ಕೊರೋನಾ ಸೋಂಕು ಇಲ್ಲದಿದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುವುದು ; ವಿ ಸೋಮಣ್ಣ

ಮೈಸೂರು ಜಿಲ್ಲೆಯಾದ್ಯಂತ 139 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಶೇನ್ ವ್ಯವಸ್ಥೆಯ ಜೊತೆಗೆ ನರ್ಸ್ ಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿ ಸೋಮಣ್ಣ

ವಿ ಸೋಮಣ್ಣ

 • Share this:
  ಮೈಸೂರು(ಮಾ.21) : ಜಿಲ್ಲೆಯ ಮೂರು ಗಡಿ ಚೆಕ್ ಪೋಸ್ಟ್​​ಗಳಲ್ಲಿ ಇಂದಿನಿಂದ ಥರ್ಮಲ್​​​​ ಸ್ಕ್ಯಾನಿಂಗ್​​ ಪ್ರಾರಂಭ ಮಾಡಲಾಗುವುದು. ಕೊರೋನಾ ಸೋಂಕು ಇಲ್ಲದಿದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.

  ಕೇರಳ – ಮೈಸೂರು ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಕಸಾಯಿಖಾನೆ ಮುಚ್ಚಲಾಗುವುದು. ಬಿಗ್ ಬಜಾರ್​​, ಶಾಪಿಂಗ್​ ಮಾಲ್​​​​ಗಳನ್ನು ಬಂದ್​ ಮಾಡಲೇಬೇಕು, ಕೊರೋನಾ ನಿಯಂತ್ರಣ ಕ್ರಮ ಕೈಗೊಳ್ಳಲು ಬೇಕಾದ ಅಗತ್ಯ ವೆಚ್ಚಗಳನ್ನು ವಿಪತ್ತು ನಿಧಿಯಿಂದಲೇ ಪೂರೈಸಲಾಗುವುದು ಎಂದರು.

  ಪಿಜಿ, ಹಾಸ್ಟೆಲ್​​​​​​ಗಳನ್ನು ಮುಚ್ಚಲು ಒತ್ತಾಯವಿಲ್ಲ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಸಹಕರಿಸಬೇಕು. ಮೈಸೂರು ಜಿಲ್ಲೆಯಾದ್ಯಂತ 139 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಶೇನ್ ವ್ಯವಸ್ಥೆಯ ಜೊತೆಗೆ ನರ್ಸ್ ಗಳನ್ನು ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

  ಕೊರೋನಾ ವೈರಸ್ ವಿಶ್ವದಾದ್ಯಂತ ಶರವೇಗದಲ್ಲಿ ಹಬ್ಬುತ್ತಿದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಹಾಗಾಗಿ ಇಂದಿನಿಂದಲೇ ಫಾಸ್ಟ್ ಫುಡ್, ಪಾನಿಪುರಿ ಸೇರಿದಂತೆ ಬೀದಿಬದಿ ವ್ಯಾಪಾರ ಬಂದ್ ಆಗಲಿದೆ. ಬೀದಿ ಬದಿಯಲ್ಲಿ ತರಕಾರಿ ಮಾರಾಟ ಮಾಡದಂತೆಯೂ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿದರು.

  ಪ್ರಧಾನಿ ಕರೆ ನೀಡಿರುವ ನಾಳಿನ ಜನತಾ ಕರ್ಪ್ಯೂಗೆ ಜನತೆ ಬೆಂಬಲ ನೀಡಿ ಕೈ ಜೋಡಿಸಬೇಕು. ನಾನು ಇಂದು ಎಷ್ಟೇ ಸಮಯವಾದರೂ ಬೆಂಗಳೂರು ತಲುಪುತ್ತೇನೆ. ನಾಳೆ ನಾನು ಮನೆಯೊಳಗೆ ಕುಟುಂಬ ಸದಸ್ಯರ ಜೊತೆ ಇರುತ್ತೇನೆ. ಯಾವುದೇ ಸೋಂಕನ್ನು ತಡೆಗಟ್ಟುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಕೊಡಲಿ ಎಂದರು.

  ಜಿಲ್ಲೆಯಾದ್ಯಂತ ಯಾವುದೇ ವ್ಯಕ್ತಿಯ ದೇಹದಲ್ಲಿ ಕರೋನಾ ವೈರಸ್ ಸೋಂಕಿನ ಪಾಸಿಟಿವ್ ಬಂದಿಲ್ಲ ಕೇವಲ ಕೆಲವರನ್ನು ನಿಗಾದಲ್ಲಿ ಇರಿಸಲಾಗಿದೆಯಷ್ಟೇ. ಕರೋನಾ ವೈರಸ್ ಸೋಂಕಿನ ಎಲ್ಲಾ ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದೇನೆ. ಇದುವರೆಗೂ ಯಾವುದೇ ಪಾಸಿಟಿವ್ ಬಂದಿಲ್ಲ ಎಂದರು.

  ಇದನ್ನೂ ಓದಿ : ಕೊರೋನಾ ನಿಯಂತ್ರಣಕ್ಕೆ ಜನತಾ ಕರ್ಫ್ಯೂ : ರಾಮನಗರದ ರೇಷ್ಮೆ ಮಾರುಕಟ್ಟೆಗೆ ರಜೆ ಘೋಷಣೆ

  ಕರೋನಾ ಸೋಂಕು ತಡೆಗೆ ಕೇಂದ್ರ ಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು. ಕೊರೋನಾ ಸೋಂಕನ್ನು ರಾಷ್ಟ್ರೀಯ ವಿಪತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ರೀತಿ ಘೋಷಿಸಿರುವ ವಿಶ್ವದ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ಸಿದ್ದರಾಮಯ್ಯ ಅವರಿಗೆ ಸಚಿವರು ತಿರುಗೇಟು ನೀಡಿದರು.
  First published: