COVID Warrior: ಆಟೋವನ್ನೇ ಆ್ಯಂಬುಲೆನ್ಸ್ ಮಾಡಿಕೊಂಡು ಕೋವಿಡ್ ವಾರಿಯರ್ ಆದ ಶಿಕ್ಷಕ...!

ಮಹಾರಾಷ್ಟ್ರದಲ್ಲಿ ಈಗಾಗಲೇ ಕೋವಿಡ್ ಸಂಖ್ಯೆ ಮಿತಿ ಮೀರಿದೆ. ಈ ಮಧ್ಯೆ ಜೀವ ಉಳಿದರೆ ಸಾಕಪ್ಪ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದಾದ್ಯಂತ ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಸಂಖ್ಯೆ ಮತ್ತು ಬಡ ರೋಗಿಗಳಿಗೆ ಸಾರಿಗೆ ಸೌಲಭ್ಯಗಳ ಕೊರತೆಯನ್ನು ಪರಿಗಣಿಸಿ, ಸಾವಂತ್ ಮುಂಬಯಿಯಲ್ಲಿ ಏಪ್ರಿಲ್ 15 ರಿಂದ ಈ ಉಚಿತ ಆಟೋ ಆ್ಯಂಬ್ಯುಲೆನ್ಸ್ ಸೇವೆ ಆರಂಭಿಸಿದ್ದಾರೆ.

ಶಿಕ್ಷಕ

ಶಿಕ್ಷಕ

 • Share this:
  ಕೋವಿಡ್ 19 ಸಾಂಕ್ರಾಮಿಕದ ಈ ಕಠಿಣ ಪರಿಸ್ಥಿತಿಯಲ್ಲಿ ಜನರ ನೆರವಿಗೆ ನಿಲ್ಲಲು ಬಹುತೇಕ ಜನರು ಶ್ರಮಿಸುತ್ತಿದ್ದಾರೆ. ವ್ಯಕ್ತಿಯೊಬ್ಬರು ಆಕ್ಸಿಜನ್ ಸಹಾಯ ಮಾಡಲು ಪತ್ನಿಯ ಆಭರಣವನ್ನು ಮಾರಿದ್ದು ಮೊನ್ನೆಯಷ್ಟೇ ಸುದ್ದಿಯಾಗಿತ್ತು. ಹೀಗೆ ಸಾಧ್ಯವಾದಷ್ಟು ಜನರು ತಮ್ಮಿಂದ ಆಗಬಹುದಾದ ನೆರವು ನೀಡಲು ಮುಂದಾಗಿದ್ದಾರೆ. ಇದು ಅಂತದ್ದೇ ಒಂದು ಸ್ಫೂರ್ತಿದಾಯಕ ಕತೆ. ಭಾರತೀಯ ಬ್ಯಾಟ್ಸ್‌ಮನ್ ವಿ.ವಿ.ಎಸ್. ಲಕ್ಷ್ಮಣ್ ಅವರು ಒಬ್ಬ ಅಪರೂಪದ ಕೋವಿಡ್ ವಾರಿಯರ್ ಸಹಾಯವನ್ನು ಹಂಚಿಕೊಂಡಿದ್ದಾರೆ. ಕೋವಿಡ್ ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ಸಹಾಯವಾಗುವಂತೆ ಮುಂಬೈ ಮೂಲದ ಶಾಲಾ ಶಿಕ್ಷಕ ದತ್ತಾತ್ರೇಯ ಸಾವಂತ್ ಮಾನವೀಯತೆಯ ದ್ಯೋತಕವಾಗಿ ನಿಂತಿದ್ದಾರೆ. ಕೋವಿಡ್ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ತಲುಪಿಸಲು ಸಹಾಯಕವಾಗುವಂತೆ ತಮ್ಮ ಆಟೋವನ್ನು ಮೊಬೈಲ್ ಆ್ಯಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಕೋವಿಡ್‌ನ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ತತ್ತರಿಸುತ್ತಿದ್ದಾರೆ. ಮುಖ್ಯವಾಗಿ ಕೋವಿಡ್ ಸೋಂಕಿತರು ಲಾಕ್‌ಡೌನ್‌ ಸಮಯದಲ್ಲಿ ಸರಿಯಾದ ವಾಹನದ ವ್ಯವಸ್ಥೆ ಇಲ್ಲದೇ ಆಸ್ಪತ್ರೆಗೆ ತಲುಪಲು ಪರದಾಟ ನಡೆಸಿದ್ದಾರೆ. ಅಲ್ಲದೇ ಆ್ಯಂಬ್ಯುಲೆನ್ಸ್‌ಗಳ ಕೊರತೆ, ಸಮಯದ ನಿರ್ವಹಣೆಯ ಸಮಸ್ಯೆಯ ಕಾರಣ ಕೋವಿಡ್ ರೋಗಿಗಳು ಇನ್ನಿಲ್ಲದಂತೆ ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದತ್ತಾತ್ರೆಯ ಅವರ ಈ ಕೆಲಸ ಶ್ಲಾಘನೀಯ.

  ಮುಂಬೈನ ಉಪನಗರ ಘಟ್ಕೋಪರ್‌ನ ನಿವಾಸಿ ಸಾವಂತ್ ಅವರು, ಜ್ಞಾನಸಾಗರ್ ವಿದ್ಯಾ ಮಂದಿರ ಶಾಲೆಯಲ್ಲಿ ಅರೆಕಾಲಿಕವಾಗಿ ಪಾಠ ಕಲಿಸುವ ಇಂಗ್ಲೀಷ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ವಿವಿಎಸ್ ಲಕ್ಷ್ಮಣ್ ಅವರು ಸುದ್ದಿ ಸಂಸ್ಥೆ ಎಎನ್‌ಐ ಪೋಸ್ಟ್ ಮಾಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಾವಂತ್ ಅವರು ಆಟೋ ರಿಕ್ಷಾ ಜೊತೆಗೆ ಹಳದಿ ಪಿಪಿಇ ಕಿಟ್‌ನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ.

  ಸಚಿವ ಸುಧಾಕರ್​, ಚಾಮರಾಜನಗರ ಡಿಸಿ ವಿರುದ್ಧ ಸಿಎಂ ಕೆಂಡಾಮಂಡಲ; ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ ಎಂದ ಬಿಎಸ್​ವೈ

  ಮಹಾರಾಷ್ಟ್ರದಲ್ಲಿ ಈಗಾಗಲೇ ಕೋವಿಡ್ ಸಂಖ್ಯೆ ಮಿತಿ ಮೀರಿದೆ. ಈ ಮಧ್ಯೆ ಜೀವ ಉಳಿದರೆ ಸಾಕಪ್ಪ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದಾದ್ಯಂತ ಹೆಚ್ಚುತ್ತಿರುವ ಕೋವಿಡ್ ರೋಗಿಗಳ ಸಂಖ್ಯೆ ಮತ್ತು ಬಡ ರೋಗಿಗಳಿಗೆ ಸಾರಿಗೆ ಸೌಲಭ್ಯಗಳ ಕೊರತೆಯನ್ನು ಪರಿಗಣಿಸಿ, ಸಾವಂತ್ ಮುಂಬಯಿಯಲ್ಲಿ ಏಪ್ರಿಲ್ 15 ರಿಂದ ಈ ಉಚಿತ ಆಟೋ ಆ್ಯಂಬ್ಯುಲೆನ್ಸ್ ಸೇವೆ ಆರಂಭಿಸಿದ್ದಾರೆ.

  ಮಹಾರಾಷ್ಟ್ರ ಮುಖ್ಯಮಂತ್ರಿಯವರು ರಾಜ್ಯಾದ್ಯಾಂತ ಲಾಕ್‌ಡೌನ್‌ ಘೋಷಣೆ ಮಾಡಿದ ದಿನದಿಂದ ಇಲ್ಲಿಯವರೆಗೆ 26 ಕೋವಿಡ್ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದಿದ್ದಾರೆ. ಸಾವಂತ್ ಅವರು ಪಿಪಿಇ ಕಿಟ್ ಧರಿಸುವ ಮೂಲಕ ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುತ್ತಾರೆ. ಇನ್ನು ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಮನೆಗೆ ಮರಳಿ ಡಿಸ್ಟಾರ್ಜ್ ಮಾಡಿ ಮನೆಗೆ ಕರೆದುಕೊಂಡು ಬರುವಾಗ ವಾಹನವನ್ನು ಸಹ ಸ್ಯಾನಿಟೈಸ್ ಮಾಡುತ್ತಾರೆ. ಕೋವಿಡ್ 19 ಸಮಸ್ಯೆ ಇರುವವರೆಗೂ ತಮ್ಮ ಈ ಸೇವೆಯನ್ನು ಮುಂದುವರಿಸುವುದಾಗಿ ಸಾವಂತ್ ಹೇಳಿದ್ದಾರೆ.

  ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಸಾವಂತ್ ಅವರ ಈ ಉದಾತ್ತ ಕಾರ್ಯವನ್ನು ಲಕ್ಷ್ಮಣ್ ಶ್ಲಾಘಿಸಿದ್ದಾರೆ ಮತ್ತು ನಮ್ಮ ರಾಷ್ಟ್ರ ಈ ಬಿಕ್ಕಟ್ಟಿನಿಂದ ಬೇಗ ಸುಧಾರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಲಕ್ಷ್ಮಣ್ ಅವರ ಪೋಸ್ಟ್‌ಗೆ 2,400 ಕ್ಕೂ ಹೆಚ್ಚು ಮೆಚ್ಚುಗೆಗೆಳು ಬಂದಿದ್ದು, ನೆಟ್ಟಿಗರಿಂದ ಶ್ಲಾಘನೆಯೂ ಸಿಕ್ಕಿದೆ. ಕೆಲವರು ಸಾವಂತ್ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ, ಇದರಿಂದ ಅವರು ಸಾಮಾಜಿಕ ಸೇವೆಯನ್ನು ಮುಂದುವರೆಸಲು ಪ್ರೋತ್ಸಾಹ ಸಿಕ್ಕಿದಂತಾಗಿದೆ.

  ಸಾವಂತ್ ಅವರು ತಾವು ಶಿಕ್ಷಕರಾಗಿ ಗಳಿಸುವ ಸಂಬಳದೊಂದಿಗೆ ಆಟೋರಿಕ್ಷಾವನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಅವರ ಪತ್ನಿಯ ಕೊಡುಗೆಯೂ ಇದೆ. ಈಗ ಸಾವಂತ್ ಅವರ ಈ ಸಮಾಜಸೇವೆ ವೈರಲ್ ಆಗುತ್ತಿದ್ದಂತೆ ಅನೇಕ ಜನರು ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸಾವಂತ್ ಅವರ ಪ್ರಯತ್ನಕ್ಕೆ ಸಹಾಯ ಮಾಡಲು ಮುಂದೆ ಬಂದಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಆಟೋರಿಕ್ಷಾ ಇಂಧನದ ವೆಚ್ಚವನ್ನು ಭರಿಸುವುದಾಗಿ ಹೇಳಿದೆ.
  Published by:Latha CG
  First published: