ಜನಪ್ರತಿನಿಧಿಗಳಿಗೆ ಮಾದರಿಯಾದ ವಿಜಯಪುರದ ಬಿಜೆಪಿ ಶಾಸಕ; ಪತ್ನಿಯ ಸಲಹೆಯಂತೆ ಸಾವಿರಾರು ಬಡವರಿಗೆ ನೆರವು

ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕರು ತಮ್ಮ ಪತ್ನಿಯ ಸಲಹೆಯಂತೆ ಕ್ಷೇತ್ರದ ಕಡು ಬಡವರ ನೆರವಿಗೆ ಧಾವಿಸಿದ್ದಾರೆ. ಅವರ ಜೀವನಕ್ಕೆ ಉಪಯೋಗವಾಗುವಂತೆ ವಿನೂತನ ಕ್ರಮ ಕೈಗೊಂಡಿದ್ದಾರೆ.

ಎ.ಎಸ್. ಪಾಟೀಲ ನಡಹಳ್ಳಿ

ಎ.ಎಸ್. ಪಾಟೀಲ ನಡಹಳ್ಳಿ

  • Share this:
ವಿಜಯಪುರ(ಏ. 16): ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಭಾರತ ಲಾಕಡೌನ್ ಆಗಿದೆ.  ಈ ಸಂದರ್ಭದಲ್ಲಿ ಸರಕಾರ ಸಾಕಷ್ಟು ನೆರವು ನೀಡುತ್ತಿದೆಯಾದರೂ, ಇನ್ನೂ ಅನೇಕರಿಗೆ ನಾನಾ ವಸ್ತುಗಳು ಸಿಗದೆ ಪರದಾಡುವಂತಾಗಿದೆ.  ಈ ಹಿನ್ನೆಲೆಯಲ್ಲಿ ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ವಿನೂತನ ನೆರವು ನೀಡುತ್ತಿದ್ದಾರೆ.  ಅಷ್ಟೇ ಅಲ್ಲ, ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ನಡಹಳ್ಳಿ ತಮ್ಮ ಸ್ವಕ್ಷೇತ್ರ ಮುದ್ದೇಬಿಹಾಳ ತಾಲೂಕಿನಲ್ಲಿ 15 ಸಾವಿರ ಬಡವರಿಗೆ ರೂ. 1 ಕೋ. ವೆಚ್ಚದಲ್ಲಿ ಪಡಿತರ ವಿತರಣೆಗೆ ಮುಂದಾಗಿದ್ದಾರೆ. 

ತಮ್ಮ ಪತ್ನಿ ಮಹಾದೇವಿ ಸಲಹೆಯಂತೆ 15 ಸಾವಿರ ಬಡವರಿಗೆ ಸೋಮವಾರದಿಂದ ಆಹಾರ ಧಾನ್ಯದ ಕಿಟ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಮುದ್ದೇಬಿಹಾಳದಲ್ಲಿರುವ ಇವರ ಮನೆ ದಾಸೋಹ ನಿಲಯದಲ್ಲಿ ಆಹಾರ ಧಾನ್ಯಗಳ ಕಿಟ್ ತಯಾರಾಗುತ್ತಿವೆ.  ಕೊರೊನಾ ಲಾಕಡೌನ್ ಪರಿಣಾಮ ಕೆಲಸ ಇಲ್ಲದೆ ಸಂಕಷ್ಟದಲ್ಲಿರುವ ಬಡವರಿಗೆ ಶಾಸಕ ನಡಹಳ್ಳಿ ನೆರವು ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಹಳೆಯ ಫ್ರಿಜ್ ಅನ್ನೇ ಡಿಸ್ಇನ್ಫೆಕ್ಟೆಂಟ್ ಚೇಂಬರ್ ಆಗಿ ಪರಿವರ್ತಿಸಿದ ಕರ್ನಾಟಕದ ಸಂಶೋಧಕರು

ತಮ್ಮ ಮತಕ್ಷೇತ್ರದಲ್ಲಿ ಬರುವ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳ 20 ಸಾವಿರ ಕಡುಬಡವರಿಗೆ ಕಡುಬಡವರಿಗೆ ಅಕ್ಕಿ, ಗೋಧಿ ಹೊರತು ಪಡಿಸಿ ಇತರೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ತಮ್ಮ ಸ್ವಂತ ಹಣದಲ್ಲಿ ತಾಲೂಕಿನ 1 ತಾಲೂಕು ಆಸ್ಪತ್ರೆ, 3 ಸಮುದಾಯ ಆರೋಗ್ಯ ಕೇಂದ್ರ, 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತು ಅವರೊಂದಿಗೆ ಬರುವ ಆರೈಕೆ ಮಾಡುವ ಸುಮಾರು 4,000 ಜನರಿಗೆ ಊಟದ ವ್ಯವಸ್ಥೆಯನ್ನೂ ನಡಹಳ್ಳಿ ಮಾಡಿದ್ದಾರೆ.  ಈಗ ವಿತರಿಸಲಾಗುವ ಪ್ರತಿಯೊಂದು ಕಿಟ್ ನಲ್ಲಿ ತಲಾ 1 ಕೆಜಿ ಸಕ್ಕರೆ, ಎಣ್ಣೆ ಒಳ್ಳೆಣ್ಣೆ, ತೊಗರಿಬೇಳೆ, ರವಾ, 250ಗ್ರಾಂ ಚಹಾಪುಡಿ, ಖಾರ, 200ಗ್ರಾಂ ಸಾಸವಿ, 100ಗ್ರಾಂ ಜೀರಗಿ, ಅರಿಷಿಣಪುಡಿ, ಮಸಾಲೆ ಪದಾರ್ಥ, 2 ಕೆಜಿ ಈರುಳ್ಳಿ ಸೇರ್ಪಡೆ ಮಾಡಲಾಗಿದೆ.

ಸರಕಾರದ ಉಚಿತ ಹಾಲು ವಿತರಣೆ ಯೋಜನೆ ಮಾದರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ತಮ್ಮ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರ ವಾರ್ಡವಾರು ತಂಡ ರಚಿಸಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಜೊತೆಗೆ ಆಯಾ ವಾರ್ಡ್​ನಲ್ಲಿರುವ ನಿಜವಾದ ಕಡುಬಡವರಿಗೆ ಈ ಕಿಟ್​ಗಳನ್ನು ವಿತರಣೆ ಮಾಡಲು ನಡಹಳ್ಳಿ ಯೋಜನೆ ರೂಪಿಸಿದ್ದಾರೆ.

First published: