ಕೊರೋನಾ ಮೂರನೇ ಅಲೆಗೂ ಮೊದಲೇ ಮಕ್ಕಳಿಗೆ MIS-C ಕಂಟಕ: ಹೊಸ ಕೊರೋನಾ ಲಕ್ಷಣದಿಂದ ಹೆಚ್ಚಿದ ಆತಂಕ!

ದೇಶದಲ್ಲಿ 2% ರಿಂದ 3% ರಷ್ಟು ಮಿಸ್ಸಿ ಸಾವಿನ ಪ್ರಮಾಣವಿದೆ. ಹೀಗಾಗಿ ಬೇಗ ಆಸ್ಪತ್ರೆಗೆ ದಾಖಲಿಸಿದ್ರೆ ಸಾವಿನ ಪ್ರಮಾಣ ತಗ್ಗಲಿದೆ ಅಂತ ವೈದ್ಯರು ಹೇಳ್ತಿದ್ದಾರೆ. ಮೂರನೇ ಅಲೆಗೂ‌ ಮೊದಲೆ ಮಿಸ್ಸಿ ಕೊರೋನಾ ಆರ್ಭಟ ಹೆಚ್ಚಿದ್ದು  ಸೋಂಕಿನ ಬಗ್ಗೆ ಪೋಷಕರು ಅಲರ್ಟ್ ಆಗಿರಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ಮೂರನೇ ಅಲೆ ಕೊರೋನಾ ಮಕ್ಕಳನ್ನು ತೀವ್ರವಾಗಿ ಕಾಡಲಿದೆ ಅಂತ ತಜ್ಞರು ಹೇಳ್ತಿದ್ದಾರೆ. ಆದ್ರೆ ಮೂರನೇ ಅಲೆಗೂ ಮೊದಲೇ ಕೊರೋನಾ ಬೇರೆ ಬೇರೆ ರೂಪದಲ್ಲಿ ಸಂಕಷ್ಟಕ್ಕೆ ದೂಡುತ್ತಿದೆ. ಇತ್ತೀಚಿಗೆ MIS-C ಸಮಸ್ಯೆ ಹೆಚ್ಚು ಮಕ್ಕಳನ್ನ ಬಾದಿಸುತ್ತಿದೆ. ಕೊರೋನಾ ಸೋಂಕು ಮೊದಲ ಅಲೆಯಲ್ಲಿ ಹಿರಿಯರು, ಎರಡನೇ ಅಲೆ ವೇಳೆ ವಯಸ್ಕರು ಮತ್ತು ಮೂರನೇ ಅಲೆಯಲ್ಲಿ ಮಕ್ಕಳನ್ನ ಟಾರ್ಗೆಟ್ ಮಾಡಲಿದೆ ಅನ್ನೋದು ತಜ್ಞರ ಲೆಕ್ಕಾಚಾರ. ಆದರೆ ರಾಜ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ‌ಕೊರೋನಾ ಕಾಣಿಸಿಕೊಂಡಿದೆ.

  ಇದರಲ್ಲಿ ನೂರಾರು ಮಕ್ಕಳು‌ ಮಿಸ್ಸಿ ಲಕ್ಷಣದಿಂದ ಬಳಲುತ್ತಿದ್ದಾರೆ. ಮಿಸ್ಸಿ ಅಂದ್ರೆ Multisystem Inflammatory Syndrome in Children ಅಂತ. ಈ‌ ರೋಗಲಕ್ಷಣ ಮಕ್ಕಳಲ್ಲಿ  ಕೊರೋನಾ ಬಂದು ಹೋದ 2 ವಾರಗಳ ಬಳಿಕ ಕಾಣಿಸಿಕೊಳ್ಳಲಿದೆ. ಕೊರೋನಾ ಬಂದ ಕೆಲವು ದಿನದಲ್ಲೂ ಕಾಣಿಸಿಕೊಳ್ಳಬಹುದು. ಈ ಮಿಸ್ಸಿ ಕೇಸ್ ನಲ್ಲಿ ಮಕ್ಕಳ ದೇಹದಲ್ಲಿ ಉತ್ಪತ್ಪಿಯಾಗುವ ಆಂಟಿಬಾಡಿಗಳ ಕಂಟಕ. ಯಾಕಂದ್ರೆ ಕೊರೋನಾ ವಿರುದ್ದ ಹೋರಾಡಲು ಅಗತ್ಯಕ್ಕಿಂತ ಹೆಚ್ಚಿನ ಆಂಟಿ ಬಾಡಿ ಉತ್ಪಾದನೆಯಾಗುತ್ತದೆ. ಈ ವೇಳೆ ಕೊರೋನಾ ವಿರುದ್ದ ಹೋರಾಡಬೇಕಿದ್ದ ಆಂಟಿಬಾಡಿಗಳು ಮಕ್ಕಳ ದೇಹದ ಅಂಗಾಗಗಳ ಜೀವಕೋಶದ ಮೇಲೆ ಅಟ್ಯಾಕ್ ಮಾಡಿ ಹಾನಿ‌ಮಾಡುತ್ತದೆ. ಇದರಿಂದಾಗಿ ಮಕ್ಕಳ ಹೃದಯ, ಕಿಡ್ನಿ , ಕಣ್ಣು ಸೇರಿ ಬಹುಅಂಗಾಂಗಕ್ಕೆ ಸಮಸ್ಯೆಯಾಗುತ್ತದೆ.

  ಮಿಸ್ಸಿ ಯ ಹೊಸ ರೋಗಲಕ್ಷಣಗಳು ಏನು.!?

  • ಮೈಯಲ್ಲಿ ವಿಪರೀತ ತುರಿಕೆ
  • ಕಣ್ಣಿನ ಸುತ್ತ ಕೆಂಪಾಗುವಿಗೆ
  • ಮೈಯಲ್ಲಿ ಊತ
  • ಜಾಸ್ತಿ ಜ್ವರ
  • ಹೊಟ್ಟೆನೋವು,
  • ವಾಂತಿ

  ರಾಜ್ಯದಲ್ಲಿ ಕೊರೋನಾ ಮಿಸ್ಸಿ ಸೋಂಕಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಇಂದಿರಾಗಾಂಧಿ‌ ಮಕ್ಕಳ ಆಸ್ಪತ್ರೆ ಒಂದರಲ್ಲೇ ಕೊರೋನಾ ಆರಂಭದಿಂದ ಇಲ್ಲಿಯವರೆಗೆ 50 ಮಿಸ್ಸಿ ಕೇಸ್ ದಾಖಲಾಗಿದೆ.ರಾಜ್ಯದಲ್ಲಿ ಈವರೆಗೆ 500 ಕ್ಕೂ ಹೆಚ್ಚು ಮಕ್ಕಳಿಗೆ ಮಿಸ್ಸಿ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ಒಂದರಲ್ಲೇ 300 ಮಕ್ಕಳಲ್ಲಿ ಮಿಸ್ಸಿ ಸಮಸ್ಯೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಮೈಸೂರಿಲ್ಲಿ 50ಕ್ಕೂ ಹೆಚ್ಚು ಮಿಸ್ಸಿ ಕೇಸ್ ಪತ್ತೆಯಾಗಿದ್ದು, ಅದರಲ್ಲಿ 7 ಮಕ್ಕಳ ಸಾವು ಸಂಭವಿಸಿದೆ. ದೆಹಲಿಯಲ್ಲಿ  ಎರಡನೇ ಅಲೆ ವೇಳೆ ಅತಿ ಹೆಚ್ಚು ಮಿಸ್ಸಿ ಕೇಸ್ ದಾಖಲಾಗಿತ್ತು‌‌. ಆದ್ರೆ ನಮ್ಮ ರಾಜ್ಯದಲ್ಲಿ ಎರಡನೇ ಅಲೆಯ ಕೊನೆಯಲ್ಲಿ ಮಿಸ್ಸಿ ಕೇಸ್ ಗಳು ಹೆಚ್ಚಾಗುತ್ತಿದೆ. ಹೀಗೆ ಆದರೆ ಮೂರನೇ ಅಲೆ ವೇಳೆಯಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಮಿಸ್ಸಿ ಪ್ರಕರಣವನ್ನು ಪಾಲಿಕೆ‌ ಗಂಭೀರವಾಗಿ ತೆಗೆದುಕೊಂಡಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

  ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಮಕ್ಕಳ ಮೇಲೆ‌ ಕಟ್ಟೆಚ್ಚರ ವಹಿಸಿದ ಆರೋಗ್ಯ ಇಲಾಖೆ; ಅಪೌಷ್ಟಿಕತೆ ಮಕ್ಕಳ ಆರೈಕೆ, ಚಿಕಿತ್ಸೆ ಆರಂಭ

  ದೇಶದಲ್ಲಿ 2% ರಿಂದ 3% ರಷ್ಟು ಮಿಸ್ಸಿ ಸಾವಿನ ಪ್ರಮಾಣವಿದೆ. ಹೀಗಾಗಿ ಬೇಗ ಆಸ್ಪತ್ರೆಗೆ ದಾಖಲಿಸಿದ್ರೆ ಸಾವಿನ ಪ್ರಮಾಣ ತಗ್ಗಲಿದೆ ಅಂತ ವೈದ್ಯರು ಹೇಳ್ತಿದ್ದಾರೆ. ಮೂರನೇ ಅಲೆಗೂ‌ ಮೊದಲೆ ಮಿಸ್ಸಿ ಕೊರೋನಾ ಆರ್ಭಟ ಹೆಚ್ಚಿದ್ದು  ಸೋಂಕಿನ ಬಗ್ಗೆ ಪೋಷಕರು ಅಲರ್ಟ್ ಆಗಿರಬೇಕು. ಮಕ್ಕಳ ಅಂಗಾಗಳ ಮೇಲೆ ಪ್ರಭಾವ ಬೀರಬಲ್ಲ ತಾಕತ್ತು ಇವಕ್ಕಿದ್ದು, ಎಚ್ಚರಿಕೆಯಿಂದ ಇರುವುದು ಒಳಿತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಯಾರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದೆ ಮುನ್ನೆಚ್ಚರಿಕೆ ವಹಿಸಬೇಕಿದೆ.

  ವರದಿ: ಆಶಿಕ್ ಮುಲ್ಕಿ
  Published by:HR Ramesh
  First published: