ಕೊರೋನಾಗೆ ಮುಸ್ಲಿಮರು ಕಾರಣ ಎನ್ನುವ ಕೇಂದ್ರ ತಬ್ಲಿಘಿ ಜಮಾತ್​​ ಧಾರ್ಮಿಕ ಸಭೆಗೆ ಅನುಮತಿ ನೀಡಿದ್ಯಾಕೇ?: ಎಸ್​.ಆರ್​​ ಪಾಟೀಲ್​​ ಪ್ರಶ್ನೆ

ರಾಜ್ಯ, ಕೇಂದ್ರದಲ್ಲಿ ಒಂದೇ ಸರ್ಕಾರವಾದರೇ ಸ್ವರ್ಗ ಮಾಡ್ತೀವಿ ಅಂದ್ರು ಬಿಜೆಪಿಯವರು. ಆದರೆ, ಪ್ರವಾಹ ಬಂದಾಗ ಕೇಂದ್ರದಿಂದ ಸೂಕ್ತ ಪರಿಹಾರ ಬರಲಿಲ್ಲ. ರಾಜ್ಯ ಸರ್ಕಾರ ಲಾಕ್ ಡೌನ್ ವೇಳೆ ಬಡವರಿಗೆ ಅಕ್ಕಿ ಕೊಟ್ಟಿದ್ದು ಬಿಟ್ರೆ ಬೇರೆ ಏನು ಮಾಡಿಲ್ಲ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿಲ್ಲ. ಅಕ್ಕಿ ಕೊಡುವುದು ನಮ್ಮ ಸರ್ಕಾರದಿಂದಲೇ ಬಂದಿದೆ ಎಂದು ಹೇಳಿದರು.

news18-kannada
Updated:April 23, 2020, 8:52 PM IST
ಕೊರೋನಾಗೆ ಮುಸ್ಲಿಮರು ಕಾರಣ ಎನ್ನುವ ಕೇಂದ್ರ ತಬ್ಲಿಘಿ ಜಮಾತ್​​ ಧಾರ್ಮಿಕ ಸಭೆಗೆ ಅನುಮತಿ ನೀಡಿದ್ಯಾಕೇ?: ಎಸ್​.ಆರ್​​ ಪಾಟೀಲ್​​ ಪ್ರಶ್ನೆ
ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ ಎಸ್​.ಆರ್​. ಪಾಟೀಲ್.
  • Share this:
ಬಾಗಲಕೋಟೆ(ಏ.23): ದೇಶಾದ್ಯಂತ ಕೊರೋನಾ ಹರಡಲು ದೆಹಲಿಯ ನಿಜಾಮುದ್ದೀನ್​​ನಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯೇ ಕಾರಣ ಎನ್ನುತ್ತಿರುವ ಕೇಂದ್ರ ಸರ್ಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ಯಾಕೇ? ಎಂದು ವಿಧಾನಪರಿಷತ್​​ ವಿರೋಧ ಪಕ್ಷದ ನಾಯಕ ಎಸ್​.ಆರ್​​ ಪಾಟೀಲ್​​ ಪ್ರಶ್ನಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಧಾರ್ಮಿಕ ಸಭೆಗೆ ಅನುಮತಿ ನೀಡಿದ್ದೇ ದೆಹಲಿ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್​​ ಷಾ ಮೂಗಿನ ನೇರಕ್ಕೆ ಕೆಲಸ ಮಾಡುವ ಪೊಲೀಸರು ಎಂದರು.

ಕೋವಿಡ್​​-19 ತೀವ್ರಗೊಳ್ಳುತ್ತಿದೆ ಎಂದಮೇಲೆ ದೆಹಲಿ ಧಾರ್ಮಿಕ ಸಭೆಗೆ ಅನುಮತಿ ನೀಡಬಾರದಿತ್ತು. ಈ ಕಾರ್ಯಮದಲ್ಲಿ 42 ವಿದೇಶಿಗರು ಭಾಗಿಯಾಗುತ್ತಿದ್ದಾರೆ ಎಂದು ಪೊಲೀಸರಿಗೆ ಗೊತ್ತಿತ್ತು. ಹೀಗೆ ಗೊತ್ತಿದ್ದು ಧಾರ್ಮಿಕ ಸಭೆ ಯಾಕೇ ರದ್ದು ಮಾಡಲಿಲ್ಲ? ಮತ್ತದೇ ವಿದೇಶಿಗರಿಗೆ ವೀಸಾ ನೀಡಿದ್ದು ಯಾರು? ಯಾಕೇ ವೀಸಾ ನೀಡಬೇಕಿತ್ತು? ಎಂದು ಕೇಂದ್ರ ಸರ್ಕಾರಕ್ಕೆ ಎಸ್​.ಆರ್​​ ಪಾಟೀಲ್​​ ಪ್ರಶ್ನಿಸಿದ್ದಾರೆ.

ಹೀಗೆ ಮುಂದುವರೆದ ಅವರು, ನಾನು ಲಾಕ್​​ಡೌನ್ ಮಾಡಿದ್ದು ಸ್ವಾಗತಿಸ್ತೀನಿ. ಆದರೆ, ಕೋಟೆ ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದ್ರೇನಾಗುತ್ತೇ? ಕಳ್ಳರು ಒಳಗೆ ಇದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸೋಂಕಿತರನ್ನು ಕದೀಮರಿಗೆ ಹೋಲಿಸಿದರು ಎಸ್​​.ಆರ್​​​ ಪಾಟೀಲ್​​.

ಇನ್ನು, ಬಹಳಷ್ಟು ಜನ ಕೊರೋನಾ ಪೀಡಿತ ದೇಶದಿಂದ ಬಂಂದರು. ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ಸ್ವಾಗತ, ಮಧ್ಯಪ್ರದೇಶ ಸರ್ಕಾರ ಬೀಳಿಸುವ ಕೆಲದಲ್ಲಿ ಬ್ಯುಸಿ ಆಗಿದ್ದರು. ಈ ಗಮನವನ್ನು ದೇಶದ ಕಡೆಗೆ ಕೊಟ್ಟಿದ್ದರೇ ಇಂದು ಕೊರೋನಾವೇ ಇರುತ್ತಿರಲಿಲ್ಲ. ವಿದೇಶದಿಂದ ಬಂದವರನ್ನು ಅಂದೇ ಕ್ವಾರಂಟೈನ್, ಟೆಸ್ಟ್ ಮಾಡಿದ್ರೆ ಒಂದೇ ಒಂದು ಪಾಸಿಟಿವ್ ಕೇಸ್​ ಪತ್ತೆಯಾಗುತ್ತಿರಲಿಲ್ಲ. ಲಾಕ್ ಡೌನ್, ಸೀಲ್ ಡೌನ್ ಮಾಡುವ ಪ್ರಶ್ನೆಯೇ ಇರುತ್ತಿರಲಿಲ್ಲ. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗುವ, ಬಡವರು ಹಸಿವಿನಿಂದ ಬಳಲುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ರಾಜ್ಯ, ಕೇಂದ್ರದಲ್ಲಿ ಒಂದೇ ಸರ್ಕಾರವಾದರೇ ಸ್ವರ್ಗ ಮಾಡ್ತೀವಿ ಅಂದ್ರು ಬಿಜೆಪಿಯವರು. ಆದರೆ, ಪ್ರವಾಹ ಬಂದಾಗ ಕೇಂದ್ರದಿಂದ ಸೂಕ್ತ ಪರಿಹಾರ ಬರಲಿಲ್ಲ. ರಾಜ್ಯ ಸರ್ಕಾರ ಲಾಕ್ ಡೌನ್ ವೇಳೆ ಬಡವರಿಗೆ ಅಕ್ಕಿ ಕೊಟ್ಟಿದ್ದು ಬಿಟ್ರೆ ಬೇರೆ ಏನು ಮಾಡಿಲ್ಲ.  ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಿಲ್ಲ. ಅಕ್ಕಿ ಕೊಡುವುದು ನಮ್ಮ ಸರ್ಕಾರದಿಂದಲೇ ಬಂದಿದೆ ಎಂದು ಹೇಳಿದರು.
First published: April 23, 2020, 8:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading