ಜುಬಿಲೆಂಟ್​ಗೆ ಕೊರೋನಾ ಸೋಂಕು ಬರಲು 3 ಕಾರಣ: ತನಿಖಾ ಮಾಹಿತಿ ಬಿಚ್ಚಿಟ್ಟ ಸಚಿವ ಎಸ್.ಟಿ. ಸೋಮಶೇಖರ್

ಪೊಲೀಸರ ತನಿಖಾ ವರದಿಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹರ್ಷಗುಪ್ತ ಅವರ ತನಿಖಾ ವರದಿ ನನ್ನ ಕೈ ಸೇರಿಲ್ಲ ಎಂದು ಉಸ್ತುವಾರಿ ಸಚಿವರು ತಿಳಿಸಿದ್ಧಾರೆ.

news18-kannada
Updated:May 7, 2020, 5:53 PM IST
ಜುಬಿಲೆಂಟ್​ಗೆ ಕೊರೋನಾ ಸೋಂಕು ಬರಲು 3 ಕಾರಣ: ತನಿಖಾ ಮಾಹಿತಿ ಬಿಚ್ಚಿಟ್ಟ ಸಚಿವ ಎಸ್.ಟಿ. ಸೋಮಶೇಖರ್
ಮೈಸೂರು ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್
  • Share this:
ಮೈಸೂರು(ಮೇ 07): ಜುಬಿಲೆಂಟ್ ಫಾರ್ಮಾ ಕಂಪನಿಗೆ ಸೋಂಕು ತಗುಲಿದ ವಿಚಾರವಾಗಿ ಮೂರು ಕಾರಣಗಳು ತನಿಖೆಯಲ್ಲಿ ಸ್ಪಷ್ಟವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಇಂದು ಮೈಸೂರಿಗೆ ಆಗಮಿಸಿದ್ದ ಉಸ್ತುವಾರಿ ಸಚಿವ ಎಸ್‌ಟಿಎಸ್‌, ಜುಬಿಲೆಂಟ್ಸ್ ಕಾರ್ಖಾನೆ ಬಗ್ಗೆ ತನಿಖೆಯ ವರದಿ ಸಲ್ಲಿಕೆಯಾಗಿದೆ ಎಂದು ಹೇಳಿ ಮೂರು ಕಾರಣಗಳನ್ನು ತಿಳಿಸಿದರು.

ತಬ್ಲಿಘಿ ಜಮಾತ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಸಭೆಯೊಂದು ನಡೆದಿತ್ತು. ಆ ಸಭೆಗೆ ಜುಬಿಲೆಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ. ಈ ಸಂದರ್ಭದಲ್ಲಿ ಸೋಂಕು ಬಂದಿರಬಹುದು. ಇದು ಮೊದಲ ಕಾರಣ ಅವರು ಹೇಳಿದರು. ನಂತರ ಎರಡನೆಯದ್ದು ಕಾರ್ಖಾನೆಯಲ್ಲಿನ ಆಡಿಟ್​ಗಾಗಿ ದೇಶದ ನಾನಾ ರಾಜ್ಯದ ಕೆಲವರು ಚಾರ್ಟೆರ್ಡ್ ಅಕೌಂಟೆಂಟ್ಸ್‌ಗಳು  ಜುಬಿಲೆಂಟ್ಸ್‌ಗೆ ಬಂದಿದ್ದರು. ಇವರಿಂದಲೂ ಸೋಂಕು ಕಾರ್ಖಾನೆಗೆ ಬಂದಿರಬಹುದು. ಮೂರನೇ ಕಾರಣ, ಜುಬಿಲೆಂಟ್​ನ ಅಧಿಕಾರಿಗಳು ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿ ಬಂದಿದ್ದಾರೆ. ಅದು ಸಹ ಕಾರ್ಖಾನೆಯಲ್ಲಿ ಸೋಂಕು ಹರಡೋಕೆ ಕಾರಣ ಆಗಿರಬಹುದು ಎಂದು 3 ಕಾರಣಗಳ ಸಂಭಾವ್ಯತೆಯನ್ನು ತಿಳಿಸಿದ ಸಚಿವರು, ಈ ಮೂರರಲ್ಲಿ ಯಾವುದಾದರೂ ಕೂಡ ಸೋಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: ಪತ್ರಕರ್ತರಿಗೆ ಯಾಕೆ ಜೀವ ವಿಮೆ ಘೋಷಿಸಿಲ್ಲ?: ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ನಲ್ಲಿ PIL ಸಲ್ಲಿಕೆ

ಪೊಲೀಸರ ತನಿಖಾ ವರದಿಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹರ್ಷಗುಪ್ತ ಅವರ ತನಿಖಾ ವರದಿ ನನ್ನ ಕೈ ಸೇರಿಲ್ಲ. ಆದರೆ ಅವರು ತನಿಖೆಗೆ 1 ತಿಂಗಳು ತಡವಾಗಿದೆ ಎಂದು ಹೇಳಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಜುಬಿಲೆಂಟ್ಸ್ ಕಾರ್ಖಾನೆಗೆ ಕೊರೋನಾ ಸೋಂಕು ತಗುಲಿದ್ದರ ಬಗ್ಗೆ ಸರ್ಕಾರ ಆದೇಶಿಸಿದ್ದ ತನಿಖೆಯ ಕೇಸ್​ನ ವರದಿಯನ್ನ ಸರ್ಕಾರಕ್ಕೆ  ಸಲ್ಲಿಸಿರುವ  ಹರ್ಷಗುಪ್ತ, ತನಿಖೆ ಮುಗಿಸಿ  ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ವಿಶೇಷಾಧಿಕಾರಿ ಹರ್ಷಗುಪ್ತ ಜುಬಿಲೆಂಟ್ಸ್ ತನಿಖೆ ಕುರಿತ ವರದಿಯನ್ನ ಮುಖ್ಯ ಕಾರ್ಯದರ್ಶಿ ಹಾಗೂ ಆಹಾರ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಜುಬಿಲೆಂಟ್ಸ್ ಕಾರ್ಖಾನೆಯ P52ಗೆ ಸೋಂಕು ತಗುಲಿದ್ದರ ಬಗ್ಗೆ ತನಿಖೆ ನಡೆಸುವಂತೆ ನೇಮಕವಾಗಿದ್ದ ಹರ್ಷಗುಪ್ತ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅಪೂರ್ಣವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.  ಯಾಕಂದ್ರೆ ತನಿಖೆಯ ಮಾಹಿತಿ ಕೇಳಿ ಹಲವು ಇಲಾಖೆಗೆ ಪತ್ರ ಬರೆದಿದ್ದ ತನಿಖಾಧಿಕಾರಿ ಹರ್ಷಗುಪ್ತರಿಗೆ, ಯಾವುದೇ ಮಾಹಿತಿ ಸಿಗದ  ಹಿನ್ನೆಲೆಯಲ್ಲಿ ಅಪೂರ್ಣ ವರದಿ ಸಲ್ಲಿಕೆ ಮಾಡಿದ್ದಾರೆ. ತಮ್ಮಲ್ಲಿರುವ ಅಂಶಗಳನ್ನ ಉಲ್ಲೇಖಿಸಿ ವರದಿ ಸಲ್ಲಿಸಿರುವ ತನಿಖಾಧಿಕಾರಿ ಹರ್ಷಗುಪ್ತ ಇಲಾಖೆಗಳ ಅಸಹಕಾರಕ್ಕೂ ಬೇಸರ ವ್ಯಕ್ತಪಡಿಸಿರೋದು ಸಹ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: SSLC Exam 2020: ಫೇಸ್​ಬುಕ್​​​ ಮೂಲಕ ಎಸ್​ಎಸ್​ಎಲ್​ಸಿ ಮಕ್ಕಳಿಗೆ ಪಾಠ ಮಾಡಿದ ಮಾಜಿ ಶಾಸಕ ವೈಎಸ್​​ವಿ ದತ್ತಾ

ಇನ್ನು, ಜುಬಿಲೆಂಟ್ಸ್ ಕಾರ್ಖಾನೆ ಕೇಸ್ ತನಿಖೆ ಹಾಗೂ ಹೋರಾಟದಲ್ಲಿ ನನಗೆ ಬೆಂಬಲ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧವೇ ಬೇಸರ ಹೊರಹಾಕಿದ್ದ ಶಾಸಕ ಹರ್ಷವರ್ಧನ್, ಜುಬಿಲೆಂಟ್ಸ್ ವಿಚಾರದಲ್ಲಿ ಸತ್ಯ ಎಲ್ಲರಿಗೂ ಗೊತ್ತಿದೆ. ಆದ್ರೆ ಹೇಳಲು ಯಾರಿಗೂ ಧೈರ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಕಾರ್ಖಾನೆಯ ವಿಚಾರದಲ್ಲಿ ನನ್ನ ಕೆಲಸ ನಾನು ಮಾಡಿದ್ದೇನೆ. ಕಂಪನಿಯದ್ದು ತಪ್ಪೇ ಇಲ್ಲ ಎಂಬಂತೆ ಬಿಂಬಿಸಲಾಗಿದೆ. ನನ್ನನ್ನು ತಪ್ಪಿತಸ್ಥನಂತೆ ಮಾಡಲಾಗಿದೆ. ಜುಬಿಲೇಂಟ್ಸ್ ನಿಂದ ನಂಜನಗೂಡಿಗೆ ಕೆಟ್ಟ ಹೆಸರು ಬಂದಿದೆ ಎಂದು ಕಾರ್ಖಾನೆ ವಿರುದ್ದ ಕಿಡಿಕಾರಿದ್ದರು.ಹರ್ಷಗುಪ್ತರಿಂದ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದೆ. ನೇಮಕ ಪ್ರಕ್ರಿಯೆ ವಿಳಂಬವಾಗಿದ್ದಕ್ಕೆ ತನಿಖೆ ಹಾದಿ ತಪ್ಪಿದೆ. ಕೆಲವು ಇಲಾಖೆಗಳು ಹರ್ಷಗುಪ್ತಾಗೆ ಸಹಕಾರ ನೀಡಿಲ್ಲ. ನಾನು ಆಸಕ್ತಿ ತೋರಿಸಿದ್ದಕ್ಕೆ ಇಲ್ಲಿವರೆಗೂ ಬಂತು. ಇದರ ಬಗ್ಗೆ ಸತ್ಯಾಸತ್ಯತೆಗಳನ್ನ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದೆ. ಹರ್ಷಗುಪ್ತ ಅಂತಹ ಅಧಿಕಾರಿಯೇ ಏನು ಮಾಡಲು ಸಾಧ್ಯವಾಗಿಲ್ಲ ಅಂದ್ರೆ ಏನು ಹೇಳೋಕಾಗುತ್ತೆ. ತನಿಖೆಗೆ ಸಹಕರಿಸದಿರುವುದು ಎಲ್ಲೋ ಒಂದು ಕಡೆ ನಿರಾಸೆಯಾಗಿದೆ. P52 ನಿಂದ ಸರ್ಕಾರದ ಬೊಕ್ಕಸಕ್ಕೆ 8 ಕೋಟಿ ನಷ್ಟವಾಗಿದೆ. ಕಂಪನಿ ಕೆಲಸ ಶುರು ಮಾಡಿದ್ರೆ ನಾಳೆ ಮತ್ತೆ ಪುನರಾವರ್ತನೆ ಆಗಲ್ಲ ಅನ್ನೋದು ಏನು ಗ್ಯಾರೆಂಟಿ. ನನ್ನ ಸ್ವಾರ್ಥಕ್ಕಾಗಿಯೋ ಅಥವಾ ಬೆನಿಫಿಟ್ ಗಾಗಿಯೋ ನಾನು ಹೋರಾಟ ಮಾಡಿಲ್ಲ. P52 ರೋಗಿಯು ನಂಜನಗೂಡು ಹೆಸರನ್ನ ಹೀನಾಯವಾಗಿ ಹಾಳು ಮಾಡಿದ್ದಾನೆ. ಆತನಿಗೆ ನೋಟೀಸ್ ನೀಡುವ ಬದಲು ಸಸ್ಪೆಂಡ್ ಮಾಡಬೇಕಿತ್ತು ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಆಗ್ರಹಿಸಿದ್ದರು. ತಮ್ಮದೆ ಪಕ್ಷದ ಶಾಸಕ ಕಾರ್ಖಾನೆ ಬಗ್ಗೆ ಅಸಮಾಧಾನ ಹೊರಹಾಕಿದ್ರೆ ಸಚಿವರು ಮಾತ್ರ ಕಾರ್ಖಾನೆ ಬಗ್ಗೆ ಮೃದು ಧೋರಣೆಯ ಮಾತುಗಳನ್ನಾಡುತ್ತಿರೋದು ವಿಪರ್ಯಾಸವೇ ಸರಿ.

ವರದಿ: ಪುಟ್ಟಪ್ಪ

First published: May 7, 2020, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading