’ಸಂಸದ ಪ್ರತಾಪ್ ಸಿಂಹ ಕಾಣೆಯಾಗಿದ್ದಾರೆ ದಯವಿಟ್ಟು ಹುಡುಕಿ ಕೊಡಿ’; ಎಸ್‌ಪಿಗೆ ದೂರಿತ್ತ ಕೊಡಗು ಜೆಡಿಎಸ್ ಘಟಕ

ಕೊರೋನಾ ಭೀತಿ ದಿನಿದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಡೀ ರಾಜ್ಯದಾದ್ಯಂತ ಸತತ ಎರಡನೇ ವಾರ ಸಾರ್ವಜನಿಕ ವಲಯದ ಬಂದ್‌ ಮುಂದುವರೆದಿದೆ. ಹೀಗಾಗಿ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗಿಗೂ ಪ್ರವಾಸಿಗಳನ್ನು ನಿಷೇಧಿಸಲಾಗಿದೆ. ಜನರ ಭಯಭೀತರಾಗಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸಿ ಜನರಿಗೆ ಧೈರ್ಯ ತುಂಬಬೇಕಾದ ಸಂಸದ ಪ್ರತಾಪ ಸಿಂಹ ಹಾಗೂ ಉಸ್ತುವಾರಿ ಸಚಿವ ಸದ್ಯಕ್ಕೆ ಜಿಲ್ಲೆಯ ಕಡೆಗೆ ಆಗಮಿಸಿಯೇ ಇಲ್ಲ.

news18-kannada
Updated:March 18, 2020, 12:22 PM IST
’ಸಂಸದ ಪ್ರತಾಪ್ ಸಿಂಹ ಕಾಣೆಯಾಗಿದ್ದಾರೆ ದಯವಿಟ್ಟು ಹುಡುಕಿ ಕೊಡಿ’; ಎಸ್‌ಪಿಗೆ ದೂರಿತ್ತ ಕೊಡಗು ಜೆಡಿಎಸ್ ಘಟಕ
ಪ್ರತಾಪ್​ ಸಿಂಹ
  • Share this:
ಕೊಡಗು (ಮಾರ್ಚ್‌ 18); ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹ ಹಾಗೂ ಉಸ್ತುವಾರಿ ಸಚಿವ ಕಾಣೆಯಾಗಿದ್ದಾರೆ. ಹೀಗಾಗಿ ದಯವಿಟ್ಟು ಈ ಇಬ್ಬರೂ ನಾಯಕರನ್ನು ಹುಡುಕಿ ಕೊಡಿ ಎಂದು ಒತ್ತಾಯಿಸಿ ಜಿಲ್ಲೆಯ ಜೆಡಿಎಸ್‌ ಮುಖಂಡರು ಇಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಭೀತಿ ದಿನಿದಿಂದ ದಿನಕ್ಕೆ ಹೆಚ್ಚುತ್ತಿದ್ದು ಇಡೀ ರಾಜ್ಯದಾದ್ಯಂತ ಸತತ ಎರಡನೇ ವಾರ ಸಾರ್ವಜನಿಕ ವಲಯದ ಬಂದ್‌ ಮುಂದುವರೆದಿದೆ. ಹೀಗಾಗಿ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗಿಗೂ ಪ್ರವಾಸಿಗಳನ್ನು ನಿಷೇಧಿಸಲಾಗಿದೆ. ಜನರ ಭಯಭೀತರಾಗಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸಿ ಜನರಿಗೆ ಧೈರ್ಯ ತುಂಬಬೇಕಾದ ಸಂಸದ ಪ್ರತಾಪ ಸಿಂಹ ಹಾಗೂ ಉಸ್ತುವಾರಿ ಸಚಿವ ಸದ್ಯಕ್ಕೆ ಜಿಲ್ಲೆಯ ಕಡೆಗೆ ಆಗಮಿಸಿಯೇ ಇಲ್ಲ.

ಹೀಗಾಗಿ ಇಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಚೇರಿಗೆ ಆಗಮಿಸಿ ಎಸ್‌ಪಿ ಸುಮನ್‌ ಡಿ ಪನ್ಸೇಕರ್ ಅವರಿಗೆ ಲಿಖಿತ ದೂರು ನೀಡಿರುವ ಜೆಡಿಎಸ್‌ ಜಿಲ್ಲಾ ಮುಖಂಡರು, "ಜಿಲ್ಲೆಯಲ್ಲಿ ಮಾರಣಾಂತಿಕ ಕೊರೋನಾ ಹರಡಿರುವ ಸಂದರ್ಭದಲ್ಲೂ ಜಿಲ್ಲೆಯ ಸಂಸದರು ಮತ್ತು ಉಸ್ತುವಾರಿ ಸಚಿವರು ಈ ಕಡೆಗೆ ತಲೆ ಹಾಕಿಲ್ಲ. ಒಂದು ವೇಳೆ ಇವರನ್ನು ಯಾರಾದರೂ ಅಪಹರಿಸಿದ್ದಾರಾ? ಅಥವಾ ಇವರಿಗೂ ಕೊರೋನಾ ಬಾಧಿಸಿದೆಯಾ? ಇವರನ್ನು ಹುಡುಕಿ ದಯವಿಟ್ಟು ಈ ಪ್ರಶ್ನೆಗಳಿಗೆ ಉತ್ತರ ನೀಡಿ" ಎಂದು ಪೊಲೀಸರಿಗೆ ದೂರು ನೀಡಲಾಗಿದೆ

ಇದನ್ನೂ ಓದಿ : ಕೊರೋನಾ ಭೀತಿಗೆ ಇನ್ನೂ ಒಂದು ವಾರ ಬಂದ್ ಮುಂದುವರೆಯುವ ಸಾಧ್ಯತೆ; ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ
First published: March 18, 2020, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading