Corona Virus| ಕೋವಿಡ್ ಸ್ಥಿತಿಗತಿಯನ್ನು ಮಾನಿಟರ್ ಮಾಡಲಾಗುತ್ತಿದೆ, ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ; ಗೌರವ್ ಗುಪ್ತಾ

ಬೆಂಗಳೂರಿನಲ್ಲಿ ಕೊರೋನಾ ಹರಡುವುದನ್ನು ತಡೆಯುವ ಸಲುವಾಗಿ ಮತ್ತು ಕೋವಿಡ್ ನಿಯಮವನ್ನು ಜನ ಸಾಮಾನ್ಯರು ಪಾಲಿಸುವ ಸಲುವಾಗಿ ಮಾರ್ಷಲ್ಸ್ ಗಳ 45 ಟೀಂ ನೇಮಕ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಪಾಲಿಕೆ ಆಯುಕ್ತ ಗೌರವ್ ಗುಪ್ತಾ.

ಪಾಲಿಕೆ ಆಯುಕ್ತ ಗೌರವ್ ಗುಪ್ತಾ.

 • Share this:
  ಬೆಂಗಳೂರು (ಆಗಸ್ಟ್​ 18); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಪ್ರಮಾಣ ಮತ್ತೆ ಏರಿಕೆಯಾಗುತ್ತಿದೆ. ಆದರೆ, ಇಲ್ಲಿನ ಕೋವಿಡ್ ಪರಿಸ್ಥಿತಿ ಕುರಿತಂತೆ ಪ್ರತಿನಿತ್ಯ ಮಾನಿಟರ್ ಮಾಡಲಾಗುತ್ತಿದೆ. ಎಷ್ಟು ಸೋಂಕಿತರಿದ್ದಾರೆ? ಎಷ್ಟು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ? ಎಂಬುದರ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ಮೂರನೇ ಅಲೆಯನ್ನು ಎದುರಿಸಲು ಪಾಲಿಕೆ ಸಂಪೂರ್ಣವಾಗಿ ಸಿದ್ದಗೊಂಡಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಇಂದು ತಿಳಿಸಿದ್ದಾರೆ. ರಾಜ್ಯ ಮತ್ತು ಬೆಂಗಳೂರಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಮತ್ತೆ ಅಧಿಕವಾಗುತ್ತಿರುವ ಹಿನ್ನೆಲೆ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಪಾಸಿಟಿವಿಟ್ ಪ್ರಮಾಣ ಶೇ.2 ನ್ನು ದಾಟಿದರೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್​ಡೌನ್ ಜಾರಿ ಮಾಡುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ. ಹೀಗಾಗಿ ಈ ಬಗ್ಗೆ ಮಾತನಾಡಿರುವ ಗೌರವ್ ಗುಪ್ತಾ,

  "ಬೆಂಗಳೂರಿನಲ್ಲಿ ಕೊರೋನಾ ಹರಡುವುದನ್ನು ತಡೆಯುವ ಸಲುವಾಗಿ ಮತ್ತು ಕೊರೋ ನಾ ನಿಯಮವನ್ನು ಜನ ಸಾಮಾನ್ಯರು ಪಾಲಿಸುವ ಸಲುವಾಗಿ ಮಾರ್ಷಲ್ಸ್ ಗಳ 45 ಟೀಂ ನೇಮಕ ಮಾಡಲಾಗಿದೆ. ಸಿವಿಲ್ ಡಿಫೆನ್ಸ್ ನಿಯೋಜನೆ ಮಾಡಲಾಗಿದೆ. ಮಾರ್ಕೇಟ್ ಗಳಲ್ಲಿ ಕೋವಿಡ್ ನಿಯಮ ಪಾಲನೆ ಆಗುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಮಾರ್ಕೆಟ್ ಗಳಲ್ಲಿ ಹೆಚ್ಚಿನ ಮಾನಿಟರ್ ಮಾಡುವ ಕೆಲಸ ನಡೆಯುತ್ತಿದೆ. ನಮ್ಮಲ್ಲಿರೋ ತಜ್ಞರ ಸಮಿತಿ ಜತೆ ಆಗಾಗ ಸಭೆ ನಡೆಸಲಾಗುತ್ತಿದೆ.

  ಸೆರೋ ಸರ್ವೆ ಕೂಡ ಈಗಾಗಲೇ ಆರಂಭವಾಗಿದೆ. BBMPಯಿಂದಲೂ ಜಿನೋಮಿಕ್ ಸೀಕ್ವೆನ್ಸ್ ಮಾಡಲು ತೀರ್ಮಾನ ಮಾಡಲಾಗಿದೆ. ಹೆಲ್ಮೆಟ್, ಸೀಟ್ ಬೆಲ್ಟ್ ರೀತಿಯಲ್ಲಿಯೇ ಮಾಸ್ಕ್ ಧರಿಸಬೇಕು. ಲಸಿಕೆ ಹಾಕಲು ಹಿಂದೇಟು ಹಾಕುವ ಕಡೆಗಳಲ್ಲಿ ಹೆಚ್ಚಿನ ನಿಗಾ ಇಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಹೆಚ್ಚಿನ ಲಸಿಕೆಗೆ ಬೇಡಿಕೆ ಇಡಲಾಗಿದೆ.

  ಲಸಿಕೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲು ತೀರ್ಮಾನ ಮಾಡಲಾಗಿದೆ. ಹಬ್ಬ ಹರಿದಿನ ಗಳಿಂದ ಕರೋನ ಕೇಸ್ ಹೆಚ್ಚಳವಾಗುವುದರಿಂದ ಬಿಬಿಎಂಪಿಗೆ ತಜ್ಞ ವೈದ್ಯರಿಂದ ಕೊಡಲಾಗಿದೆ ಎಚ್ಚರಿಕೆ ಕುರಿತಂತೆ ಪಾಲಿಕೆ ಈಗಾಗಲೇ ಎಚ್ಚರಿಕೆ ವಹಿಸಿದೆ. ಯಾವುದೇ ಹಬ್ಬ, ಆಚರಣೆ ಇದ್ದರೂ ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಸಲಹೆ ನೀಡಲಾಗಿದೆ" ಎಂದು ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

  ಇದನ್ನೂ ಓದಿ: Afghanistan Crisis| ಸೈನಿಕರು, ರೈತರು ಸೇರಿದಂತೆ ಯಾರೊಂದಿಗೂ ದ್ವೇಷವಿಲ್ಲ, ಎಲ್ಲರನ್ನೂ ಕ್ಷಮಿಸಲಾಗಿದೆ; ತಾಲಿಬಾನ್ ಘೋಷಣೆ

  ಇದೇ ಸಂದರ್ಭದಲ್ಲಿ ಶಾಲೆಗಳ ಆರಂಭದ ಬಗ್ಗೆಯೂ ಮಾತನಾಡಿರುವ ಪಾಲಿಕೆ ಆಯುಕ್ತ ಗೌರವ್ ಗುಪ್ತಾ, "ಇದೇ 23 ರಿಂದ ಶಾಲೆ ಆರಂಭ ಹಿನ್ನಲೆ, ಕಾಲೇಜಿಗೆ ತೆರಳುವವರಿಗೆ ಕಡ್ಡಾಯ ವ್ಯಾಕ್ಸಿನ್ ನೀಡಲಾಗಿದೆ. ಕೋವಿಡ್ ನಿಯಮ ಪಾಲನೆ ವಿಚಾರಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ. ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಅವಕಾಶ ನೀಡುವಂತೆ ಸೂಚನೆ ನೀಡಲಾ ಗಿದೆ. ಶಾಲಾ ಬಸ್, ಖಾಸಗಿ ಶಾಲೆಗಳಲ್ಲಿ SOP ಪಾಲನೆ ಕುರಿತಂತೆ ಸೂಚಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿ ತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮ ಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾ ರಿಯುತವಾಗಿ ನಡೆದು ಕೊಳ್ಳಬೇಕು.
  Published by:MAshok Kumar
  First published: