ರಾಜಕೀಯ ಮಾಡುವ ಸಮಯ ಇದಲ್ಲ ಸುರೇಶ್‍ಗೌಡ ಅವರಿಗೆ ಶಾಸಕ ಗೌರಿಶಂಕರ್ ತಿರುಗೇಟು

ಪರೋಕ್ಷವಾಗಿ ಸುರೇಶ್‍ಗೌಡಗೆ ಟಾಂಗ್ ನೀಡಿದ ಗೌರಿಶಂಕರ್ ರಾಜಕೀಯಕ್ಕೆ ಇದು ವೇದಿಕೆ ಅಲ್ಲ ರಾಜಕೀಯ ಮಾಡುವಾಗ ರಾಜಕೀಯ ಮಾಡೋಣ ತೊಂದರೆ ಇಲ್ಲ. ಆದರೆ, ಜನರು ಸಂಕಷ್ಟದಲ್ಲಿ ಇದ್ದಾಗ ಪ್ರಚಾರಕ್ಕೆ, ರಾಜಕೀಯ ವೇದಿಕೆ ಆಗಬಾರದು ಎಂದಿದ್ದಾರೆ.

ಶಾಸಕ ಗೌರಿ ಶಂಕರ್‌

ಶಾಸಕ ಗೌರಿ ಶಂಕರ್‌

  • Share this:
ದೊಡ್ಡಬಳ್ಳಾಪುರ (ಮೇ 06): ಕೊರೋನ ಹೆಮ್ಮಾರಿ ಇಡೀ ಪ್ರಪಂಚವನ್ನೆ ಕಿತ್ತು ತಿನ್ನುತ್ತಿದೆ, ಆದರೆ ಕೆಲವರು ಮಾತ್ರ ಸೇವೆ ಮಾಡೋರ ಹೆಸರಲ್ಲೂ ರಾಜಕೀಯ ಮಾಡ್ತಿರೋದು ಮಾತ್ರ ದುರಂತ ಎಂದು ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಗುಡುಗಿದ್ದಾರೆ.

ಪರೋಕ್ಷವಾಗಿ ಸುರೇಶ್‍ಗೌಡಗೆ ಟಾಂಗ್ ನೀಡಿದ ಗೌರಿಶಂಕರ್ ರಾಜಕೀಯಕ್ಕೆ ಇದು ವೇದಿಕೆ ಅಲ್ಲ ರಾಜಕೀಯ ಮಾಡುವಾಗ ರಾಜಕೀಯ ಮಾಡೋಣ ತೊಂದರೆ ಇಲ್ಲ. ಆದರೆ, ಜನರು ಸಂಕಷ್ಟದಲ್ಲಿ ಇದ್ದಾಗ ಪ್ರಚಾರಕ್ಕೆ, ರಾಜಕೀಯ ವೇದಿಕೆ ಆಗಬಾರದು ಎಂದಿದ್ದಾರೆ.

ನಾವು ಓಟ್ಗಾಗಿ ಯಾರನೊ ಓಲೈಸಲಿಕ್ಕಾಗಿ ಆಹಾರ ಪದಾರ್ಥ ವಿತರಣೆ, ತರಕಾರಿ, ಹಣ್ಣು ಖರೀದಿ ಮಾಡಿಲ್ಲ, ಸಂಕಷ್ಟದಲ್ಲಿರುವ ನನ್ನ ಕ್ಷೇತ್ರದ ಜನರು, ರೈತರ ನೆರವಿಗಾಗಿ ಇಷ್ಟೆಲ್ಲಾ ಮಾಡಿದ್ದೆ ಹೊರತು ಯಾರ ಸರ್ಟಿಫಿಕೆಟ್ ಬೇಕಿಲ್ಲ. ಪ್ರಚಾರಕ್ಕಾಗಿ ಇಷ್ಟೆಲ್ಲಾ ಮಾಡೋ ಹಾಗಿದ್ರೆ ನೆಲಮಂಗಲ, ಯಲಹಂಕ, ದೊಡಬಳ್ಳಾಪುರ ಸೇರಿದಂತೆ ತುಮಕೂರು ಜಿಲ್ಲೆ ಮೂಲೆ ಮೂಲೆಗಳಿಂದ ದೂರವಾಣಿ ಕರೆಗಳು ಬರುತ್ತಿವೆ. ಅವರ ಕಷ್ಟಕ್ಕೆ ಸ್ಪಂದಿಸುತ್ತಿರುವುದಕ್ಕೆ ಫೋನ್ ಕರೆಗಳು ಬರುತ್ತಿವೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಅಲ್ಲದೆ, ಈವರೆಗೆ ಸುಮಾರು 35 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್, ಜಿಲ್ಲಾ ಗಡಿಯಲ್ಲಿ ಡ್ರೈವರ್, ಪೊಲೀಸ್, ಆರೋಗ್ಯ ಸಿಬ್ಬಂದಿಗಳಿಗೆ ಖುದ್ದು ನಾವೆ ತಯಾರಿಸಿದ ಗುಣಮಟ್ಟದ ಊಟ, ನೀರು ಇತರಣೆ ಮಾಡಲಾಗುತ್ತಿದೆ. ಪ್ರತಿ ದಿನ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಗಡಿಗಳಲ್ಲಿ ಊಟದ ವ್ಯವಸ್ತೆ ಮಾಡಲಾಗಿದ್ದು ಊಟದ ಜೊತೆ ಬಾಳೆಹಣ್ಣು, ಬಿಸ್ಕತ್ತು ನೀಡಲಾಗುತ್ತಿದೆ. ಆದರೆ, ಈ ಕಿರು ಸೇವೆಯನ್ನು ಸಹಿಸದ ಕೆಲವರು ರಾಜಕೀಯ ಮಾಡೋದು ಸರಿ ಇಲ್ಲ ಎಂದು ಅವರು  ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : BS Yediyurappa: ಲಾಕ್‌ಡೌನ್​ನಿಂದ ನಷ್ಟ ಅನುಭವಿಸಿದ ಜನರಿಗೆ 1610 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಬಿಎಸ್ ಯಡಿಯೂರಪ್ಪ
First published: