ಬಕ್ರೀದ್ ಹಬ್ಬದ ನಿಮಿತ್ತ ಕಾನೂನು ಬದ್ಧ ಪ್ರಾಣಿ ವಧೆಗೆ ಅವಕಾಶ ಕೊಡಿ ; ಸರ್ಕಾರಕ್ಕೆ ವಿಧಾನ ಪರಿಷತ್​ ಸದಸ್ಯ ಸಿ ಎಂ ಇಬ್ರಾಹಿಂ ಮನವಿ

ಬಕ್ರೀದ್ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಪ್ರಾಣಿಗಳ ವಧೆಗೆ ಕಾನೂನು ರೀತಿಯಲ್ಲಿ‌ ಅವಕಾಶ ನೀಡಬೇಕು. ಪ್ರಾಣಿಗಳನ್ನ ಸಾಗಿಸುವ ವೇಳೆ ಅಡೆತಡೆ ಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು

ವಿಧಾನ ಪರಿಷತ್ ಸದಸ್ಯ  ಸಿ ಎಂ ಇಬ್ರಾಹಿಂ

ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ

  • Share this:
ಬೆಂಗಳೂರು(ಜುಲೈ.22): ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವೂ ಉತ್ತಮ ರೀತಿಯಲ್ಲಿ ನಡೆಯುತ್ತಿಲ್ಲ. ಬದುಕಿದ್ದರೆ ಮೂರು ಅಡಿ ಅಂತರ ಇರಲಿ ಅಂತಾರೆ ಸತ್ತರೆ ಎಂಟು ಅಡಿಯಲ್ಲಿ ಹೂಳಿ ಅಂತಾರೆ ಹೇಗೆ ಇದು ? ಇದು ವೈಜ್ಞಾನಿಕವಾಗಿ ನಿಜವೇ ಎನ್ನುವುದನ್ನ ಸರ್ಕಾರ ಹೇಳಬೇಕು. ಮನುಷ್ಯ ಜೀವಂತವಾಗಿದ್ದರೆ ಕೊರೋನಾ ಜೀವಂತವಾಗಿರುತ್ತೆ. ಮನಷ್ಯ ಸತ್ತರೆ ದೇಹದಲ್ಲಿರುವ ಕೊರೋನಾ ವೈರಸ್ ಕೂಡ ಸಾಯುತ್ತೆ ಇದು ನನಗೆ ಗೊತ್ತಿರುವ ವಿಚಾರ ಎಂದು ವಿಧಾನ ಪರಿಷತ್​ ಸದಸ್ಯ ಸಿ ಎಂ‌ ಇಬ್ರಾಹಿಂ ಹೇಳಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ತೀರ್ಮಾನದಿಂದಾಗಿ ತಂದೆ ಮಗನನ್ನು, ಮಗ ತಂದೆಯನ್ನು, ಹೆಂಡತಿ ಗಂಡನನ್ನು ಗಂಡ ಹೆಂಡತಿಯನ್ನು ಮುಟ್ಟಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರವೇ ಕಾರಣ. ಸೋಂಕಿನಿಂದ ಸತ್ತವರ ಅಂತ್ಯ ಸಂಸ್ಕಾರವನ್ನ ಮಾಡಲು ಜನರಿಲ್ಲ ಅಂದರೆ ನಮಗೆ ಹೇಳಿ. ‌ನಮ್ಮ ಹುಡುಗರು ಅಂತ್ಯ ಸಂಸ್ಕಾರ ಮಾಡ್ತಾರೆ ಎಂದು ಸರ್ಕಾರದ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಡಿಸಿದರು.

ಇನ್ನೂ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಹಗರಣದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲೋ ಒಂದು ಕಡೆ ಅವ್ಯವಹಾರ ನಡೆದಿದೆ. ತಬ್ಲಿಘಿಗಳಿಂದ ಕೊರೋನಾ ಹರಡುತ್ತಿದೆ ಎನ್ನುವುದನ್ನು ಈಗಲೂ ಸಚಿವ ಬಿ ಸಿ ಪಾಟೀಲ್ ಹೇಳುತ್ತಿದ್ದಾರೆ. ಇದೆಲ್ಲಾ ಬಿಟ್ಟು ಗಮನವನ್ನ‌ ಕೋವಿಡ್ ಮೇಲೆ ಗಮನ ಕೊಡಲಿ ಎಂದರು.

ಬಕ್ರೀದ್ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಪ್ರಾಣಿಗಳ ವಧೆಗೆ ಕಾನೂನು ರೀತಿಯಲ್ಲಿ‌ ಅವಕಾಶ ನೀಡಬೇಕು. ಪ್ರಾಣಿಗಳನ್ನ ಸಾಗಿಸುವ ವೇಳೆ ಅಡೆತಡೆ ಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದನ್ನೂ ಓದಿ : ಬಸ್ ನತ್ತ ಮುಖ ಮಾಡದ ಪ್ರಯಾಣಿಕರು; ಅನ್ ಲಾಕ್ ಆದರೂ ಮೆಜೆಸ್ಟಿಕ್ ಖಾಲಿ‌ ಖಾಲಿ

ಕಾನೂನು ಬದ್ಧವಾಗಿ ಸಾಗಾಣಿಕೆ ಮಾಡುವ ಪ್ರಾಣಿಗಳಿಗೂ ಅಡತಡೆಯಾಗದಂತೆ ನೋಡಿಕೊಳ್ಳಬೇಕು. ಭಾವನಾತ್ಮಕ ವಿಚಾರಗಳ ಬಗ್ಗೆ ಆಟವಾಡಬೇಡಿ ಎಂದು ಸಿ ಎಂ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.

ಬಕ್ರೀದ್ ಹಬ್ಬದಂದು ಮನೆಯಲ್ಲೇ ಪ್ರಾರ್ಥನೆ ಮಾಡಬೇಕಾ ಅಥವಾ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಬೇಕಾ ಎನ್ನುವುದರ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿಬೇಕೆಂದು ಇಬ್ರಾಹಿಂ ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ‌ ಇಲ್ಲದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿ ಎಂ ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ‌ ಇಲ್ಲ ಅಂತಾ ನನಗೇನು ಅನಿಸುತ್ತಿಲ್ಲ. ನಾನು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆ ಮಾತನಾಡುತ್ತೇನೆ ಎಂದರು.
Published by:G Hareeshkumar
First published: