ಕೊರೋನಾ ವಿಚಾರದಲ್ಲೂ ಕಾಂಗ್ರೆಸ್‌ನವರಿಗೆ ರಾಜಕೀಯವೇ ಮುಖ್ಯವಾಗಿದೆ; ಸಚಿವ ಸುಧಾಕರ್‌ ಕಿಡಿ

ಕೊರೋನಾ ವಿಷಯದಲ್ಲೂ ರಾಜಕೀಯವೇ ತಮಗೆ ಮುಖ್ಯ ಮತ್ತು ಲಾಭ ಅನ್ನುವ ಇವರ ಮನಸ್ಥಿತಿ ಹಾಗು ರೋಮ್ ನ ಅಂದಿನ ದೊರೆ ನೀರೋಗೂ ವ್ಯತ್ಯಾಸವಿಲ್ಲ.ಯಾಕೆಂದರೆ ಇಡೀ ರೋಮ್ ಸುಟ್ಟು ನಾಶವಾಗುತ್ತಿರುವಾಗ ನೀರೋ ಪಿಟೀಲು ಬಾರಿಸುತ್ತಿದ್ದ ಎಂದು ಸಚಿವ ಕೆ. ಸುಧಾಕರ್‌ ಕಿಡಿಕಾರಿದ್ದಾರೆ.

ಕೆ.ಸುಧಾಕರ್

ಕೆ.ಸುಧಾಕರ್

  • Share this:
ಬೆಂಗಳೂರು (ಮೇ 05); ಕೊರೋನಾ ವಿಚಾರದಲ್ಲೂ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ರಾಜಕೀಯ ಮತ್ತು ಪ್ರಚಾರದ ಗೀಳು ಮುಖ್ಯವಾಗಿದೆ ಎಂದು ಆರೋಗ್ಯ ಶಿಕ್ಷಣ ಸಚಿವ ಡಾ|ಕೆ. ಸುಧಾಕರ್‌ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ರಾಜ್ಯ ಸರ್ಕಾರ ಮೊದಲ ಬಸ್‌ ಮತ್ತು ರೈಲಿನ ವ್ಯವಸ್ಥೆ ಮಾಡಿತ್ತಾದರೂ ಅದಕ್ಕೆ ಕಾರ್ಮಿಕರಿಂದಲೇ ಹಣ ವಸೂಲಿ ಮಾಡಲು ಮುಂದಾಗಿತ್ತು. ಆದರೆ, ಇದನ್ನು ಖಂಡಿಸಿದ್ದ ರಾಜ್ಯ ಕಾಂಗ್ರೆಸ್‌ ನಾಯಕರು ತಾವೇ ಕಾರ್ಮಿಕರ ಬಸ್‌ ಮತ್ತು ರೈಲಿನ ಪ್ರಯಾಣ ದರವನ್ನು ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ, ಮೆಜೆಸ್ಟಿಕ್ ಬಳಿ ಕೆಲ ಕಾಲ ಸರ್ಕಾರದ ವಿರುದ್ಧ ಪ್ರತಿಭಟನೆಗೂ ಮುಂದಾಗಿದ್ದರು.ಆದರೆ, ಕಾಂಗ್ರೆಸ್‌ ನಾಯಕರ ಈ ವರ್ತನೆಯನ್ನು ಖಂಡಿಸಿರುವ ಸಚಿವ ಡಾ|ಕೆ. ಸುಧಾಕರ್‌,"ಕೊರೋನಾ ವಿಷಯದಲ್ಲೂ ರಾಜಕೀಯವೇ ತಮಗೆ ಮುಖ್ಯ ಮತ್ತು ಲಾಭ ಅನ್ನುವ ಇವರ ಮನಸ್ಥಿತಿ ಹಾಗು ರೋಮ್ ನ ಅಂದಿನ ದೊರೆ ನೀರೋ ಗು ವ್ಯತ್ಯಾಸವಿಲ್ಲ. ಯಾಕೆಂದರೆ ಇಡೀ ರೋಮ್ ಸುಟ್ಟು ನಾಶವಾಗುತ್ತಿರುವಾಗ ನೀರೋ ಪಿಟೀಲು ಬಾರಿಸುತ್ತಿದ್ದ" ಎಂದು ಕಿಡಿಕಾರಿದ್ದಾರೆ.ಮತ್ತೊಂದು ಟ್ವೀಟ್‌ನಲ್ಲಿ "ಕಾಂಗ್ರೆಸ್‌ನವರು ಕಾರ್ಮಿಕರ ಬಸ್ ಮತ್ತು ಟ್ರೈನ್ ಚಾರ್ಜ್ ಕೊಡ್ತೀವಿ ಅಂತ ರೋಡ್ ರೋಡ್‌ನಲ್ಲಿ ಓಡಾಟ ಹಾಗು ಅದರ ಜಾಹಿರಾತುಗಳನ್ನ ಕೊಟ್ಟಿರುವುದು ನೋಡಿದರೆ ಇದು ಭರ್ಜರಿ ಬಯಲುನಾಟಕ ಎಂದು ಗೊತ್ತಾಗುತ್ತೆ. ನಿಯಮದಂತೆ ಹಣ ಯಾರಿಗೆ ಕೊಡಬೇಕಿತ್ತೋ ಅವರಿಗೆ ಕೊಡುವುದು ಬಿಟ್ಟು ಊರೆಲ್ಲ ಕ್ಯಾಮೆರಾ ಮುಂದೆ ಕೊರೊನ ಮೀರುವ ಓಡಾಟ ,ಚೀರಾಟ ಮತ್ತು ಹಾರಾಟ" ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ : ಕಳೆದ 24 ಗಂಟೆಗಳಲ್ಲಿ 6 ರಾಜ್ಯಗಳಲ್ಲಿ ಹೆಚ್ಚಿದ ಕೊರೋನಾ ಸಾವು ಮತ್ತು ಸೋಂಕು; ಲಾಕ್‌ಡೌನ್ ಸಡಿಲಿಕೆ ಕಾರಣವಿರಬಹುದೇ?
First published: