ಮೈಸೂರಿನಲ್ಲಿ ಹಕ್ಕಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ : ಜಿಲ್ಲಾಧಿಕಾರಿ ಅಭಿರಾಮ್​​​​​​ ಸ್ಪಷ್ಟನೆ

ಕೋಳಿ ಮಾಂಸ ಸೇವನೆಯಿಂದ ಕರೋನಾ ವೈರಸ್ ಹರಡುತ್ತದೆ ಎಂದು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಕೋಳಿ ಮಾಂಸ ಸೇವನೆಯಿಂದ ಕರೋನಾ ವೈರಸ್ ಹರಡುವುದಿಲ್ಲ  ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

news18-kannada
Updated:March 13, 2020, 3:00 PM IST
ಮೈಸೂರಿನಲ್ಲಿ ಹಕ್ಕಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ : ಜಿಲ್ಲಾಧಿಕಾರಿ ಅಭಿರಾಮ್​​​​​​ ಸ್ಪಷ್ಟನೆ
ಜಿಲ್ಲಾಧಿಕಾರಿ ಅಭಿರಾಮ್​​​ ಜಿ ಶಂಕರ್​​
  • Share this:
ಮೈಸೂರು(ಮಾ.13) : ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಇಲ್ಲ. ಇತ್ತೀಚೆಗೆ ಸಾವನ್ನಪ್ಪಿದ ಪಕ್ಷಿಗಳ ದೇಹದ ತುಣುಕುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪಕ್ಷಿಗಳ ಸಾವಿಗೆ ಹಕ್ಕಿಜ್ವರ ಕಾರಣವಲ್ಲ ಎಂಬುದು ದೃಢಪಟ್ಟಿದೆ ಎಂದು  ಜಿಲ್ಲಾಧಿಕಾರಿ ಅಭಿರಾಮ್​​​​​ ಜಿ ಶಂಕರ್​​ ಸ್ಪಷ್ಟಪಡಿಸಿದ್ದಾರೆ. 

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರಿನ ವಿದ್ಯಾರಣ್ಯರಣ್ಯಪುರಂ ಬಡಾವಣೆ ಹಾಗೂ ಹೆಬ್ಬಾಳ ಕೆರೆಯ ಬಳಿ ಇತ್ತೀಚೆಗೆ ಬೇರೆ ಕಾರಣಗಳಿಂದ ಪಕ್ಷಿಗಳು ಸಾವನ್ನಪ್ಪಿವೆ. ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕಲ್ಲಿಕೋಟೆ ಜಿಲ್ಲಾಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಕೋಳಿ ಮಾಂಸ ಸೇವನೆಯಿಂದ ಕರೋನಾ ವೈರಸ್ ಹರಡುತ್ತದೆ ಎಂದು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಕೋಳಿ ಮಾಂಸ ಸೇವನೆಯಿಂದ ಕರೋನಾ ವೈರಸ್ ಹರಡುವುದಿಲ್ಲ  ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸರ್ಕಾರದಿಂದ ಜಿಲ್ಲಾಧಿಕಾರಿಗೆ ವಿಶೇಷವಾದ ಅಧಿಕಾರ ನೀಡಿದ್ದಾರೆ. ಆದರೆ ಅದನ್ನ ಈವರೆಗೂ ಬಳಕೆ ಮಾಡಿಕೊಂಡಿಲ್ಲ. ಕೊರೋನಾ ಬರದಂತೆ ನಾವು ಎಲ್ಲ‌ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದ್ದೇವೆ‌ ಎಂದರು.

ಯಾವುದೇ ಒಂದು ರಸ್ತೆಯಲ್ಲಿ ಕೊರೋನಾ ಕಂಡು ಬಂದರು. ಕೂಡಲೇ ಆ ಸ್ಥಳ ಹಾಗು ಇಡೀ ಬಡಾವಣೆಯನ್ನ ಬಂದ್ ಮಾಡುತ್ತೇವೆ. ಸಂಪೂರ್ಣವಾಗಿ ಆ ಬಡಾವಣೆ ನಮ್ಮ ಸುಪರ್ದಿಗೆ ಪಡೆದುಕೊಳ್ಳುತ್ತೇವೆ. ಬಳಿಕ ಅಲ್ಲಿಯೇ ಯಾವುದೇ ಕಟ್ಟಡ ಅಥವಾ ಸರ್ಕಾರಿ ಕಟ್ಟಡ ಬಳಕೆ ಮಾಡಿಕೊಳ್ಳುತ್ತೇವೆ. ಅಲ್ಲಿಯೇ ಒಂದು ಐಸುಲೇಷನ್ ವಾರ್ಡ್ ನಿರ್ಮಾಣ ಮಾಡುತ್ತೇವೆ. ಅಲ್ಲಿರುವ ಯಾರು ಹೊರಗೆ ಹೋಗದಂತೆ ಉಪಯುಕ್ತವಾದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಕೊರೋನ ಭೀತಿ ನಡುವೆ ಹಕ್ಕಿ ಜ್ವರದ ಆತಂಕ - ಮಾರಿ ಹಬ್ಬದ ಮೇಲೆ ಕಾರ್ಮೋಡ

ಹೆಬ್ಬಾಳದ ಕೆರೆಯಲ್ಲಿ 20 ದಿನದ ಅಂತರದಲ್ಲಿ 50ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಕೇರಳದ ಕಲ್ಲಿಕೋಟೆ ಜಿಲ್ಲೆಯಲ್ಲಿ  ಹಲವು ಕೆರೆ ಕಟ್ಟೆಗಳಿಗೆ ಸಮೀಪ  ಕೊಕ್ಕರೆ ಜಾತಿಗೆ ಸೇರಿದ ಸುಮಾರು 12 ಕೊಕ್ಕರೆಗಳು ಸಾವನ್ನಪ್ಪಿದ್ದವು.
First published:March 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading