಒಳಗೆ ತಯಾರಿಸಲು ರೂಪುರೇಷೆ‌ ಮಾಡಿದ್ದು ಅಗತ್ಯ ಮೆಟಿರಿಯಲ್ ಬಂದ ಕೂಡಲೇ ಮಾಸ್ಕ್ ತಯಾರಿ ಮಾಡುತ್ತೇವೆ" ಎಂಬುದು ದಯಾನಂದ್ ಅವರ ಅಭಿಲಾಷೆ.

ಇದನ್ನೂ ಓದಿ : Reliance Jio-Facebook Deal: ಫೇಸ್‌ಬುಕ್-ಜಿಯೋ ಒಪ್ಪಂದ ಭಾರತದ ಆರ್ಥಿಕತೆಯ ಬಲವಾದ ಸಂಕೇತ; ಆನಂದ್ ಮಹೀಂದ್ರಾ
First published: April 22, 2020, 5:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading