ಐಸಿಯುನಲ್ಲಿದ್ದ ಕೊರೋನಾ ರೋಗಿಗೆ ಲೈಂಗಿಕ ಕಿರುಕುಳ; ಮುಂಬೈ ಡಾಕ್ಟರ್ ವಿರುದ್ಧ ಕೇಸ್ ದಾಖಲು

MUmbai News: ಕಿರುಕುಳಕ್ಕೀಡಾದ ರೋಗಿ ಕೂಡ ಪುರುಷರೇ ಆಗಿದ್ದು, ವೈದ್ಯರು ಆ ರೋಗಿಯ ಮೈಯನ್ನು ಮುಟ್ಟಿ, ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Sushma Chakre | news18-kannada
Updated:May 4, 2020, 12:56 PM IST
ಐಸಿಯುನಲ್ಲಿದ್ದ ಕೊರೋನಾ ರೋಗಿಗೆ ಲೈಂಗಿಕ ಕಿರುಕುಳ; ಮುಂಬೈ ಡಾಕ್ಟರ್ ವಿರುದ್ಧ ಕೇಸ್ ದಾಖಲು
ಸಾಂದರ್ಭಿಕ ಚಿತ್ರ
  • Share this:
ಮುಂಬೈ (ಮೇ 4): ಕೊರೋನಾ ಸೋಂಕಿಗೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಕೊರೋನಾ ವಾರಿಯರ್​ಗಳಾಗಿರುವ ವೈದ್ಯರ ಕಾರ್ಯವನ್ನು ಎಷ್ಟು ಬಣ್ಣಿಸಿದರೂ ಸಾಲದು. ಆದರೆ, ಎಲ್ಲ ವೈದ್ಯರೂ ಒಂದೇ ರೀತಿ ಇರುವುದಿಲ್ಲ ಎಂಬುದಕ್ಕೆ ಮುಂಬೈನ ಈ ವೈದ್ಯರೇ ಸಾಕ್ಷಿ. ಕೊರೋನಾದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಮುಂಬೈನ ವೈದ್ಯರ ಮೇಲೆ ಕೇಸ್ ದಾಖಲಿಸಲಾಗಿದೆ.

ಮುಂಬೈನ 34 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ, ಮೇ 1ರಂದು ಅವರನ್ನು ವಖಾರ್ಡ್ಟ್​ ಆಸ್ಪತ್ರೆಗೆ ಸೇರಿಸಲಾಗಿತ್ತು. ಅದಕ್ಕೂ ಒಂದು ದಿನ ಮೊದಲು ಆ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದ ವೈದ್ಯರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ವಿಚಿತ್ರವೆಂದರೆ ಕಿರುಕುಳಕ್ಕೀಡಾದ ರೋಗಿ ಕೂಡ ಪುರುಷರೇ ಆಗಿದ್ದು, ವೈದ್ಯರು ಆ ರೋಗಿಯ ಮೈಯನ್ನು ಮುಟ್ಟಿ, ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:  ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆ; ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ವಾಹನಗಳು

ವೈದ್ಯರು ತನ್ನ ಅಂಗಾಂಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಐಸಿಯುನಲ್ಲಿರುವ ಕೊರೋನಾ ರೋಗ ದೂರು ನೀಡಿದ್ದಾರೆ. ಆದರೆ, ಆ ವೈದ್ಯರು ಕೊರೋನಾ ರೋಗಿಗಳ ಜೊತೆ ನೇರ ಸಂಪರ್ಕದಲ್ಲಿರುವ ಕಾರಣ ಅವರನ್ನು ಇನ್ನೂ ಬಂಧಿಸಿಲ್ಲ. ಅವರಿಂದಾಗಿ ಜೈಲಿನಲ್ಲಿ ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
First published: May 4, 2020, 12:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading