ಕೊರೊನಾವೈರಸ್ ಪ್ರಕರಣಗಳಲ್ಲಿ ಅಭೂತಪೂರ್ವ ಏರಿಕೆ ಇರುವುದರಿಂದ ರಾಜ್ಯಗಳಾದ್ಯಂತ ಹಲವಾರು ಸರ್ಕಾರಿ ಸಂಸ್ಥೆಗಳು ಫೇಸ್‌ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವಿರುವುದರ ಬಗ್ಗೆ ಜಾಗೃತಿ ಮೂಡಿಸಲು ಹೊರಟಿವೆ. ಮುಂಬೈ ಪೊಲೀಸರು ಇತ್ತೀಚೆಗೆ ಎಕ್ಸ್-ಮೆನ್ ಮೀಮ್ಸ್ ಬಳಸಿಕೊಂಡು ಮಾಸ್ಕ್ ಬಳಸುವಂತೆ ಜನರಿಗೆ ಮನವಿ ಮಾಡುವ ಸೃಜನಶೀಲ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಸಾಂಕ್ರಾಮಿಕ ರೋಗದ ಆರಂಭದಿಂದಲೂ ಮುಂಬೈ ಪೊಲೀಸರು ಜಾಗೃತಿ ಸಂದೇಶವನ್ನು ರವಾನಿಸಲು ಹಲವಾರು ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸೃಜನಶೀಲ ಮತ್ತು ಆಕರ್ಷಕವಾಗಿ ಬಳಸಿದ್ದಾರೆ. ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿರುವ ಮುಂಬೈ ಪೊಲೀಸ್ ಸಂದೇಶವು ‘ಎಕ್ಸ್-ಮೆನ್: ಫಸ್ಟ್ ಕ್ಲಾಸ್’ ಚಿತ್ರದ ದೃಶ್ಯವನ್ನು ಒಳಗೊಂಡಿದೆ. ನಟ ಮೈಕೆಲ್ ಫಾಸ್ಬೆಂಡರ್ ಪಾತ್ರ ಮ್ಯಾಗ್ನೆಟೋವನ್ನು ಒಳಗೊಂಡಿದೆ. ಚಲನಚಿತ್ರದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿ, ಮುಂಬೈ ಪೊಲೀಸರು ಸೃಜನಶೀಲ ಗ್ರಾಫಿಕ್ ಅನ್ನು ಅನಿಮೇಟೆಡ್ ಹುಡುಗನೊಂದಿಗೆ ಸಂಯೋಜಿಸಿ ಫೇಸ್‌ಮಾಸ್ಕ್ ಧರಿಸಲು ಸರಿಯಾದ ಮತ್ತು ತಪ್ಪಾದ ಮಾರ್ಗಗಳನ್ನು ತೋರಿಸುತ್ತಾರೆ.
ಒಂದು ಚಮತ್ಕಾರಿ ಶೀರ್ಷಿಕೆಯೊಂದಿಗೆ ಬರೆಯಲಾಗಿದ್ದು, “ಎಲ್ಲಾ ‘ಕ್ರಮಪಲ್ಲಟನೆಗಳು’(permutations) ಮತ್ತು ಸಂಯೋಜನೆಗಳಲ್ಲಿ (combinations) ನಿಮ್ಮನ್ನು ರಕ್ಷಿಸಬಲ್ಲದು ಮಾತ್ರ ಉಳಿದಿದೆ. ನಿಮ್ಮ ಮಾಸ್ಕ್‌ಗಳನ್ನು ಸರಿಯಾಗಿ ಧರಿಸಿ! ” ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ಬರೆಯಲಾಗಿದೆ.
View this post on Instagram
ಮುಂಬೈ ಪೊಲೀಸರ ಸೃಜನಶೀಲತೆಯಿಂದ ನೆಟ್ಟಿಗರು ಪ್ರಭಾವಿತರಾಗಿದ್ದು, ಫೋಟೋ -ವಿಡಿಯೋ ಹಂಚಿಕೆ ವೇದಿಕೆ ಇನ್ಸ್ಟಾಗ್ರಾಮ್‌ನಲ್ಲಿ ಸುಮಾರು 10,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ ಮತ್ತು ಹಲವಾರು ಬಳಕೆದಾರರು ಮುಂಬೈ ಪೊಲೀಸರ ‘ಸೋಷಿಯಲ್ ಮೀಡಿಯಾ ಗೇಮ್’ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. "ಪರ್ಫೆಕ್ಟ್" ಎಂದು ಬಳಕೆದಾರರೊಬ್ಬರು ಬರೆದಿದ್ದರೆ, ''ನಾಯ್ಸ್'' ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ.
ಇಂತಹ ಸರಳ ನಿಯಮಗಳನ್ನು ಪಾಲಿಸದ ರಾಜಕಾರಣಿಗಳಿಗೆ ಮತ್ತು ಇಲಾಖೆಯಲ್ಲಿ ಕೆಲವರ ವಿರುದ್ಧ ಮುಂಬೈ ಜನತೆ ಕೋಪಗೊಂಡಿದ್ದು, ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. "ರಾಜಕಾರಣಿಗಳಿಗೆ ಮಾಸ್ಕ್
ಧರಿಸಲು ಹೇಳಿ" ಎಂದು ಒಬ್ಬ ಬಳಕೆದಾರ ಟೀಕಿಸಿದ್ದು, “ಇದನ್ನು ಮಾಡಲು ನಿಮ್ಮ ಅಧಿಕಾರಿಗಳಿಗೆ ಮತ್ತು ಹವಾಲ್ದಾರ್‌ಗಳಿಗೆ ಹೇಳಿ'' ಎಂದು ಮತ್ತೊಬ್ಬರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ