ನನ್ನ ಮಗಳು ಸೇರಿ ಹಲವರು ಲಂಡನ್​ನಲ್ಲಿ ಇದ್ದಾರೆ, ಅವರು ಬರಲು ಸೂಕ್ತ ವ್ಯವಸ್ಥೆ ಮಾಡಿ; ಪರಿಷತ್​ನಲ್ಲಿ ಜಯಮಾಲಾ ಅಳಲು

ಅರಣ್ಯ ಸಚಿವ ಆನಂದ್ ಸಿಂಗ್ ಅವರ ಮಗಳು ವೈಷ್ಣವಿ ಕೂಡ ಇಟಲಿ ರಾಜಧಾನಿ ರೋಮ್​ನಲ್ಲಿ ಸಿಲುಕಿಕೊಂಡಿದ್ದರು. ಭಾರತಕ್ಕೆ ಬರಲು ವಿಮಾನ ಇಲ್ಲದ ಕಾರಣ ಹಲವು ದಿನ ವಿಮಾನ ನಿಲ್ದಾಣದಲ್ಲಿಯೇ ಇರಬೇಕಾಗಿ ಬಂತು. ಇವರೊಂದಿಗೆ ಸುಮಾರು 300 ಭಾರತೀಯ ವಿದ್ಯಾರ್ಥಿಗಳು ಇದ್ದರು.

ಜಯಮಾಲ

ಜಯಮಾಲ

 • Share this:
  ಬೆಂಗಳೂರು: ಮಾರಕ ಕೊರೋನಾ ವೈರಸ್ ವಿಶ್ವವನ್ನೇ ಬಾಧಿಸುತ್ತಿರುವಂತೆ ದೇಶದಲ್ಲೂ ಆತಂಕ ಸೃಷ್ಟಿಸಿದೆ. ಅದರಲ್ಲೂ ವಿದೇಶದಲ್ಲಿರುವ ಭಾರತೀಯರು ಭೀತಿಯಲ್ಲಿಯೇ ದಿನ ದೂಡುವಂತೆ ಮಾಡಿದೆ. ಈಗಾಗಲೇ ವಿದೇಶದಲ್ಲಿ ಇರುವ 276 ಮಂದಿ ಕೊರೋನಾ ಸೋಂಕು ಪೀಡಿತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿದೇಶದಲ್ಲಿ ಇರುವವರು ಭಾರತಕ್ಕೆ ಬರಲು ತಯಾರಾಗಿದ್ದರೂ ಬರುವುದಕ್ಕೆ ಯಾವುದೇ ವಿಮಾನಗಳಿಲ್ಲ. ಕರ್ನಾಟಕ ವಿಧಾನ ಪರಿಷತ್ ಸದಸ್ಯೆ, ನಟಿ ಜಯಮಾಲಾ ಅವರ ಮಗಳು ಕೂಡ ಲಂಡನ್​ನಲ್ಲಿ ಸಿಲುಕಿದ್ದು, ದೇಶಕ್ಕೆ ವಾಪಸ್ಸಾಗಲು ವಿಮಾನವಿಲ್ಲದೇ ಕಂಗಾಲಾಗಿದ್ದಾರೆ.

  ಇಂದು ವಿಧಾನ ಪರಿಷತ್​ನಲ್ಲಿ ಕೊರೋನಾ ವೈರಸ್​ ವಿಚಾರವಾಗಿ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡುವಾಗ ಮಾತನಾಡಿದ ಜಯಮಾಲಾ, ನನ್ನ ಮಗಳು ಲಂಡನ್ ನಲ್ಲಿ ಬಂದಿಳಿದಿದ್ದಾಳೆ. ಆದರೆ ಅಲ್ಲಿ ವಿಮಾನಗಳಿಲ್ಲ. ಕೊರೋನಾ ವೈರಸ್ ಹೇಗೆ ಹರಡುತ್ತಿದೆ ಎಂಬುದನ್ನು ಹೇಳಲಾಗುತ್ತಿಲ್ಲ. ನನ್ನ ಮಗಳ ರೀತಿ ಅನೇಕರು ಅರ್ಧದಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ. ದಯವಿಟ್ಟು ಅವರಿಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಅಳಲು ತೋಡಿಕೊಂಡರು.

  ಇದನ್ನು ಓದಿ: ಮತ್ತೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆ; ರಾಜ್ಯದಲ್ಲಿ ಒಟ್ಟು 14ಕ್ಕೆ ಏರಿದ ಸೋಂಕಿತರ ಸಂಖ್ಯೆ

  ಅರಣ್ಯ ಸಚಿವ ಆನಂದ್ ಸಿಂಗ್ ಅವರ ಮಗಳು ವೈಷ್ಣವಿ ಕೂಡ ಇಟಲಿ ರಾಜಧಾನಿ ರೋಮ್​ನಲ್ಲಿ ಸಿಲುಕಿಕೊಂಡಿದ್ದರು. ಭಾರತಕ್ಕೆ ಬರಲು ವಿಮಾನ ಇಲ್ಲದ ಕಾರಣ ಹಲವು ದಿನ ವಿಮಾನ ನಿಲ್ದಾಣದಲ್ಲಿಯೇ ಇರಬೇಕಾಗಿ ಬಂತು. ಇವರೊಂದಿಗೆ ಸುಮಾರು 300 ಭಾರತೀಯ ವಿದ್ಯಾರ್ಥಿಗಳು ಇದ್ದರು. ಕೊನೆಗೆ ಕೇಂದ್ರ ಸರ್ಕಾರ ಅವರನ್ನೆಲ್ಲಾ ಭಾರತಕ್ಕೆ ಸುರಕ್ಷಿತವಾಗಿ ಕರೆತಂದಿದೆ.
  First published: