ಸಂಸದ ಡಿ.ಕೆ. ಸುರೇಶ್‌-ಡಿಸಿಎಂ ಅಶ್ವತ್ಥ್‌ ನಾರಾಯಣ್ ಜಟಾಪಟಿಗೆ ವೇದಿಕೆಯಾದ ಸಿಎಂ ಯಡಿಯೂರಪ್ಪ ನೇತೃತ್ವದ ಸಭೆ

ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಮೇಲೆ ಕೆಂಡಾಮಂಡಲವಾಗಿದ್ದ ಸಂಸದ ಡಿ.ಕೆ. ಸುರೇಶ್, “ಸರ್ಕಾರ ಏನು ಮಾಡುತ್ತಿಲ್ಲ.ಇತ್ತ ವಿಪಕ್ಷದ ಸಲಹೆಗಳನ್ನು ಪಡೆಯುತ್ತಿಲ್ಲ. ಮನಸೋಯಿಚ್ಛೆ ಆಡಳಿತ ಮಾಡುತ್ತಿದ್ದೀರಿ.ಇದರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇನ್ನೂ ನಮ್ಮ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೇ ಸರಿಯಿಲ್ಲ ಎಂದು ಡಿಸಿಎಂ ಅಶ್ವತ್ಥ್‌ ನಾರಾಯಣ್ ವಿರುದ್ಧ ಕಿಡಿಕಾರಿದ್ದಾರೆ.

ಡಿ.ಕೆ. ಸುರೇಶ್‌ ಮತ್ತು ಅಶ್ವತ್ಥ್‌ ನಾರಾಯಣ್.

ಡಿ.ಕೆ. ಸುರೇಶ್‌ ಮತ್ತು ಅಶ್ವತ್ಥ್‌ ನಾರಾಯಣ್.

  • Share this:
ಬೆಂಗಳೂರು (ಜೂನ್ 26); ರಾಜ್ಯ ರಾಜಧಾನಿಯಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಇದನ್ನು ನಿಯಂತ್ರಿಸುವ ಕುರಿತು ಸಿಎಂ ಬಿ.ಎಸ್‌. ಯಡಿಯೂರಪ್ಪ ಇಂದು ಬೆಂಗಳೂರಿನ ಎಲ್ಲಾ ಶಾಸಕರ ಸಭೆ ಕರೆದಿದ್ದರು. ಆದರೆ, ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ್ ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿದೆ ಎನ್ನಲಾಗುತ್ತಿದೆ.

ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಮೇಲೆ ಕೆಂಡಾಮಂಡಲವಾಗಿದ್ದ ಸಂಸದ ಡಿ.ಕೆ. ಸುರೇಶ್, “ಸರ್ಕಾರ ಏನು ಮಾಡುತ್ತಿಲ್ಲ.ಇತ್ತ ವಿಪಕ್ಷದ ಸಲಹೆಗಳನ್ನು ಪಡೆಯುತ್ತಿಲ್ಲ. ಮನಸೋಯಿಚ್ಛೆ ಆಡಳಿತ ಮಾಡುತ್ತಿದ್ದೀರಿ.ಇದರಿಂದಲೇ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇನ್ನೂ ನಮ್ಮ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೇ ಸರಿಯಿಲ್ಲ.ಅವರಿಗೆ ಎಲ್ಲಿ, ಯಾವಾಗ, ಏನು ನಿರ್ಧಾರ ತೆಗೆದುಕೊಳ್ಳಬೇಕು? ಎಂಬುದೇ ತಿಳಿದಿಲ್ಲ” ಎಂದು ನೇರಾನೇರ ಡಿಸಿಎಂ ಅಶ್ವತ್ಥ್ ನಾರಾಯಣ್ ವಿರುದ್ಧ ಕಿಡಿಕಾರಿದ್ದಾರೆ.

ಡಿ.ಕೆ.ಸುರೇಶ್ ಮಾತಿಗೆ ಸಭೆಯಲ್ಲಿಯೇ ತಿರುಗೇಟು ಕೊಟ್ಟ ಡಾ.ಅಶ್ವತ್‌ನಾರಾಯಣ್, “ನಾನು ಕೂಡ ಒಬ್ಬ ಜವಾಬ್ದಾರಿ ಇರುವ ವ್ಯಕ್ತಿ. ಉಪ-ಮುಖ್ಯಮಂತ್ರಿ, ಸಚಿವ ಎಂಬ ಪಟ್ಟಕ್ಕಿಂತ ಮೊದಲು ನಾನು ಕೂಡ ಮನುಷ್ಯ. ಅದನ್ನು ಸಂಸದರು ಮತ್ತು ಅವರ ಸಹೋದರ ಅರ್ಥ ಮಾಡಿಕೊಳ್ಳಬೇಕು. ರಾಮನಗರ ಜಿಲ್ಲೆಯಲ್ಲಿ ಆಗುತ್ತಿರುವ ಎಲ್ಲಾ ರಾಜಕೀಯಗಳು ನನಗೆ ಗೊತ್ತಿದೆ.

ನಾವು ಎಲ್ಲವನ್ನೂ ನಿಯಂತ್ರಿಸುವುದು. ಸಂಸದರು ಹಾಗೂ ಅವರ ಸಹೋದರರ ಬೆಂಬಲಿಗರು ಬಂದು ಗಲಾಟೆ ಎಬ್ಬಿಸುವುದು ನಮಗೆ ಗೊತ್ತಿದೆ. ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಸಂದರ್ಭವನ್ನು ಸಂಸದರು ಹಾಗೂ ಅವರ ಸಹೋದರ ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಟಾಂಗ್ ನೀಡಿದ್ದಾರೆ.

ಈ ವೇಳೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತವಾಗಿದೆ. ಆದರೆ, ಅಷ್ಟರಲ್ಲಿ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಮತ್ತು ಕೆ.ಜೆ. ಜಾರ್ಜ್‌ ನಡುವೆಯೂ ಮಾತಿನ ಚಕಮಕಿ ನಡೆದಿದೆ. “ಸಭೆಯಲ್ಲಿ ಮಾತನಾಡಿದ ಕೆ.ಜೆ. ಜಾರ್ಜ್ ನಮ್ಮನ್ನ ಯಾವುದೇ ಸಭೆಗೆ ಬಿಜೆಪಿ ನಾಯಕರು ಕರೆಯುವುದೇ ಇಲ್ಲ” ಎಂದು ಅಸಾಮಾಧನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕುರುಬರ ಸಂಘದ ಚುನಾವಣೆ: ಸಿದ್ದರಾಮಯ್ಯ ಬೆಂಬಲಿಗರಿಗೆ ಭರ್ಜರಿ ಗೆಲುವು, ಈಶ್ವರಪ್ಪಗೆ ತೀವ್ರ ಮುಖಭಂಗ

ಆದರೆ, ಈ ವೇಳೆ ತಿರುಗೇಟು ನೀಡಿರುವ ಸತೀಶ್ ರೆಡ್ಡಿ, “ನೀವು ಬೆಂಗಳೂರಿನ ಮಂತ್ರಿ ಆಗಿದ್ರೀ? ಆಗೆಷ್ಟು ಬಾರಿ ನಮ್ಮನ್ನ ಕರೆದು ಸಭೆ ಮಾಡಿದ್ರೀ” ಎಂದು ಪ್ರತ್ಯುತ್ತರ ನೀಡಿದ್ದಾರೆ. ಈ ವೇಳೆಯೂ ಮಾತಿನ ಚಕಮಕಿ ತಾರಕಕ್ಕೇರಿದೆ. ಆದರೆ, ಇತರೆ ನಾಯಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎನ್ನಲಾಗುತ್ತಿದೆ.
First published: