‘ಶಾಲಾ ಕಾಲೇಜು ತೆರೆಯುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ‘ - ಕೇಂದ್ರ ಗೃಹ ಇಲಾಖೆ

ಮಾರ್ಚ್​​ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಕ್ಲಾಸ್ ರೂಮ್ ಶಟ್​ಡೌನ್ ತಂತ್ರ ಕೇಂದ್ರ ಅನುಸರಿಸಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು(ಮೇ.27): ಶಾಲಾ ಕಾಲೇಜುಗಳು ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ಗೃಹ ಇಲಾಖೆ, "ಇತ್ತೀಚೆಗೆ ಎಲ್ಲಾ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ನಾವು ಇಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳ ಮೇಲೆ ನಿಷೇಧ ಮುಂದುವರಯಲಿದೆ" ಎಂದು ಟ್ವೀಟ್​​ ಮಾಡುವ ಮುಖೇನ ಸ್ಪಷ್ಟನೆ ನೀಡಿದೆ.

  ದೇಶಾದ್ಯಂತ ಜುಲೈನಿಂದಲೇ ಶಾಲೆಗಳನ್ನು ಪುನಾರಂಭ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿಕ್ಷಣ ತಜ್ಞರ ಸಮಿತಿಯೊಂದು ಶಿಫಾರಸ್ಸು ಮಾಡಿದೆ. ಕೊರೋನಾ ವೈರಸ್​ ತಡೆಗೆ ಮುಂಜಾಗೃತ ಕ್ರಮವಾಗಿ ಶಾಲಾ- ಕಾಲೇಜುಗಳನ್ನು ಕೇಂದ್ರ ಸರ್ಕಾರವೂ ಬಂದ್​ ಮಾಡಿ ಆದೇಶಿಸಿತ್ತು. ಕ್ಲಾಸ್​ ರೂಮ್​​ಗಳು ಶಟ್​​ಡೌನ್​​ ಆಗಿರುವುದರಿಂದ ಪರೀಕ್ಷೆಗಳು ಯಾವಾಗ ನಡೆಸಬೇಕು? ಶಾಲೆಗಳನ್ನು ಯಾವಾಗ ಆರಂಭಿಸಬೇಕು? ಎನ್ನುವುದರ ಕುರಿತು ಅಧ್ಯಯನ ನಡೆಸುವಂತೆ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಿತ್ತು. ಇದೀಗ ಈ ಸಮಿತಿಯೂ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ವರದಿ ಆಧಾರದ ಮೇರೆಗೆ ಜುಲೈನಿಂದ ಶಾಲೆಗಳನ್ನು ಪ್ರಾರಂಭಿಸುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ನಿನ್ನೆಯಷ್ಟೇ ಮಾಧ್ಯಮಗಳು ವರದಿ ಮಾಡಿದ್ದವು.

  ಮಾರಕ ಕೊರೋನಾ ವೈರಸ್​​ ದೇಶದಲ್ಲಿ ಶರ ವೇಗದಲ್ಲಿ ಹರಡುತ್ತಿದೆ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಯಾವ ಪ್ರವೇಶ ಪರೀಕ್ಷೆಗಳು ನಡೆಯುವುದಿಲ್ಲ. ಹಾಗಾಗಿ ಶೈಕ್ಷಣಿಕ ವರ್ಷವನ್ನು ತಡವಾಗಿ ಆರಂಭಿಸಿ. ಎಲ್ಲರೂ ಜೂನ್​​ ಅಲ್ಲದೇ ಜುಲೈವರೆಗೂ ಕಾದು ನಂತರ ಶಾಲೆಗಳನ್ನು ಆರಂಭಿಸಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿತ್ತು.

  ಇದನ್ನೂ ಓದಿ: ‘ಜೂನ್​​ವರೆಗೂ ಕಾದು ಜುಲೈನಿಂದ ಶಾಲೆಗಳನ್ನು ಆರಂಭಿಸಿ’ - ಕೇಂದ್ರಕ್ಕೆ ಶಿಕ್ಷಣ ತಜ್ಞರ ಸಮಿತಿ ಶಿಫಾರಸ್ಸು

  ಮಾರ್ಚ್​​ 16ನೇ ತಾರೀಕಿನಿಂದಲೇ ದೇಶದಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳು ಮುಚ್ಚಲಾಗಿದೆ. ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಹೀಗೆ ಶಾಲಾ-ಕಾಲೇಜು ಕ್ಲಾಸ್ ರೂಮ್ ಶಟ್​ಡೌನ್ ತಂತ್ರ ಕೇಂದ್ರ ಅನುಸರಿಸಿದೆ.
  First published: