ಕೊರೋನಾ ಸಂಕಷ್ಟ: 158 ಅರ್ಚಕರ ನೆರವಿಗೆ ಧಾವಿಸಿದ ಶಾಸಕ ಎಚ್​.ಆರ್​​ ವಿಶ್ವನಾಥ್​​​

ಭಕ್ತರು ದೇವರ ದರ್ಶನಕ್ಕೆ ಬಂದಲ್ಲಿ ಕನಿಷ್ಠ ಅರ್ಚಕರ ಜೀವನಕ್ಕೆ ದಾರಿ ಆಗಲಿದೆ ಎಂಬುದಾಗಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಅಭಿಪ್ರಾಯ.

ಶಾಸಕ ಎಸ್​​.ಆರ್​​ ವಿಶ್ವನಾಥ್​​

ಶಾಸಕ ಎಸ್​​.ಆರ್​​ ವಿಶ್ವನಾಥ್​​

  • Share this:
ಯಲಹಂಕ(ಆ.02): ಪ್ರಪಂಚಾದ್ಯಂತ ಕೊರೋನಾ ರಣಕೇಕೆ ಮುಂದುವರಿದಿದೆ. ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರ ಜೊತೆಗೆ ಸಣ್ಣಪುಟ್ಟ ಉದ್ಯಮಗಳು, ಅಂಗಡಿ, ವ್ಯಾಪಾರ ವಹಿವಾಟುಗಳ ಮಳೆ ಬರೆ ಎರೆದಿದೆ. ಅದರಲ್ಲಿ ದೇಗುಲಗಳು, ದೇವರು ಹೊರತಾಗಿಲ್ಲ.

ಕೊರೋನಾ ಹೊಡೆತಕ್ಕೆ ದೇವರು ದೇವಸ್ಥಾನಗಳು ತತ್ತರಿಸಿಹೋಗಿದೆ. ಅದನ್ನೇ ನಂಬಿದ್ದ ಅರ್ಚಕರ ಜೀವನ ಅಸ್ತವ್ಯಸ್ತವಾಗಿದೆ. ಲಾಕ್​​ಡೌನ್ ಸಮಯದಲ್ಲಿ ಸಾಕಷ್ಟು ಜನ ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅನ್​​​ಲಾಕ್ ನಂತರ ದೇವಸ್ಥಾನಗಳು ತೆರೆದರೂ ಕೊರೋನಾ ಭಯದಿಂದ ಬವಭಯ ನಿವಾರಕ ಅಷ್ಟ ದೇವತೆಗಳ ದರ್ಶನಕ್ಕೂ ಭಕ್ತಾದಿಗಳು ಬಂದಿಲ್ಲ. ಹೀಗಾಗಿ ಬಹುತೇಕ ದೇವಸ್ಥಾನಗಳು ಮತ್ತು ಅದನ್ನೆ ನಂಬಿದ್ದ ಅರ್ಚಕ ವರ್ಗ ಬಹುತೇಕ ಸಂಕಷ್ಟಗಳಿಗೆ ಸಿಲುಕಿತ್ತು.

ಇದನ್ನ ಮನಗಂಡ ಯಲಹಂಕ ತಾಲ್ಲೂಕು ಆಡಳಿತ ಮತ್ತು ಸ್ಥಳೀಯ ಶಾಸಕ ಎಸ್.ಆರ್​​ ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು ವ್ಯಾಪ್ತಿಯ 158 ದೇವಸ್ಥಾನದ ಅರ್ಚಕರುಗಳಿಗೆ ಎರಡು ಜೊತೆ ಸಮವಸ್ತ್ರ, 10 ಮಾಸ್ಕ್, ಪಂಚೆ, ಶಲ್ಯ ನೀಡಿಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಕ್ಷೇಮಕ್ಕಾಗಿ ಟೆಂಪ್ರೇಚರ್ ತಪಾಸಣಾ ಮಾಪಕ, 5 ಲೀಟರ್ ಸ್ಯಾನಿಟೈಸರ್ ನೀಡಲಾಗಿದೆ. ಆದ್ದರಿಂದ ದೇವಾಲಯಕ್ಕೆ ಭಕ್ತರು ನಿರ್ಭೀತಿಯಿಂದ ಬರುವ ಹಾಗೆ ಮಾಡಲು ಬೇಕಾದ ಸಲಕರಣೆಗಳನ್ನೂ ಒದಗಿಸಲಾಗಿದೆ.

ಭಕ್ತರು ದೇವರ ದರ್ಶನಕ್ಕೆ ಬಂದಲ್ಲಿ ಕನಿಷ್ಠ ಅರ್ಚಕರ ಜೀವನಕ್ಕೆ ದಾರಿ ಆಗಲಿದೆ ಎಂಬುದಾಗಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಅಭಿಪ್ರಾಯ.

ತಾಲ್ಲೂಕು ಆಡಳಿತದ ಸಹಾಯದಿಂದ ಅರ್ಚಕರ ಜೀವನಕ್ಕೆ ದಾರಿ ಆಗಲಿದೆ. ದೇವಸ್ಥಾನವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಅರ್ಚಕರ ಸಂಕಷ್ಟದಿಂದ 4-5 ತಿಂಗಳಿಂದ ಕನಿಷ್ಠ ಸಂಪಾದನೆ ಇಲ್ಲದೆ ಸಾಕಷ್ಟು ತೊಂದರೆ ಒಳಗಾಗಿದ್ದರು. ಅದರಿಂದ ದಿನಸಿ ಕಿಟ್ ನೀಡಿದ್ದು, ಮುಜರಾಯಿ ದೇವಸ್ಥಾನದ ಅರ್ಚಕರು ಸಹ ಕಂದಾಯ ಇಲಾಖೆ ಭಾಗವಾಗಿದ್ದು, ಅವನ್ನ ಗುರುತಿಸುವ ಕೆಲಸ ಮಾಡಲಾಗಿದೆ.

ಅದೆಷ್ಟೋ ಕಡೆ ಪೂಜೆಗಳಿಗೆ ಹೋಗುವಾಗ ಗುರುತಿಸಲಾಗದೆ ತೊಂದರೆ ಅನುಭವಿದ್ದರಿಂದ ಅರ್ಚಕರಿಗೆ ರಾಜ್ಯದಲ್ಲೇ ಮೊದಲ ಭಾರಿಗೆ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಳೆ ನೀರಿನಲ್ಲಿ ಕೊಚ್ಚಿ ಹೋದ ಮಗಳಿಗಾಗಿ ಹಗಲು ರಾತ್ರಿಯೆನ್ನದೇ ಹುಡುಕಾಟ ನಡೆಸುತ್ತಿರುವ ಪೋಷಕರು

ತಾಲ್ಲೂಕು ಆಡಳಿತದ ನೆರವಿಗೆ ಸಂತಸ ವ್ಯಕ್ತಪಡಿಸಿದ ಅರ್ಚಕರು ಮಂತ್ರಘೋಷಗಳ ಮೂಲಕ ದೇಶಕ್ಕೆ ಬಂದೊದಗಿರುವ ಕೊರೋನಾ ಸಂಕಷ್ಟದಿಂದ ಬೇಗ ನಿವಾರಣೆ ಆಗಲಿ ಎಂದು ಪ್ರಾರ್ಥನೆ ಮಾಡಿ ದೇವರಿಗೆ ಮೊರೆ ಇಟ್ಟರು. ಇದೇ ಸಂಧರ್ಭದಲ್ಲಿ ಇ.ಓ ಕಿಶೋರ್, ಡಿ.ಟಿ ಮಹೇಶ್, ಗಂಗಾಧರಪ್ಪ, ಆರ್​​.ಐ ಚೇತನ, ರಮೇಶ್ ಬಾಬು, ಶ್ರೀನಿವಾಸ್ ಸೇರಿ ತಾಲ್ಲೂಕು ಆಡಳಿತದ ಸಿಬ್ಬಂದಿ ಜೊತೆಗಿದ್ದರು.
Published by:Ganesh Nachikethu
First published: