ಶಾಕಿಂಗ್ ವಿಡಿಯೋ; ಕೊರೋನಾ ಶಂಕಿತರ ಸ್ಯಾಂಪಲ್​ ಕಿಟ್​ನೊಂದಿಗೆ ಮಂಗಗಳು ಪರಾರಿ!

Viral Video: ಉತ್ತರ ಪ್ರದೇಶದ ಮೀರತ್ ಮೆಡಿಕಲ್ ಕಾಲೇಜಿನ ಟೆಕ್ನಿಷಿಯನ್​ಗಳು ಗಂಟಲುದ್ರವದ ಪರೀಕ್ಷೆ ಹಾಗೂ ಇತರೆ ಸ್ಯಾಂಪಲ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಮಂಗಗಳು ದಾಳಿ ನಡೆಸಿವೆ.

Sushma Chakre | news18-kannada
Updated:May 29, 2020, 10:25 PM IST
ಶಾಕಿಂಗ್ ವಿಡಿಯೋ; ಕೊರೋನಾ ಶಂಕಿತರ ಸ್ಯಾಂಪಲ್​ ಕಿಟ್​ನೊಂದಿಗೆ ಮಂಗಗಳು ಪರಾರಿ!
ಪ್ರಾತಿನಿಧಿಕ ಚಿತ್ರ
  • Share this:
ಮೀರತ್ (ಮೇ 29): ಕೊರೋನಾದಿಂದ ಇಡೀ ದೇಶವೇ ತತ್ತರಿಸಿದೆ. ಕೊರೋನಾಗೆ ಚಿಕಿತ್ಸೆ ನೀಡಲು ವೈದ್ಯಕೀಯ ಸಿಬ್ಬಂದಿ ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ. ಆದರೆ, ಕೊರೋನಾ ಶಂಕಿತರ ವೈದ್ಯಕೀಯ ತಪಾಸಣೆಗಾಗಿ ಸ್ಯಾಂಪಲ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಲ್ಯಾಬ್​ ಟೆಕ್ನಿಷಿಯನ್​ಗಳ ಕೈಯಿಂದ ಮಂಗಗಳ ಗುಂಪೊಂದು ಆ ಸ್ಯಾಂಪಲ್​ಗಳನ್ನು ತೆಗೆದುಕೊಂಡು ಪರಾರಿಯಾಗಿರುವ ವಿಚಿತ್ರ ಘಟನೆ ಮೀರತ್​ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮೀರತ್ ಮೆಡಿಕಲ್ ಕಾಲೇಜಿನ ಟೆಕ್ನಿಷಿಯನ್​ಗಳು ಗಂಟಲುದ್ರವದ ಪರೀಕ್ಷೆ ಹಾಗೂ ಇತರೆ ಸ್ಯಾಂಪಲ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಮಂಗಗಳು ದಾಳಿ ನಡೆಸಿವೆ. ಮೂವರು ಕೊರೋನಾ ಶಂಕಿತರ ಸ್ವಾಬ್​ ಕಿಟ್​ಗಳನ್ನು ಕಸಿದುಕೊಂಡು ಮಂಗಗಳು ಮರವೇರಿ ಪರಾರಿಯಾಗಿವೆ. ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದ ಸಿಬ್ಬಂದಿ ತಬ್ಬಿಬ್ಬಾಗಿದ್ದು, ಏನೂ ಮಾಡಲು ಸಾಧ್ಯವಾಗದೆ ಅಸಹಾಯಕರಾಗಿ ನಿಂತಿದ್ದರು. ಬಳಿಕ, ಆಸ್ಪತ್ರೆಯ ಸಿಬ್ಬಂದಿ ಆ ಮಂಗಗಳನ್ನು ಹುಡುಕಿದಾಗ ಮರದ ಮೇಲೆ ಕುಳಿತುಕೊಂಡು ಮಂಗಗಳು ಆ ಕಿಟ್​ ಅನ್ನು ಕಚ್ಚಿ ತಿನ್ನುತ್ತಿರುವ ದೃಶ್ಯ ಕಂಡುಬಂದಿದೆ.ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು ಬರೋಬ್ಬರಿ 248 ಕೊರೋನಾ ಕೇಸ್ ಪತ್ತೆ; ಚಿಕ್ಕಬಳ್ಳಾಪುರದ ರೋಗಿ ಸಾವುಈ ಘಟನೆಯಿಂದ ಆ ಕಾಲೇಜಿನ ಸುತ್ತಮುತ್ತಲಿನ ಜನರು ಹೆದರಿದ್ದು, ಆ ಮಂಗಗಳು ಕಿಟ್​ ಎತ್ತಿಕೊಂಡು ಹೋಗಿರುವುದರಿಂದ ಅವುಗಳಿಂದ ತಮಗೆ ಸೋಂಕು ತಗುಲಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಂಗಗಳು ಮರವೇರಿ ಕುಳಿತು ಕೊರೋನಾ ಸ್ಯಾಂಪಲ್​ ಕಿಟ್​ ಹರಿದು ತಿನ್ನುತ್ತಿರುವ ವಿಡಿಯೋವನ್ನು ಪತ್ರಕರ್ತರೊಬ್ಬರು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ. ಆ ಮೆಡಿಕಲ್ ಕಾಲೇಜಿನಲ್ಲಿ ಮಂಗಗಳ ಕಾಟ ಜಾಸ್ತಿಯಾಗಿತ್ತು.

 

 
First published: May 29, 2020, 10:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading