HOME » NEWS » Coronavirus-latest-news » MP MURDER CONVICT OUT ON PAROLE HAS BEEN CREMATING BODIES OF COVID 19 VICTIMS FORSAKEN BY KIN STG SKTV

Corona Death: ಪೆರೋಲ್​ ಮೇಲಿರುವ ಕೊಲೆ ಅಪರಾಧಿಯಿಂದ ಅನಾಥ ಕೋವಿಡ್ ಶವಗಳ ಅಂತ್ಯಸಂಸ್ಕಾರ !

2009 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಶ್ಯಾಮ್ ಬಾಬಾ ಇತ್ತೀಚೆಗೆ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಕೋವಿಡ್ ಸಂಬಂಧಿತ ಸಾವುನೋವುಗಳು ಹೆಚ್ಚಾದಂತೆ, ಇಂದೋರ್‌ನಿಂದ 60 ಕಿ.ಮೀ ದೂರದಲ್ಲಿರುವ ಧಾರ್ ಜಿಲ್ಲೆಯ ಸ್ಥಳೀಯ ಶವಾಗಾರದಲ್ಲಿ ಸೇವೆ ಸಲ್ಲಿಸಲು ಬಾಬಾ ನಿರ್ಧರಿಸಿದರು.

news18-kannada
Updated:May 8, 2021, 11:15 AM IST
Corona Death: ಪೆರೋಲ್​ ಮೇಲಿರುವ ಕೊಲೆ ಅಪರಾಧಿಯಿಂದ ಅನಾಥ ಕೋವಿಡ್ ಶವಗಳ ಅಂತ್ಯಸಂಸ್ಕಾರ !
ಸಾಂದರ್ಭಿಕ ಚಿತ್ರ.
  • Share this:
ಮಧ್ಯಪ್ರದೇಶ: ಭಾರತದಲ್ಲಿ ಕೋವಿಡ್ -19 ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಪ್ರತಿನಿತ್ಯ ಸಾವಿರಾರು ಜನ ಬಲಿಯಾಗುತ್ತಲೇ ಇದ್ದಾರೆ. ಕೊರೊನಾದಿಂದ ಬಲಿಯಾದವರಿಗೆ ಅಪರಿಚಿತರೂ ಸಹ ಮರುಗುತ್ತಲೇ ಇದ್ದಾರೆ. ಕೋವಿಡ್‌ - 19 ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಲು ಅನೇಕ ಕುಟುಂಬಸ್ಥರೇ ಹಿಂದೇಟು ಹಾಕಿದ್ದರೂ, ಅಪರಿಚಿತರು ಅಂತ್ಯಸಂಸ್ಕಾರ ನಡೆಸಿದ್ದಾರೆ. ಇದೇ ರೀತಿ ಕೋವಿಡ್ -19 ರ ಎರಡನೇ ಅಲೆಯಿಂದಾಗಿ ಉಂಟಾದ ಅಭೂತಪೂರ್ವ ಸಾವು ಮತ್ತು ನಷ್ಟವು ಅಪರಾಧಿಗಳ ಹೃದಯಗಳನ್ನು ಕರಗಿಸಿದೆ. ಉದಾಹರಣೆಗೆ, ಮಧ್ಯಪ್ರದೇಶದಲ್ಲಿ ಪೆರೋಲ್ ಮೇಲೆ ಜೈಲಿನಿಂದ ಹೊರಗಿರುವ ಕೊಲೆ ಅಪರಾಧಿ, ಶವಾಗಾರವೊಂದರಲ್ಲಿ ಕೋವಿಡ್ -19 ಸಂತ್ರಸ್ತರ ಅಂತಿಮ ವಿಧಿಗಳನ್ನು ಮಾಡುವ ಮೂಲಕ ಸಾರ್ವಜನಿಕರ ಸೇವೆ ಮಾಡಲು ಮುಂದಾಗಿದ್ದಾರೆ.

2009 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಶ್ಯಾಮ್ ಬಾಬಾ ಇತ್ತೀಚೆಗೆ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಕೋವಿಡ್ ಸಂಬಂಧಿತ ಸಾವುನೋವುಗಳು ಹೆಚ್ಚಾದಂತೆ, ಇಂದೋರ್‌ನಿಂದ 60 ಕಿ.ಮೀ ದೂರದಲ್ಲಿರುವ ಧಾರ್ ಜಿಲ್ಲೆಯ ಸ್ಥಳೀಯ ಶವಾಗಾರದಲ್ಲಿ ಸೇವೆ ಸಲ್ಲಿಸಲು ಬಾಬಾ ನಿರ್ಧರಿಸಿದರು. ಕೋವಿಡ್-ಪಾಸಿಟಿವ್ ರೋಗಿಗಳ ಶವಸಂಸ್ಕಾರವು ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳನ್ನು ಒಳಗೊಂಡಿರುತ್ತದೆ. ಈ ನಿಯಮಗಳಿಗನುಸಾರ ಕೋವಿಡ್ -19 ಸಂತ್ರಸ್ತರ ಅಂತ್ಯಸಂಸ್ಕಾರ ಮಾಡುವ ಅಗತ್ಯವಿದ್ದರೆ ಬಾಬಾ ಮಾಡುತ್ತಿದ್ದಾರೆ. ಕೊರೊನಾ ವೈರಸ್‌ ಸೋಂಕು ತಗುಲುವ ಭೀತಿಯಿಂದ ಎಷ್ಟೋ ಕುಟುಂಬ ವರ್ಗದವರು ತಮ್ಮ ಕುಟುಂಬದವರು ಕೊರೊನಾ ಬಲಿಯಾದರೂ ಅಂತಿಮ ವಿಧಿ ಮಾಡಲು ಮುಂದಾಗುತ್ತಿಲ್ಲ. ಇಂತಹ ಮೃತದೇಹಗಳ ಅಂತ್ಯ ಸಂಸ್ಕಾರವನ್ನು ಬಾಬಾ ನಿರ್ವಹಿಸುತ್ತಿದ್ದಾರೆ.

ಶವಾಗಾರದೊಳಗೆ ಸಮಯ ಕಳೆಯುವುದು ಈಗ ಬಾಬಾ ಅವರ ದಿನಚರಿಯ ಭಾಗವಾಗಿದೆ. ಶ್ಯಾಮ್ ಬಾಬಾ ತನ್ನ ದಿನದ ಬಹುಭಾಗವನ್ನು ಅಲ್ಲೇ ಕಳೆಯುತ್ತಿದ್ದು, ಮೃತ ದೇಹಗಳನ್ನು ಆ್ಯಂಬುಲೆನ್ಸ್‌ಗಳಿಂದ ಇಳಿಸಲು ಸಹಾಯ ಮಾಡುವುದು, ಅಂತ್ಯಕ್ರಿಯೆಯ ಪೈರ್‌ಗಳು, ಮತ್ತು ಅಗತ್ಯವಿದ್ದಾಗ ಅವರ ಕೊನೆಯ ವಿಧಿಗಳನ್ನು ಮಾಡುತ್ತಿದ್ದಾನೆ ಬಾಬಾ.

ತೀವ್ರವಾದ ಸಾಂಕ್ರಾಮಿಕದ ಮಧ್ಯೆ ಸತ್ತವರನ್ನು ಒಳಗೊಂಡಂತೆ ಅಗತ್ಯವಿರುವವರಿಗೆ ಸೇವೆ ಸಲ್ಲಿಸುವಲ್ಲಿ ಅವರ ಸಮರ್ಪಣೆಯಿಂದ ಪ್ರಭಾವಿತರಾದ ಬಾಬಾ ಅವರ ಜೈಲಿನಲ್ಲಿರುವ ಪೆರೋಲ್ ಅಧಿಕಾರಿಗಳು ಬಾಬಾ ಅವರಿಗೆ ಎರಡು ತಿಂಗಳ ಹೆಚ್ಚುವರಿ ಪೆರೋಲ್ ಅನ್ನು ಮಂಜೂರು ಮಾಡಿದ್ದಾರೆ. ಬಾಬಾ ಸಹ ಸ್ಮಶಾನದೊಳಗೆ ತಮ್ಮ ಸೇವೆಗಳನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ. ಆದರೂ, ಪೆರೋಲಿಯಾಗಿರುವ ಬಾಬಾ, ಅನೇಕ ಸಾವುಗಳಿಂದ ದು:ಖಿತವಾಗಿದ್ದಾರೆ.

ಇದನ್ನೂ ಓದಿhttps://kannada.news18.com/news/coronavirus-latest-news/new-chinese-vaccine-sinopharm-gets-who-emergency-approval-sktv-561999.html

ಈ ಸಂಬಂಧ ನ್ಯೂಸ್‌ 18ನೊಂದಿಗೆ ಮಾತನಾಡಿದ ಬಾಬಾ, "ಈ ಸಾವುನೋವುಗಳ ಸರಣಿ ನಿಲ್ಲಬೇಕು ಮತ್ತು ಇದು ಸುಧಾರಿಸಬೇಕು ಎಂದು ನಾನು ಸರ್ವಶಕ್ತನಿಗೆ ನಿಯಮಿತವಾಗಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.

ಶಿಕ್ಷೆಗೊಳಗಾದ ನಂತರ ಈ ಕೊಲೆ ಅಪರಾಧಿ ಬಾಬಾ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಇದೇ ಮೊದಲಲ್ಲ. ಈ ಹಿನ್ನೆಲೆ ಧಾರ್ ಜಿಲ್ಲೆಯ ಹಿರಿಯ ಸಮಾಜ ಸೇವಕ ಹೇಮೇಂದ್ರ ಸಿಂಗ್ ಪನ್ವಾರ್ ಅವರು ಕೈದಿಯ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಕಳೆದ ವರ್ಷ ಸಾಂಕ್ರಾಮಿಕ ಸಮಯದಲ್ಲಿ ಬಾಬಾ ಸಹ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ದೃಢಪಡಿಸಿದರು.
Youtube Video

ಮಧ್ಯಪ್ರದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದ ಉಂಟಾಗುವ ಅಪಾಯಗಳೊಂದಿಗೆ, ರಾಜ್ಯದಾದ್ಯಂತ ಜೈಲುಗಳಿಂದ ಪೆರೋಲ್ ಮೇಲೆ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ, ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ ಸಹ ಸುಮಾರು 12,000 ಕೈದಿಗಳನ್ನು ಇದೇ ರೀತಿಯ ಪರಿಸ್ಥಿತಿಗಳಲ್ಲಿ ಬಿಡುಗಡೆ ಮಾಡಲಾಯಿತು.
Published by: Soumya KN
First published: May 8, 2021, 11:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories