HOME » NEWS » Coronavirus-latest-news » MIXING VACCINES CANT FIGHT SUPPLY SHORTAGE SESR

ಲಸಿಕೆ ಕೊರತೆ ಅಂತ ಮೊದಲ ಡೋಸ್​ಗೆ ಒಂದು ಕಂಪನಿ, ಎರಡನೇ ಡೋಸ್​ಗೆ ಮತ್ತೊಂದು ಕಂಪನಿ ವಾಕ್ಸಿನ್​​ ಪಡೆದರೆ ಏನಾಗಲಿದೆ ಗೊತ್ತಾ?

ಮೊದಲ ಡೋಸ್​ನಲ್ಲಿ ಒಂದು ಲಸಿಕೆ ಮತ್ತೊಂದು ಡೋಸ್​ನಲ್ಲಿ ಬೇರೆ ಕಂಪನಿಯ ಲಸಿಕೆ ಪಡೆದರೆ ಏನಾಗಲಿದೆ ಎಂಬ ಅನುಮಾನ ಬಹುತೇಕರಲ್ಲಿದೆ.

news18-kannada
Updated:May 13, 2021, 5:40 PM IST
ಲಸಿಕೆ ಕೊರತೆ ಅಂತ ಮೊದಲ ಡೋಸ್​ಗೆ ಒಂದು ಕಂಪನಿ, ಎರಡನೇ ಡೋಸ್​ಗೆ ಮತ್ತೊಂದು ಕಂಪನಿ ವಾಕ್ಸಿನ್​​ ಪಡೆದರೆ ಏನಾಗಲಿದೆ ಗೊತ್ತಾ?
ಸಾಂದರ್ಭಿಕ ಚಿತ್ರ.
  • Share this:
ಕೋವಿಡ್​ ವಿರುದ್ಧ ಹೋರಾಟದ ವಿರುದ್ಧ ಸದ್ಯ ದೇಶದಲ್ಲಿ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ. ಅವು ಒಂದು ಕೋವಿಶೀಲ್ಡ್​ ಮತ್ತೊಂದು ಕೋವಾಕ್ಸಿನ್​. ಎರಡು ಡೋಸ್​ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದೆ. ಈ ನಡುವೆ ಬಹುತೇಕರಿಗೆ ಇರುವ ಅನುಮಾನ ಎಂದರೆ ಮೊದಲ ಡೋಸ್​ನಲ್ಲಿ ಒಂದು ಲಸಿಕೆ ಮತ್ತೊಂದು ಡೋಸ್​ನಲ್ಲಿ ಬೇರ ಕಂಪನಿಯ ಲಸಿಕೆ ಪಡೆಯಬಹುದೇ ಎಂಬುದು. ಲಸಿಕೆ ಕೊರತೆ ಇರುವ ಹಿನ್ನಲೆ ಅನೇಕರು ಕೂಡ ಈ ರೀತಿ ಎರಡು ವಿಭಿನ್ನ ಲಸಿಕೆ ಪ್ರಯೋಗ ನಡೆಸುವ ಕುರಿತು ಚಿಂತನೆ ನಡೆಸಿದ್ದರು. ಈ ಮೂಲಕ ವೈರಸ್​ ವಿರುದ್ಧ ಹೋರಾಡಲು ಇವು ಸಹಕರಿಯಾಗುತ್ತವೆಯೇ ಎಂಬ ಕುರಿತು ಚರ್ಚೆ ನಡೆದಿದ್ದುವು. ಈ ಕುರಿತು ಅಧ್ಯಯನ ನಡೆಸಿದ ತಂಡ, ಈ ರೀತಿ ವಿಭಿನ್ನ ಲಸಿಕೆ ಪಡೆದರೆ ರೋಗಿಗಳ ಮೇಲೆ ಇದು ಅಡ್ಡ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಈ ಕುರಿತು ಸಂಶೋಧನೆ ನಡೆಸಿದ ತಜ್ಞರು ಎರಡು ಡೋಸ್​ಗಳ ವಿಭಿನ್ನ ಲಸಿಕೆ ಪಡೆದ ಅವರು ತಲೆ ನೋವು ಮತ್ತು ಆಯಾಸದಂತಹ ಸಮಸ್ಯೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಈ ಕುರಿತು ವರದಿ ಪ್ರಕಟಿಸಿರುವ ಬ್ಲೂಮ್​ಬರ್ಗ್​​, ಅಸ್ಟ್ರಾಜೆನೆಕಾ ಮೊದಲ ಡೋಸ್​ ಪಡೆದು ನಾಲ್ಕು ವಾರಗಳ ಬಳಿಕ ಫೈಜರ್​​ ಲಸಿಕೆ ಪಡೆದರೆ ಇವು ಅಡ್ಡಪರಿಣಾಮ ಬೀರಲಿದೆ. ಆದರೆ, ಇದು ತೀವ್ರ ಸ್ವರೂಪದ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಆಕ್ಸಫರ್ಡ್​ ವಿಶ್ವವಿದ್ಯಾಲಯ ಸಂಶೋಧಕರು ತಿಳಿಸಿದ್ದಾರೆ.

ಇದನ್ನು ಓದಿ: ದೇಶದೆಲ್ಲೆಡೆ ಲಸಿಕೆಗೆ ಹಾಹಾಕಾರ; ಕರ್ನಾಟಕದ ಬಳಿಕ ದೆಹಲಿಯಲ್ಲೂ ಮೂರನೇ ಹಂತದ ವಾಕ್ಸಿನ್​ಗೆ ತಡೆ

ಫ್ರಾನ್ಸ್​ನಲ್ಲಿ ಆಸ್ಟ್ರಾ ಲಸಿಕೆಯನ್ನು ನಿರ್ಬಂಧಿಸುವ ಮೊದಲೇ ಹಿರಿಯ ನಾಗರೀಕರಿಗೆ ಈ ಲಸಿಕೆಯನ್ನು ನೀಡಲಾಗಿತ್ತು. ಬಳಿಕ ಎರಡನೇ ಡೋಸ್​ನಲ್ಲಿ ಫೈಜರ್​ ಲಸಿಕೆಯನ್ನು ನೀಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಕ್ಸ್​ಫರ್ಡ್​ ಪೀಡಿಯಾಟ್ರಿಕ್ಸ್​ ಮತ್ತು ವಾಕ್ಸಿನಾಲಜಿ ಪ್ರೋ ಮ್ಯಾಥ್ಯೂ ಸ್ನಾಪ್​, ಇದೊಂದು ಆಸಕ್ತಿಕಾರಕ ಸಂಶೋಧನೆ ಅಂಶವಾಗಿದ್ದು, ಇದು ನಾವು ನಿರೀಕ್ಷಿಸದ ವಿಷಯವಾಗಿದೆ ಎಂದಿದ್ದಾರೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಂಬಂಧಿಸಿರಲಿ ಅಥವಾ ಇಲ್ಲದಿರಲಿ ಈ ಕುರಿತು ನಾವು ಶೀಘ್ರದಲ್ಲಿ ಉತ್ತರ ಕಂಡುಕೊಳ್ಳುತ್ತೇವೆ ಎಂದಿದ್ದಾರೆ.

ಈಗಾಗಲೇ ಎರಡು ಹಂತದ ಲಸಿಕೆ ವಿತರಣೆ ಕಾರ್ಯ ದೇಶದಲ್ಲಿ ಯಶಸ್ವಿಯಾಗಿ ನಡೆದಿದ್ದು, ಮೂರನೇ ಹಂತದ ಲಸಿಕೆ ವಿತರಣೆ ಕಾರ್ಯ ಜನರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಮೂರನೇ ಹಂತದ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಮೇ. 1 ರಿಂದ ಚಾಲನೆ ನೀಡಿದೆಯಾದರೂ ಹಲವು ರಾಜ್ಯಗಳಲ್ಲಿ ಅಗತ್ಯ ಲಸಿಕೆಯೇ ಇಲ್ಲ. ದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಲಸಿಕೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಎರಡನೇ ಹಂತದ ಲಸಿಕೆ ಅಂದರೆ 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್​ ನೀಡಲಾಗಿದ್ದು, ಎರಡನೇ ಡೋಸ್​ಗೆ ಲಸಿಕೆ ಕೊರತೆ ಕಂಡು ಬಂದಿದೆ. ಈ ನಡುವೆ ಮೂರನೇ ಹಂತದ 18-44 ವರ್ಷದವರಿಗೆ ಲಸಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ಈ ಕಾರ್ಯ ಆರಂಭದಲ್ಲಿಯೇ ಸಾಕಷ್ಟು ಗೊಂದಲ ಮೂಡಿಸಿದೆ. ಹಲವು ರಾಜ್ಯಗಳಲ್ಲಿ ಮೂರನೇ ಹಂತದ ಲಸಿಕೆ ಕಾರ್ಯ ಸ್ಥಗಿತಗೊಂಡಿದೆ.
Published by: Seema R
First published: May 13, 2021, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories