• Home
  • »
  • News
  • »
  • coronavirus-latest-news
  • »
  • ‘ಕೊರೋನಾ ಹಾಟ್​ಸ್ಪಾಟ್‘​​ ಆದ ಮೈಸೂರು ಜುಬಿಲೆಂಟ್ಸ್ ಕಾರ್ಖಾನೆ; ಸಚಿವ ಸೋಮಶೇಖರ್ ಭೇಟಿ, ಪರಿಶೀಲನೆ

‘ಕೊರೋನಾ ಹಾಟ್​ಸ್ಪಾಟ್‘​​ ಆದ ಮೈಸೂರು ಜುಬಿಲೆಂಟ್ಸ್ ಕಾರ್ಖಾನೆ; ಸಚಿವ ಸೋಮಶೇಖರ್ ಭೇಟಿ, ಪರಿಶೀಲನೆ

‘ಕೊರೋನಾ ಹಾಟ್​ಸ್ಪಾಟ್‘​​ ಆದ ಮೈಸೂರು ಜುಬಿಲೆಂಟ್ಸ್ ಕಾರ್ಖಾನೆ; ಸಚಿವ ಸೋಮಶೇಖರ್ ಭೇಟಿ, ಪರಿಶೀಲನೆ

‘ಕೊರೋನಾ ಹಾಟ್​ಸ್ಪಾಟ್‘​​ ಆದ ಮೈಸೂರು ಜುಬಿಲೆಂಟ್ಸ್ ಕಾರ್ಖಾನೆ; ಸಚಿವ ಸೋಮಶೇಖರ್ ಭೇಟಿ, ಪರಿಶೀಲನೆ

ಇನ್ನು, ಈ ಸಂಬಂಧ ಅಧಿಕೃತ ಮಾಹಿತಿ ನೀಡಿರುವ ಮೈಸೂರು‌ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಇಂದು ಐವರಿಗೆ ಕೊರೋನಾ ಸೋಂಕು ಬಂದಿದೆ. ಈ ಐದು ಮಂದಿಯೂ ಜುಬಿಲೆಂಟ್ಸ್​​ ಕಾರ್ಖಾನೆ ನೌಕರರು. ಮೂರು ಮಂದಿ ಒಟ್ಟಿಗೆ ವಾಸಿಸುತ್ತಿದ್ದರು. ಈಗಾಗಲೇ ಗೃಹಬಂಧನದಲ್ಲಿದ್ದವರಿಗೆ ಕೊರೋನಾ ಪಾಸಿಟಿವ್​​ ಕಂಡು ಬಂದಿರುವುದು ಎಂದರು.

ಮುಂದೆ ಓದಿ ...
  • Share this:

ಮೈಸೂರು(ಏ.11): ಮೈಸೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಸಹ 5 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 47ಕ್ಕೇರಿದೆ.  ಈ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ. ಇಂದು ಮತ್ತೆ ನಂಜನಗೂಡಿನ ಜುಬಿಲೆಂಟ್ಸ್‌ ಕಾರ್ಖಾನೆ ಐವರು ನೌಕಕರಿಗೆ ಸೋಂಕು ಧೃಡವಾಗಿದೆ. ಇದುವರೆಗಿನ 47 ಕೊರೋನಾ ಪೀಡಿತರಲ್ಲಿ 36 ಮಂದಿ ಜುಬಿಲೆಂಟ್ಸ್ ಕಾರ್ಖಾನೆ ನೌಕರರು ಇದ್ದಾರೆ.


ಇನ್ನು, ಈ ಸಂಬಂಧ ಅಧಿಕೃತ ಮಾಹಿತಿ ನೀಡಿರುವ ಮೈಸೂರು‌ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಇಂದು ಐವರಿಗೆ ಕೊರೋನಾ ಸೋಂಕು ಬಂದಿದೆ. ಈ ಐದು ಮಂದಿಯೂ ಜುಬಿಲೆಂಟ್ಸ್​​ ಕಾರ್ಖಾನೆ ನೌಕರರು. ಮೂರು ಮಂದಿ ಒಟ್ಟಿಗೆ ವಾಸಿಸುತ್ತಿದ್ದರು. ಈಗಾಗಲೇ ಗೃಹಬಂಧನದಲ್ಲಿದ್ದವರಿಗೆ ಕೊರೋನಾ ಪಾಸಿಟಿವ್​​ ಕಂಡು ಬಂದಿರುವುದು ಎಂದರು.


ನಂಜನಗೂಡು ಜ್ಯುಬಿಲೆಂಟ್ ಕಾರ್ಖಾನೆ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ. ಎರಡು ಗ್ರಾಮಗಳಲ್ಲಿ ಸೀಲ್ಡ್‌ಡೌನ್‌ಗೆ ಆದೇಶ ನೀಡಲಾಗಿದೆ. ಮೈಸೂರಿನ ಜೆಪಿ ನಗರ, ಶ್ರೀರಾಂಪುರದ ಎರಡು ಮನೆಗಳ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಲಾಗಿದೆ. ಪೊಲೀಸರು ಕೂಡ ಜ್ಯುಬಿಲೆಂಟ್ ಕಾರ್ಖಾನೆ ಸೋಂಕು ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಪ್ರತ್ಯೇಕವಾಗಿಸಿ ಚಿಕಿತ್ಸೆಯಲ್ಲಿರುವ ಕೆಲವರು ಗುಣಮುಖರಾಗುತ್ತಿದ್ದಾರೆ. ನಾಳೆ ಸಂಜೆ ವೇಳೆಗೆ ಗುಣಮುಖರಾದ ಕೆಲವರು ಡಿಸ್ಚಾರ್ಜ್ ಆಗಲಿದ್ದಾರೆ. ಜತೆಗೆ ಜುಬಿಲೆಂಟ್ಸ್​​ ಕಾರ್ಖಾನೆಯ ಎಲ್ಲರಿಗೂ ಸ್ಯಾಂಪಲ್​​ ಟೆಸ್ಟ್​​ ಮಾಡಲು ನಿರ್ಧರಿಸಲಾಗಿದೆ ಎಂದರು ಜಿಲ್ಲಾಧಿಕಾರಿ.


ಇದನ್ನೂ ಓದಿ: ಭಾರತದಲ್ಲಿಂದು ಒಂದೇ ದಿನ ಕೊರೋನಾಗೆ 40 ಮಂದಿ ಸಾವು; ಮೃತರ ಸಂಖ್ಯೆ 239ಕ್ಕೇರಿಕೆ, 7,447 ಜನರಿಗೆ ಸೋಂಕು


ದಿನದಿಂದ ದಿನಕ್ಕೆ ಜುಬಿಲೆಂಟ್ಸ್ ಕಾರ್ಖಾನೆ ನೌಕರರ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಹಾಗಾಗಿಯೇ ಈ ಕಾರ್ಖಾನೆ ಸಂಬಂಧ ಜನಪ್ರತಿನಿಧಿಗಳ ಸಭೆ ನಡೆಸಿದ್ದ ನೂತನ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಎಲ್ಲರಿಂದ ಮಾಹಿತಿ ಪಡೆದರು.ನಂತರ ನಂಜನಗೂಡು ಕೈಗಾರಿಕಾ ಪ್ರದೇಶಕದಲ್ಲಿರುವ ಜುಬಿಲೆಂಟ್ಸ್ ಕಾರ್ಖಾನೆಯ ಸ್ಥಳ ಪರಿಶೀಲನೆ ಮಾಡಿದರು. ಸಚಿವರೊಂದಿಗೆ ಇದ್ದ ಶಾಸಕ ಹರ್ಷವರ್ಧನ್ ಸ್ಥಳದಲ್ಲಿನ ಪರಿಸ್ಥಿತಿ ವಿವರಿಸಿದರು. ಜಿಲ್ಲಾಧಿಕಾರಿ ಅಭಿರಾಮ್, ಎಸ್ಪಿ ರಿಶ್ಯಂತ್‌ ಸಹ ಸ್ಥಳದಿಂದ ನೂತನ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದರು.


ಇತ್ತ ಜುಬಿಲಿಯಂಟ್ ಕಾರ್ಖಾನೆಗೆ ಲೀಗಲ್ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ರಿಷ್ಯಂತ್, ಕಾರ್ಖಾನೆಯವರು ನಾವು ಕೇಳಿದ ದಾಖಲೆ ನೀಡಿರಲಿಲ್ಲ. ಅದಕ್ಕೆ  ನೋಟಿಸ್ ಕೊಡಲಾಗಿತ್ತು. ಇದೀಗಾ ನೋಟಿಸ್ ಕೊಟ್ಟ ಬಳಿಕ ಎಲ್ಲಾ ದಾಖಲೆ ನೀಡುತ್ತಿದ್ದಾರೆ. P 52 ಟ್ರಾವೆಲ್ ಇಸ್ಟರಿ ಗೊತ್ತಾಗಿದೆ. ಆದರೆ ಯಾರಿಗೆ ಮೊದಲು ವೈರಸ್ ತಗುಲಿದೆ ಅಂತ ಗೊತ್ತಾಗಬೇಕಿದೆ.‌ ಆಡಿಟ್ ಮಾಡಲು ಹೊರಗಿನಿಂದ ಕೆಲವರು ಬಂದಿದ್ದರು. ಆಸ್ಟ್ರೇಲಿಯಾದಿಂದ ಹಾಗೂ ಗೋವಾದಿಂದ ಬಂದಿದ್ದರು.ಇದೆಲ್ಲದರ ಬಗ್ಗೆಯು ತನಿಖೆಯಾಗುತ್ತಿದೆ ಎಂದರು.

Published by:Ganesh Nachikethu
First published: