ಆಗಸ್ಟ್​ 15ರಿಂದ ಸಂಚರಿಸಲಿರುವ ಮುಂಬೈ ಲೋಕಲ್​ ರೈಲುಗಳು; ಈ ಪ್ರಯಾಣಿಕರಿಗೆ ಮಾತ್ರ ಅವಕಾಶ..!

ರೈಲಿನಲ್ಲಿ ಸಂಚರಿಸಲು ಅರ್ಹರಿರುವವರು ತಮ್ಮ ವ್ಯಾಕ್ಸಿನೇಷನ್​ ಮಾಹಿತಿಯನ್ನು ಆ ಆ್ಯಪ್​ನಲ್ಲಿ ಹಾಕಬೇಕು. ಆಗ ಟ್ರೈನ್ ಪಾಸ್ ಲಭ್ಯವಾಗುತ್ತದೆ. ಪ್ರಯಾಣಿಕರು ಆ ಪಾಸ್​ನ್ನು ಡೌನ್​ಲೋಡ್ ಮಾಡಿಕೊಂಡು ರೈಲುಗಳಲ್ಲಿ ಸಂಚರಿಸಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಹಾರಾಷ್ಟ್ರ(ಆ.9): ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ಹಂತ-ಹಂತವಾಗಿ ಅನ್​ಲಾಕ್​ ಪ್ರಕ್ರಿಯೆಯೂ ಶುರುವಾಗಿದೆ. ಕೊರೋನಾ ಕಾರಣದಿಂದಾಗಿ ಸಂಚಾರ ನಿಲ್ಲಿಸಿದ್ದ ರೈಲುಗಳು ಮತ್ತೆ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿವೆ. ಹೌದು, ಇದೇ ಆಗಸ್ಟ್​ 15ರಿಂದ ಮುಂಬೈನ ಲೋಕಲ್​ ರೈಲುಗಳು ಸಂಚರಿಸಲಿವೆ. ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಮಾತನಾಡಿ, ಕೋವಿಡ್​-19 ವಿರುದ್ಧ ಲಸಿಕೆ ಪಡೆದವರು ಮಾತ್ರ ಲೋಕಲ್ ಟ್ರೈನ್​ಗಳಲ್ಲಿ ಸಂಚರಿಸಬಹುದಾಗಿದೆ ಎಂದು ಹೇಳಿದರು.

  ಕೊರೋನಾ 2ನೇ ಅಲೆ ಕಾರಣದಿಂದಾಗಿ ಇದೇ ಏಪ್ರಿಲ್​​ನಲ್ಲಿ ರೈಲು ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಸದ್ಯ ಸರ್ಕಾರಿ ನೌಕರರು ಮತ್ತು ಅಗತ್ಯ ಸೇವಾ ಸಿಬ್ಬಂದಿ ಮಾತ್ರ ರೈಲುಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

  ಮುಂಬೈ ಲೋಕಲ್ ರೈಲುಗಳಲ್ಲಿ ಸಂಚರಿಸುವವರು 2ನೇ ಡೋಸ್​ ಲಸಿಕೆಯನ್ನು ಪಡೆದಿರಬೇಕು. ಲಸಿಕೆ ಪಡೆದು ಕನಿಷ್ಠ 15 ದಿನಗಳಾದರೂ ಆಗಿರಬೇಕು. ಅಂತಹವರು ಮಾತ್ರ ಆಗಸ್ಟ್​ 15ರಿಂದ ರೈಲುಗಳಲ್ಲಿ ಪ್ರಯಾಣಿಸಬಹುದಾಗಿದೆ.

  ಇದನ್ನೂ ಓದಿ:Karnataka Weather Today: ಇಂದು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ; ಬೆಂಗಳೂರಿನ ವಾತಾವರಣ ಹೇಗಿರಲಿದೆ?

  ಇದಕ್ಕಾಗಿ ಒಂದು ಆ್ಯಪ್​​ನ್ನು ಸಿದ್ದಪಡಿಸಲಾಗಿದ್ದು, ಸೋಮವಾರ ಅದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಭಾನುವಾರ ಹೇಳಿದ್ದರು. ರೈಲಿನಲ್ಲಿ ಸಂಚರಿಸಲು ಅರ್ಹರಿರುವವರು ತಮ್ಮ ವ್ಯಾಕ್ಸಿನೇಷನ್​ ಮಾಹಿತಿಯನ್ನು ಆ ಆ್ಯಪ್​ನಲ್ಲಿ ಹಾಕಬೇಕು. ಆಗ ಟ್ರೈನ್ ಪಾಸ್ ಲಭ್ಯವಾಗುತ್ತದೆ. ಪ್ರಯಾಣಿಕರು ಆ ಪಾಸ್​ನ್ನು ಡೌನ್​ಲೋಡ್ ಮಾಡಿಕೊಂಡು ರೈಲುಗಳಲ್ಲಿ ಸಂಚರಿಸಬಹುದಾಗಿದೆ.

  ಸ್ಮಾರ್ಟ್​ಫೋನ್​​ ಇಲ್ಲದ ಜನರು ಚಿಂತಿಸಬೇಕಿಲ್ಲ. ಸ್ಥಳೀಯ ಮುನ್ಸಿಪಲ್ ವಾರ್ಡ್​​ ಅಥವಾ ಸಬ್​ ಅರ್ಬನ್​ ರೈಲ್ವೆ ನಿಲ್ದಾಣಗಳಲ್ಲಿ ಪಾಸ್​​​ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲಿ ನಿಮಗೆ ಪಾಸ್​ ಸಿಗಲಿದೆ.

  ಟ್ರೈನ್​ ಪಾಸ್​ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅಧಿಕ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಈಗ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಹಂತ-ಹಂತವಾಗಿ ಎಲ್ಲವನ್ನೂ ತೆರೆಯಲು ಪ್ರಾರಂಭಿಸಿದ್ದೇವೆ ಎಂದು ಮಹಾರಾಷ್ಟ್ರ ಸಿಎಂ ಹೇಳಿದರು.

  ಇದನ್ನೂ ಓದಿ:SSLC Exam Results: ಇಂದು ಮಧ್ಯಾಹ್ನ 3:30ಕ್ಕೆ ಎಸ್ಎಸ್ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ

  ಮುಂಬೈ ಲೋಕಲ್​ ರೈಲುಗಳನ್ನು ಬಿಡುವಂತೆ ಸಾರ್ವಜನಿಕ ವಲಯದಿಂದ ಒತ್ತಡ ಕೇಳಿ ಬಂದಿದ್ದರಿಂದ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

  ಶನಿವಾರ ಮುಂಬೈನಲ್ಲಿ 331 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 24 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಮುಂಬೈನಲ್ಲಿ ಒಟ್ಟು 19 ಲಕ್ಷ ಮಂದಿ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಭಾನುವಾರ 6,601 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Latha CG
  First published: