ವಲಸೆ ಕಾರ್ಮಿಕರ ಹಸಿವನ್ನು ನೀಗಿಸಿದ ಟೀಂ ಇಂಡಿಯಾದ ವೇಗಿ ಮೊಹಮ್ಮದ್​​ ಶಮಿ

Mohammed Shami: ಉತ್ತರ ಪ್ರದೇಶದ ಸಹಸ್ಪುರದ ತಮ್ಮ ಮನೆಯ ಬಳಿ ವಲಸಿಗರಿಗಾಗಿ ಆಹಾರ ವಿತರಣಾ ಕೇಂದ್ರವನ್ನು ಸ್ಥಾಪಿಸಿರುವ ಮೊಹಮ್ಮದ್​​ ಶಮಿ, ಆ ಮೂಲಕ ಕಾರ್ಮಿಕರಿಗೆ ಬೇಕಾದ ಅಗತ್ಯದ ವಸ್ತುಗಳನ್ನು ವಿತರಿಸುತ್ತಿದ್ದಾರೆ.

news18-kannada
Updated:June 2, 2020, 3:46 PM IST
ವಲಸೆ ಕಾರ್ಮಿಕರ ಹಸಿವನ್ನು ನೀಗಿಸಿದ ಟೀಂ ಇಂಡಿಯಾದ ವೇಗಿ ಮೊಹಮ್ಮದ್​​ ಶಮಿ
ಮೊಹಮ್ಮದ್​​ ಶಮಿ
  • Share this:
ಟೀಂ ಇಂಡಿಯಾದ ಅನೇಕ ಕ್ರಿಕೆಟಿಗರು ಕೊವೀಡ್​ -19ನಿಂದಾಗಿ ಸಂಕಷ್ಟದಲ್ಲಿದ್ದ ಬಡ ಕಾರ್ಮಿಕರ ನೆರವಿಗೆ ಧಾವಿಸಿ ತಮ್ಮ ಕೈಯಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಟೀಂ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ಸಹ ವಲಸೆ ಕಾರ್ಮಿಕರ ನೆರವಿಗೆ ನಿಂತು ಆಹಾರ ಮತ್ತು ಸುರಕ್ಷತೆಗಾಗಿ ಮಾಸ್ಕ್​ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದ ಸಹಸ್ಪುರದ ತಮ್ಮ ಮನೆಯ ಬಳಿ ವಲಸಿಗರಿಗಾಗಿ ಆಹಾರ ವಿತರಣಾ ಕೇಂದ್ರವನ್ನು ಸ್ಥಾಪಿಸಿರುವ ಮೊಹಮ್ಮದ್​​ ಶಮಿ, ಆ ಮೂಲಕ ಕಾರ್ಮಿಕರಿಗೆ ಬೇಕಾದ ಅಗತ್ಯದ ವಸ್ತುಗಳನ್ನು ವಿತರಿಸುತ್ತಿದ್ದಾರೆ. ಮುಖ್ಯವಾಗಿ ಆಹಾರ ಪ್ಯಾಕೆಟ್​ಗಳು ಮತ್ತು ಮಾಸ್ಕ್​ ನೀಡುವ ಮೂಲಕ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಶಮಿ ಅವರ ಈ ಮಾನವೀಯತೆ ಕೆಲಸವನ್ನು ಬಿಸಿಸಿಐ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ಮೊಹಮ್ಮದ್​ ಶಮಿ ಉತ್ತರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 24ರಲ್ಲಿ ತಮ್ಮ ಮನೆ ಸೇರುತ್ತಿರುವ ವಲಸೆ ಕಾರ್ಮಿಕರಿಗೆ ಆಹಾರ ಪ್ಯಾಕೆಟ್​ ಮತ್ತು ಮಾಸ್ಕ್​ಗಳನ್ನು ವಿತರಿಸುವ ಮೂಲಕ ಸಹಾಯ ಮಾಡಿದ್ದಾರೆ. ಅವರು ಸಹಸ್ಪುರದ ತಮ್ಮ ಮನೆಯ ಬಳಿ ಆಹಾರ ವಿತರಣಾ ಕೇಂದ್ರ ತೆರೆದಿದ್ದಾರೆ ಎಂದು ಬಿಸಿಸಿಐ ಟ್ವೀಟ್​ ಮಾಡಿದೆ.

 ಮಹಾಮಾರಿ ಕೊರೋನಾ ಹಾವಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಕೊವೀಡ್​​-19 ಮಹಾಮಾರಿಯನ್ನು ಭಾರತದಿಂದ ಓಡಿಸಲು ಶತಪ್ರಯತ್ನ ಮಾಡುತ್ತಿದೆ. ಈಗಾಗಲೇ ಕೊರೋನಾಗೆ 5 ಸಾವಿರಕ್ಕೂ ಹೆಚ್ಚು ಜನರು ಈ ವೈರಾಣುವಿಗೆ ಸಾವನ್ನಪ್ಪಿದ್ದು, 2 ಲಕ್ಷ ಜನರಿಗೆ ಸೋಂಕು ತಗುಲಿದೆ.

Rishab Shetty: ಅಂಡರ್​​ವರ್ಲ್ಡ್​ಗೆ​ ಕಾಲಿಟ್ಟ ಶೆಟ್ರು; ಭೂಗತ ದೊರೆ ಅಮರ್​ ಆಳ್ವ ಪಾತ್ರದಲ್ಲಿ ​​​ರಿಷಬ್
First published: June 2, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading