ಕೋವಿಡ್​​-19 ತಡೆಗೆ ಬೂತ್​​ ಮಟ್ಟದ ಟಾಸ್ಕ್​​ ಫೋರ್ಸ್​​: ಯಲಹಂಕದಲ್ಲಿ ಶಾಸಕ ಎಸ್​ ಆರ್​​ ವಿಶ್ವನಾಥ್​​ ಮನೆ ಮನೆ ಭೇಟಿ

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಪ್ರತಿ ಬೂತ್ ನಲ್ಲಿ 10 ಜನ ಪಟ್ಟಿ ಮಾಡಲಾಗಿದೆ. ಮೂರರಿಂದ ಐದು ಜನರ ತಂಡ ಎಲ್ಲ ಮನೆಗಳಿಗೂ ಭೇಟಿ ನೀಡಿ ಸ್ವಾಬ್ ಟೆಸ್ಟ್ ಮಾಡಿಸಲು ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ - ಎಸ್​ ಆರ್​ ವಿಶ್ವನಾಥ್​

​​: ಯಲಹಂಕದಲ್ಲಿ ಶಾಸಕ ವಿಶ್ವನಾಥ್​​ ಮನೆ ಮನೆ ಭೇಟಿ

​​: ಯಲಹಂಕದಲ್ಲಿ ಶಾಸಕ ವಿಶ್ವನಾಥ್​​ ಮನೆ ಮನೆ ಭೇಟಿ

  • Share this:
ಯಲಹಂಕ(ಜು.12): ರಾಜ್ಯಾಂದ್ಯಂತ ಕೋವಿಡ್-19 ರುದ್ರ ತಾಂಡವವಾಡುತ್ತಿದೆ. ಇನ್ನು ನಗರದಲ್ಲಿ ಸೋಂಕಿತರ ಸಂಖ್ಯೆ 17 ಸಾವಿರ ಗಡಿಯಲ್ಲಿದೆ. ಸೋಂಕನ್ನು ಶೀಘ್ರವಾಗಿ ಪತ್ತೆಹಚ್ಚಿ ನಿಯಂತ್ರಣಕ್ಕೆ ತಂದು ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲೆ ಪ್ರಥಮ ಬಾರಿಗೆ ನಾನು ನನ್ನ ಕುಟುಂಬ ನನ್ನ ಬೂತ್ ಎಂಬ ಸಂಕಲ್ಪದೊಂದಿಗೆ ಬೂತ್ ಟಾಸ್ಕ್ ಫೋರ್ಸ್ ತಂಡ ರಚಿಸಲಾಗಿದೆ. 

ಸಚಿವ ಸುಧಾಕರ್ ಪ್ರಥಮ ಬಾರಿಗೆ ಮನೆಮನೆಗೆ ತೆರಳಿ ರ‍್ಯಾಪಿಡ್ ಟೆಸ್ಟ್ ಮಾಡಲು ರಾಜ್ಯದಲ್ಲೆ ಪ್ರಥಮ ಬಾರಿಗೆ ತಂಡ ರಚಿಸಿ, ಮನೆ ಮನೆಗೆ ತೆರಳಿ ಸೋಂಕಿತರನ್ನು ಪತ್ತೆ ಹಚ್ಚಿ  ಪರೀಕ್ಷೆ ಮಾಡಲಾಗುವುದು. ಈ ಪರೀಕ್ಷೆಯಲ್ಲಿ ಕೇವಲ 20 ನಿಮಿಷದಲ್ಲೆ ಫಲಿತಾಂಶ ಕೈ ಸೇರಲಿದೆ. ಹೀಗಾಗಿ ರೋಗಪತ್ತೆ ಬಹಳಷ್ಟು ಸುಲಭವಾಗಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ  ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಪ್ರತಿ ಬೂತ್ ನಲ್ಲಿ 10 ಜನ ಪಟ್ಟಿ ಮಾಡಲಾಗಿದೆ. ಮೂರರಿಂದ ಐದು ಜನರ ತಂಡ ಎಲ್ಲ ಮನೆಗಳಿಗೂ ಭೇಟಿ ನೀಡಿ ಸ್ವಾಬ್ ಟೆಸ್ಟ್ ಮಾಡಿಸಲು ಪ್ರತ್ಯೇಕ ಜವಾಬ್ದಾರಿ ನೀಡಲಾಗಿದೆ. 20 ನಿಮಿಷಗಳಲ್ಲೆ ಕೋವಿಡ್ -19 ಫಲಿತಾಂಶ ಬರುವುದರಿಂದ ರೋಗ ಪತ್ತೆ ಸುಲಭವಾಗಲಿದೆ. ನಾಗರಿಕರು ಸಹಕಾರ ನೀಡಬೇಕು. ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಟೆಸ್ಟಿಂಗ್ ಮುಂದುವರೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 32 ಸಾವಿರ ಜನಕ್ಕೆ ಕೊರೋನಾ ಬಂದಿದೆ. ಅವರ ಕುಟುಂಬದ ಆರೋಗ್ಯ ತಪಾಸಣೆ ಮಾಡುವ ಅನಿವಾರ್ಯತೆ ಇದೆ. ಹೀಗಾಗಿ, ಯಲಹಂಕ ಕ್ಷೇತ್ರಾದ್ಯಂತ ಕೋವಿಡ್ ಟಾಸ್ಕ್ ಪೋರ್ಸ್ ತಂಡ ರಚಿಸಲಾಗಿದೆ. 2 ಸಾವಿರ ಜನ ಅಧಿಕಾರಿಗಳು 6 ಸಾವಿರ ಜನರ ಸ್ವಯಂಸೇವಕರ ತಂಡ ರಚಿಸಲಾಗಿದೆ. ಪ್ರತಿ ಮನೆಗೆ ಭೇಟಿ ನೀಡಿ ಥರ್ಮಲ್ ಸ್ಕ್ಯಾನ್, ಆಕ್ಸಿಜನ್ ಚೆಕ್ ಮಾಡಲಾಗುವುದು. ಸಮೀಕ್ಷೆ ಪೂರ್ಣಗೊಂಡ ನಂತರ ರೋಗದ ಲಕ್ಷಣ ಇರುವವರಿಗೆ ಸ್ವಾಬ್ ಟೆಸ್ಟ್ ಮಾಡಿಸಲಾಗುವುದು. ಈ ಮೂಲಕ ಕೊರೊನಾ ಮುಕ್ತ ಮಾಡಲು ಸಂಕಲ್ಪ ಮಾಡಲಾಗಿದೆ ಎಂದರು ತಹಶೀಲ್ದಾರ್ ರಘುಮೂರ್ತಿ.

ದೀರ್ಘಕಾಲಕ್ಕೆ ರೋಗದ ಲಕ್ಷಣ ಇದ್ದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಮಸ್ಯೆ ಆಗುತ್ತಿದೆ. ಅದನ್ನ ಬಗೆಹರಿಸುವ ಕೆಲಸ ಮಾಡುತ್ತೇವೆ. ಬೆಂಗಳೂರಿನ ಹೆಚ್ಚು ಸೋಂಕಿತರಾಗುತ್ತಿದ್ದಾರೆ. ಟೆಸ್ಟಿಂಗ್ ಸರಿಯಾದ ರೀತಿಯಲ್ಲಿ ಆಗಬೇಕೆಂಬ ನಿಟ್ಟಿನಲ್ಲಿ ಸಮಾಲೋಚಿಸಿ ಲಾಕ್​​ಡೌನ್ ಜಾರಿಗೆ ತರಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಕೊರೋನಾ ರಣಕೇಕೆ: ಒಂದೇ ದಿನ 20 ಮಂದಿಗೆ ಸೋಂಕು

ಕಾರ್ಯಾಚರಣೆಗೆ ಸಾರ್ವಜನಿಕರೆ ಸ್ವಯಂ ಪ್ರೇರಿತರಾಗಿ ಮುಂದಾಗಿದ್ದು, ವಕೀಲ ಕಡತನಮಲೆ ಸತೀಶ್, ವೈದ್ಯಕೀಯ ಸಿಬ್ಬಂದಿ, ಕಂದಾಯ ಸಿಬ್ಬಂದಿಗಳ ರಮೇಶ್ ಬಾಬು ನೇತೃತ್ವದಲ್ಲಿ ತಂಡಗಳು ರಚನೆ ಮಾಡಲಾಗಿದೆ.
Published by:Ganesh Nachikethu
First published: