• ಹೋಂ
 • »
 • ನ್ಯೂಸ್
 • »
 • Corona
 • »
 • ಬಿಬಿಎಂಪಿ ಕಮಿಷನರ್, ಮೇಯರ್ ಮುಂದೆ ಆ್ಯಂಬುಲೆನ್ಸ್​ಗೆ ಕರೆ ಮಾಡಿದ ಶಾಸಕ ಹ್ಯಾರಿಸ್; ಶಾಸಕರ ರಿಯಾಲಿಟಿ ಚೆಕ್‌ನಲ್ಲಿ ಏನಾಯ್ತು?

ಬಿಬಿಎಂಪಿ ಕಮಿಷನರ್, ಮೇಯರ್ ಮುಂದೆ ಆ್ಯಂಬುಲೆನ್ಸ್​ಗೆ ಕರೆ ಮಾಡಿದ ಶಾಸಕ ಹ್ಯಾರಿಸ್; ಶಾಸಕರ ರಿಯಾಲಿಟಿ ಚೆಕ್‌ನಲ್ಲಿ ಏನಾಯ್ತು?

ಶಾಂತಿನಗರ ವಿಧಾನಸಭಾ ಕ್ಷೇತ್ರ ಕುರಿತು ಬಿಬಿಎಂಪಿ ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಮೇಯರ್ ಗೌತಮ್ ಕುಮಾರ್, ಶಾಸಕ ಹ್ಯಾರಿಸ್ ಭಾಗಿಯಾಗಿದ್ದರು.

ಶಾಂತಿನಗರ ವಿಧಾನಸಭಾ ಕ್ಷೇತ್ರ ಕುರಿತು ಬಿಬಿಎಂಪಿ ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಮೇಯರ್ ಗೌತಮ್ ಕುಮಾರ್, ಶಾಸಕ ಹ್ಯಾರಿಸ್ ಭಾಗಿಯಾಗಿದ್ದರು.

ನಾಲ್ಕು ದಿನವಾಯಿತು ಕ್ವಾರಂಟೈನ್ ಆಗಿದ್ರು ಬಿಬಿಎಂಪಿ ಬರೀ ನೀರು ಮಾತ್ರ ಕೊಟ್ಟಿದೆ. ಇದರ ಮಾಹಿತಿ ನನ್ನಲಿದೆ ಎಂದು ಹ್ಯಾರಿಸ್ ಹೇಳಿದಾಗ, ಇಲ್ಲ ಸರ್, ಎಲ್ಲೋ ಒಂದು ಕಡೆ ಹಾಗಾಗಿರಬಹುದು. ಬಿಬಿಎಂಪಿ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಹೇಳಿಕೆ ಹೇಳಿದರು.

 • Share this:

  ಬೆಂಗಳೂರು; ಕೊರೋನಾ ಸಂಕಷ್ಟದಲ್ಲಿ ಆ್ಯಬುಲೆನ್ಸ್​ಗೆ ಕರೆ ಮಾಡಿದರೂ ಯಾರೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬ ಆರೋಪಗಳಿವೆ. ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಮಿಷನರ್, ಮೇಯರ್ ಮುಂದೆಯೇ ಶಾಸಕ ಹ್ಯಾರಿಸ್ ಆ್ಯಂಬುಲೆನ್ಸ್​ಗೆ ಕರೆ ಮಾಡಿ ರಿಯಾಲಿಟಿ ಚೆಕ್‌ಮಾಡಿದರು.


  ಕೊರೋನಾ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರ ಕುರಿತು ಬಿಬಿಎಂಪಿ ಸಭೆ ಜರುಗಿತ್ತು. ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಮೇಯರ್ ಗೌತಮ್ ಕುಮಾರ್, ಶಾಸಕ ಹ್ಯಾರಿಸ್ ಭಾಗಿಯಾಗಿದ್ದರು. ಬೆಂಗಳೂರಿನ ಮೇಯೋ ಹಾಲ್ ಬಳಿಯ ಆಡಿಟೋಡಿಯಂನಲ್ಲಿ ನಡೆದ ಸಭೆಯಲ್ಲಿ ಖುದ್ದು ಶಾಂತಿನಗರ ಶಾಸಕ ಹ್ಯಾರಿಸ್ ಆ್ಯಂಬುಲೆನ್ಸ್ ಕುರಿತು ರಿಯಾಲಿಟಿ ಚೆಕ್‌ ನಡೆಸಿದರು.


  ಬಿಬಿಎಂಪಿ ಸಭೆಯಲ್ಲಿ 108 ಸಂಖ್ಯೆಗೆ ಫೋನ್ ಮಾಡಿದ ಶಾಸಕ ಹ್ಯಾರಿಸ್ ಲೌಡ್ ಸ್ಪೀಕರ್ ಇಟ್ಟು, ಕೊರೋನಾ ಬಂದಿದೆ. ಆ್ಯಬುಲೆನ್ಸ್ ಬರುತ್ತಾ, ಬೆಡ್ ಅರೇಂಜ್‌ ಮಾಡ್ತಿರಾ ಎಂದು ಪ್ರಶ್ನೆ ಮಾಡಿದರು. ನಾವು ಬೆಡ್ ಅರೆಂಜ್ ಮಾಡಲ್ಲ. ಚೆಕ್ ಮಾಡಿ ಹೇಳ್ತೇವೆ ಎಂದೇಳಿ 108 ಆಂಬುಲೆನ್ಸ್ ನವರು ಕಟ್ ಮಾಡಿದರು. ಇದೇ ವೇಳೆ ಚೆಕ್ ಮಾಡಿ ಮಾಹಿತಿ ಕೊಡ್ತಾರೆ ಎಂದು ಕಮಿಷನರ್ ಮಂಜುನಾಥ್ ಪ್ರಸಾದ್ ತೇಪೆ ಹೆಚ್ಚಿದರು.


  ಪ್ರತಿ ವಾರ್ಡಿನ ಕೋವಿಡ್​ಗಾಗಿ ಕಾರ್ಪೋರೇಟರ್​ಗೆ 20 ಲಕ್ಷ ಕೊಡ್ತಿರಿ. ಅದೇ ರೀತಿ ಶಾಸಕರಿಗೂ ಕೊಡಬೇಕು. ನಾವು ಅದೇ ಕೋವಿಡ್ ಕೆಲಸ ಮಾಡೋದಲ್ಲವೇ. ನಮಗೂ ದುಡ್ಡು ಕೊಡಿ, ಕೋವಿಡ್ ಕೆಲಸ‌ಕ್ಕೆ ವಿನಿಯೋಗಿಸ್ತಿವಿ ಎಂದೇಳಿದರು. ಕಾರ್ಪೋರೇಟರ್ ಹತ್ತಿರ ದುಡ್ಡಿದೆ, 20 ಲಕ್ಷ ಇದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಆದರೆ ವಾಸ್ತವವಾಗಿ ಕಾರ್ಪೋರೇಟರ್ ಗೆ ದುಡ್ಡು ಬರುತ್ತಿಲ್ಲ ಎಂದರು.


  ಐಸಿಎಂಆರ್ ನಲ್ಲಿ ಬರುವ ಮಾಹಿತಿ ತಪ್ಪು ಇದೆ.‌ ಶಾಂತಿನಗರ ಕ್ಷೇತ್ರದಲ್ಲಿ ಬರುವ ಅಂಕಿ-ಅಂಶ ಹೆಚ್ಚು ತೋರಿಸುತ್ತಿದೆ. ಆದರೆ ವಾಸ್ತವವಾಗಿ ಬೇರೆ ವಿಧಾನಸಭಾ, ವಾರ್ಡ್ ಮಾಹಿತಿ ನಮ್ಮ ಕ್ಷೇತ್ರಕ್ಕೆ ಸೇರಿಸುತ್ತಿದ್ದಾರೆ ಎಂದರು. ನಾಲ್ಕು ದಿನವಾಯಿತು ಕ್ವಾರಂಟೈನ್ ಆಗಿದ್ರು ಬಿಬಿಎಂಪಿ ಬರೀ ನೀರು ಮಾತ್ರ ಕೊಟ್ಟಿದೆ. ಇದರ ಮಾಹಿತಿ ನನ್ನಲಿದೆ ಎಂದಾಗ ಇಲ್ಲ ಸರ್, ಎಲ್ಲೋ ಒಂದು ಕಡೆ ಹಾಗಾಗಿರಬಹುದು. ಬಿಬಿಎಂಪಿ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಹೇಳಿಕೆ ಹೇಳಿದರು.


  ಕೊರೋನಾ ಬಂದ್ರೆ ಸಾಯಲ್ಲ ಎಂಬ ಕಮಿಷನರ್ ಮಾತಿಗೆ ನಮ್ಮ ಕ್ಷೇತ್ರದಲ್ಲಿ ಕೊರೋನಾ ಬಂದು ಸಾಯ್ತಿದ್ದಾರೆ. ಇದು ವಾಸ್ತವ ಸ್ಥಿತಿ. ನಿಮ್ಮನ್ನು ತೆಗಳುತ್ತಿಲ್ಲ. ‌ದಯಮಾಡಿ ಅರ್ಥ ಮಾಡಿಕೊಳ್ಳಿ. ವೆಂಟಿಲೇಟರ್ ಸಿಗ್ತಿಲ್ಲ, ಎಲ್ಲ ಆಸ್ಪತ್ರೆ ಫುಲ್ ಇದೆ. ಕೊರೋನಾ ಸೋಂಕಿತರಿಗೆ ಬೆಡ್ ಕೊಡಲು ಆಗ್ತಿಲ್ಲ. ನಮ್ಮಲ್ಲಿ ಆಕ್ಸಿಜನ್ ಸೆಂಟರ್ ಇಲ್ಲ. ಫೀವರ್‌ ಕ್ಲಿನಿಕ್, ಸೆಂಟ್ರಲೈಸ್ ಆಕ್ಸಿಜನ್ ಕ್ಲಿನಿಕ್ ಬೇಕು ಎಂದು ಶಾಸಕ ಹ್ಯಾರಿಸ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.


  ಶಾಂತಿ ನಗರ ಕ್ಷೇತ್ರದಲ್ಲಿ 995 ಕೇಸ್ ನಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ.‌ ಪ್ರತಿದಿನ ಸಾವಿರ ಕೊರೋನಾ ಸೋಂಕಿತರು ಅಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಮ್ಮ ಕ್ಷೇತ್ರದ ಕೋವಿಡ್ ಕೇರ್ ಗೆ ವೈದ್ಯರನ್ನು ಕೇಳಿದರೂ ಕೊಡ್ತಿಲ್ಲ. ಕೋವಿಡ್ ಕೇರ್ ಸೆಂಟರ್ ಇನ್ನು ಆರಂಭವಾಗಿಲ್ಲ. ಎರಡು ಕೋವಿಡ್ ಕೇರ್ ನಮ್ಮ‌ ಕ್ಷೇತ್ರಕ್ಕೆ ಬೇಕು. ಸರಕಾರಿ ಶಾಲೆಯೋ, ಮತ್ತೆಲ್ಲಿಯೋ ಶುರು ಮಾಡಿ, ಈಗ ಕೆಲಸ ಮಾಡದೇ ಇನ್ಯಾವಾಗ ಕೆಲಸ ಮಾಡ್ತಿರಿ ಎಂದರು.


  ಇದನ್ನು ಓದಿ: ಆಸ್ಪತ್ರೆಗಳಿಗೆ ಸುತ್ತಿದರೂ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು; ಶವವನ್ನು ಡಿಸಿ ಕಚೇರಿಗೆ ತಂದ ಸಂಬಂಧಿಗಳು


  ಬಿಬಿಎಂಪಿ ಮೇಯರ್ ಗೂ ಖಾಸಗಿ ಆಸ್ಪತ್ರೆ ದರ್ಬಾರ್ ದರ್ಶನವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಇದ್ರೂ ಚಿಕಿತ್ಸೆ ನೀಡುತ್ತಿಲ್ಲ.‌ಇದು ನನ್ನ ಗಮನಕ್ಕೆ ಬಂದಿದೆ. ನಿನ್ನೆ ರಾತ್ರಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆ ಮನೆಯಲ್ಲಿ ಇಬ್ಬರು ಮೃತರಾಗಿದ್ದಾರೆ ಎಂಬ ಕಾರಣಕ್ಕೆ ಹಿಂದೇಟು ಹಾಕ್ತಿದ್ದರು.‌ ಕೊನೆಗೆ ನಾನು ಹೇಳಿದ ಮೇಲೆ ಅಡ್ಮಿಟ್ ಮಾಡಿಕೊಂಡ್ರು. ಇಂಥ ಪರಿಸ್ಥಿತಿ ಜನಸಾಮಾನ್ಯರಿಗೆ ಬರಬಾರದು ಎಂದು ಸಭೆಯಲ್ಲಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದರು.

  Published by:HR Ramesh
  First published: