ಇಂದು ಮೈಸೂರಿನಲ್ಲಿ 5 ಮಂದಿಗೆ ಕೊರೋನಾ; ಕೋವಿಡ್​​-19 ಪೀಡಿತರ ಸಂಖ್ಯೆ 8ಕ್ಕೇರಿಕೆ

ಈಗಾಗಲೇ ನಂಜನಗೂಡಿನಲ್ಲಿ 1000 ಜನರ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ. ಇವರಲ್ಲಿ ಶೇ.8ರಷ್ಟು ಮಂದಿ ಐಸೋಲೇಷನ್ ಇರಿಸಲಾಗಿದೆ. ಉಳಿದವರನ್ನು 14 ದಿನಗಳ ಕಾಲ ಹೋಮ್ ಐಸೋಲೇಶನ್ ಮುಗಿಸಿದ್ದಾರೆ. ಒಟ್ಟು 59 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 56 ವ್ಯಕ್ತಿಗೆ ನೆಗೆಟಿವ್ ಬಂದಿದೆ.

news18-kannada
Updated:March 28, 2020, 11:07 PM IST
ಇಂದು ಮೈಸೂರಿನಲ್ಲಿ 5 ಮಂದಿಗೆ ಕೊರೋನಾ; ಕೋವಿಡ್​​-19 ಪೀಡಿತರ ಸಂಖ್ಯೆ 8ಕ್ಕೇರಿಕೆ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಮಾ.28): ಇಂದು ಮೈಸೂರಿನಲ್ಲಿ 5 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಮೊದಲಿಗೆ ನಂಜನಗೂಡಿನ ಔಷಧಿ ಉತ್ಪಾದನೆ ಕಂಪನಿಯಲ್ಲಿ ಗುಣಮಟ್ಟದ ಭರವಸೆ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ 35 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಈತನಿಂದಲೇ ಇತರೆ ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8ಕ್ಕೇರಿದೆ.

ಕಳೆದ ಮಾರ್ಚ್​ 21ನೇ ತಾರೀಕಿನಂದು ದುಬೈನಿಂದ ಮೈಸೂರಿಗೆ ಬಂದಿದ್ದ 35 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತರ ಮಾ.23ರಂದು ದುಬೈನಿಂದ ಮೈಸೂರಿಗೆ ಬಂದಿದ್ದ ಕೇರಳ ಮೂಲದ ವ್ಯಕ್ತಿಯಲ್ಲೂ ಕೊರೋನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ಇಬ್ಬರನ್ನೂ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆಯೇ ನಂಜನಗೂಡಿನಲ್ಲಿ ಕೆಲಸ ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿ ಕೊರೋನಾ ಬಂದಿದೆ. ಈತನಿಂದ ಮತ್ತೀಗ ಐವರಿಗೆ ಸೋಂಕು ತಗುಲಿದ್ದು, ಈಗ ಒಟ್ಟು 8 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಈಗಾಗಲೇ ನಂಜನಗೂಡಿನಲ್ಲಿ 1000 ಜನರ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ. ಇವರಲ್ಲಿ ಶೇ.8ರಷ್ಟು ಮಂದಿ ಐಸೋಲೇಷನ್ ಇರಿಸಲಾಗಿದೆ. ಉಳಿದವರನ್ನು 14 ದಿನಗಳ ಕಾಲ ಹೋಮ್ ಐಸೋಲೇಶನ್ ಮುಗಿಸಿದ್ದಾರೆ. ಒಟ್ಟು 59 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 56 ವ್ಯಕ್ತಿಗೆ ನೆಗೆಟಿವ್ ಬಂದಿದೆ.

ಇದನ್ನೂ ಓದಿ: ಇಂದು ರಾಜ್ಯದಲ್ಲಿ 12 ಕೋವಿಡ್​​-19 ಪಾಸಿಟಿವ್​​ ಕೇಸ್ ಪತ್ತೆ: 76ಕ್ಕೇರಿದ ಸೋಂಕಿತರ ಸಂಖ್ಯೆ ​

ಕರ್ನಾಟಕದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರೆದಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 12 ಕೋವಿಡ್​​-19 ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಆದ್ದರಿಂದಲೇ ಇಲ್ಲಿಯವರೆಗಿನ ಸೋಂಕಿತರ ಸಂಖ್ಯೆ 76ಕ್ಕೆ ಏರಿಯಾಗಿದೆ. ಈ ಪೈಕಿ ಹೆಚ್ಚು ಕೇಸುಗಳು ಬೆಂಗಳೂರಿನಲ್ಲೇ ಕಂಡು ಬಂದಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ.
First published: March 28, 2020, 11:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading