ಪ್ರದರ್ಶನ ಪ್ರಾರಂಭಿಸಲು ಮಲ್ಟಿಪ್ಲೆಕ್ಸ್ ಗಳು ರೆಡಿ, ಬಿಡುಗಡೆಗೆ ಸಿದ್ಧವಾಗಿವೆ ಸ್ಟಾರ್​ ನಟರ ಚಿತ್ರಗಳು

ಸಿನಿಮಾ ಪ್ರಾರಂಭದಲ್ಲಿ, ಇಂಟರ್ವಲ್​ನಲ್ಲಿ ಕೊರೋನಾ ಸಂಬಂಧ ಜಾಗೃತಿ ವಿಡಿಯೋಗಳನ್ನು ಪ್ರದರ್ಶಿಸುವುದು. ಸಿಂಗಲ್ ಯೂಸ್ ಥ್ರೀಡಿ ಗ್ಲಾಸಸ್ ಬಳಸುವುದು. ಹಾಗೇ ಒಮ್ಮೆ ಬಳಸಿ ಎಸೆಯುವಂತೆಯೇ ತಿಂಡಿ, ತಿನಿಸುಗಳನ್ನು ಪ್ಯಾಕ್ ಮಾಡಿ ನೀಡಲಾಗುವುದು ಎಂದು ತಿಳಿಸಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಹೀಗೇ ಮುಂದುವರಿದರೆ ಉಳಿಯೋದು ಕಷ್ಟ ಅಂತ ಅರಿತ ಮಲ್ಟಿಪ್ಲೆಕ್ಸ್​ಗಳು, ಲಾಕ್ಡೌನ್ ನಡುವೆಯೂ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ನಡೆಸಿವೆ. ಜತೆಗೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ವತಿಯಿಂದ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನೂ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್​ಗಳಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಟಿಕೆಟ್ ಕೌಂಟರ್, ಸೆಕ್ಯುರಿಟಿ, ಮಲ್ಟಿಪ್ಲೆಕ್ಸ್ ಆವರಣ, ಸ್ನ್ಯಾಕ್ಸ್ ಮಾರಾಟದ ಸ್ಥಳ, ಆಡಿಟೋರಿಯಂ, ಸೀಟುಗಳು, ಶೌಚಾಲಯ, ಪ್ರವೇಶ ದ್ವಾರ ಹಾಗೂ ಹೊರಹೋಗುವ ದ್ವಾರದ ಬಳಿ ಹೀಗೆ ಎಲ್ಲೆಡೆ ಔಷಧೀ ಸ್ಪ್ರೇ ಮಾಡಲಾಗುವುದು.

ಪ್ರೇಕ್ಷಕರು ಮಲ್ಟಿಪ್ಲೆಕ್ಸ್ ಒಳಗೆ ಬರುವ ಮೊದಲೇ ಅವರ ದೇಹದ ಉಷ್ಣಾಂಶ ಪರೀಕ್ಷೆ ಮಾಡುವುದು. ಮಾಸ್ಕ್ ಕಡ್ಡಾಯಗೊಳಿಸುವುದು, ಆವರಣದಲ್ಲೇ ಪಿಪಿಇ ಅರ್ಥಾತ್ ಪರ್ಸನಲ್ ಪ್ರೊಟೆಕ್ಷನ್ ಕಿಟ್ಸ್ ಮಾರಾಟ, ಜನರು ಓಡಾಡುವ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಸರ್ ಇಡುವುದು. ಪ್ರೇಕ್ಷಕರು ಸಾಲುಗಟ್ಟಿ ನಿಲ್ಲುವ ಸ್ಥಳಗಳನ್ನು ಮೊದಲೇ ಮಾರ್ಕ್ ಮಾಡುವುದು, ಆನ್ಲೈನ್ ಟಿಕೆಟ್ ಬುಕ್ಕಿಂಗ್​ಗೆ ಮಾತ್ರವಲ್ಲ ಸ್ನ್ಯಾಕ್ಸ್ ಕೂಡ ಆನ್ಲೈನ್ನಲ್ಲಿ ಖರೀದಿಸಲು ಪ್ರೇಕ್ಷಕರನ್ನು ಉತ್ತೇಜಿಸಲಾಗುವುದು ಎಂದು ಅಸೋಸಿಯೇಷನ್​ ತಿಳಿಸಿದೆ.

ಇದನ್ನೂ ಓದಿ: ಭಾನುವಾರ ಲಾಕ್ ಡೌನ್ ಜಾರಿಯಲ್ಲಿದ್ದರೂ ಮದುವೆಗೆ ಅವಕಾಶ ಕೊಟ್ಟ ಸರ್ಕಾರ

ಇನ್ನು ಆಡಿಟೋರಿಯಂ ಒಳಗೂ ಸಹ ಸಾಮಾಜಿಕ ಅಂತರ ಕಾಪಾಡಲು ಸೀಟುಗಳ ನಡುವೆ ಒಂದೊಂದು ಸೀಟ್ಅನ್ನು ಖಾಲಿ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಬ್ಬನೇ ಪ್ರೇಕ್ಷಕ ಬಂದು ಕುಳಿತರೆ ಆತನ ಎರಡೂ ಕಡೆಗಳಲ್ಲಿ ಒಂದೊಂದು ಸೀಟ್ ಖಾಲಿ ಬಿಡುವುದು, ಹಾಗೇ ನಾಲ್ಕು ಜನರ ಕುಟುಂಬ ಬಂದರೆ ಅವ್ರೆಲ್ಲರನ್ನೂ ಒಟ್ಟಿಗೇ ಕೂರಿಸಿ, ಅಕ್ಕ ಪಕ್ಕದ ಸೀಟುಗಳನ್ನು ಖಾಲಿ ಬಿಡುವ ಐಡಿಯಾ ಮಾಡಲಾಗಿದೆ.

ಇದನ್ನೂ ಓದಿ: ಹೊಸ ಕೈದಿಗಳ ಆಗಮನದಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಆತಂಕ; ಮಹಿಳಾ ಜೈಲಿನಲ್ಲೇ ಹೊಸಬರ ಕ್ವಾರಂಟೈನ್

ಮಲ್ಟಿಪ್ಲೆಕ್ಸ್ ಮಾತ್ರವಲ್ಲ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸ್ವಚ್ಛತೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು. ಎಲ್ಲ ಸ್ಥಳಗಳನ್ನು ಹಿಂದಿಗಿಂತ ಹೆಚ್ಚು ಜಾಗರೂಕತೆಯಿಂದ ಸ್ವಚ್ಛತೆ ಮಾಡುವುದು. ಸಿಬ್ಬಂದಿಗಳಿಗೆ ಪದೇ ಪದೇ ಕೈತೊಳೆಯಲು ತಿಳಿಸಲಾಗುವುದು. ಪ್ರತಿದಿನ ಆಡಿಟೋರಿಯಂನ ಕುರ್ಚಿಗಳನ್ನು ಸ್ವಚ್ಛಗೊಳಿಸುವುದು.

ಇದನ್ನೂ ಓದಿ: ಒಂದೂಕಾಲು ಲಕ್ಷ ದಾಟಿದ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ

ಸಿನಿಮಾ ಪ್ರಾರಂಭದಲ್ಲಿ, ಇಂಟರ್ವಲ್​ನಲ್ಲಿ ಕೊರೋನಾ ಸಂಬಂಧ ಜಾಗೃತಿ ವಿಡಿಯೋಗಳನ್ನು ಪ್ರದರ್ಶಿಸುವುದು. ಸಿಂಗಲ್ ಯೂಸ್ ಥ್ರೀಡಿ ಗ್ಲಾಸಸ್ ಬಳಸುವುದು. ಹಾಗೇ ಒಮ್ಮೆ ಬಳಸಿ ಎಸೆಯುವಂತೆಯೇ ತಿಂಡಿ, ತಿನಿಸುಗಳನ್ನು ಪ್ಯಾಕ್ ಮಾಡಿ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ನ್ಯೂಸ್18 ಬಿಗ್ ಇಂಪ್ಯಾಕ್ಟ್: ಮಂಗಳೂರು ವಿಶ್ವವಿದ್ಯಾಲಯದ ಭ್ರಷ್ಟಾಚಾರ ಸಾಬೀತು

ಸಿಬ್ಬಂದಿ ಕಡ್ಡಾಯವಾಗಿ ಆರೋಗ್ಯಸೇತು ಅಪ್ಲಿಕೇಷನ್ ಬಳಸಬೇಕು. ಎಲ್ಲರೂ ಮಾಸ್ಕ್ಸ್ ಹಾಗೂ ಗ್ಲೌಸ್​ಗಳನ್ನು ಕಡ್ಡಾಯವಾಗಿ ಬಳಸಬೇಕು. ದೈಹಿಕವಾಗಿ ಫಿಟ್ಇರುವ ಸಿಬ್ಬಂದಿ ಮಾತ್ರ ಕೆಲಸಕ್ಕೆ ಬರಲು ಅವಕಾಶ ನೀಡುತ್ತೇವೆ. ಹೀಗೆ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುವುದರ ಸಂಬಂಧ ಮಾಹಿತಿ ನೀಡಿದ್ದು, ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಈ ಸಂಬಂಧ ಕೇಂದ್ರ ಸರ್ಕಾರದ ಇನ್ನಷ್ಟೇ ಉತ್ತರ ನೀಡಬೇಕಿದೆ.
First published: