ಗರ್ಭಿಣಿಗೆ ಚಿಕಿತ್ಸೆ ತಡೆ ಮಾಡಿದ ವೈದ್ಯರ ನಿರ್ಲಕ್ಷ್ಯ ಪ್ರಕರಣ - ಯೂಟರ್ನ್​ ಹೊಡೆದ ಸಚಿವ ಶ್ರೀರಾಮುಲು

ಹೀಗೆ ಮುಂದುವರಿದ ಅವರು, ಇನ್ಮುಂದೆ ಇಂತಹ ಘಟನೆಗಳು ಆಗಬಾರದು. ಆದ್ದರಿಂದಲೇ ಕಂಟೈನ್ಮೆಂಟ್ ಮತ್ತು ರೆಡ್ ಜೋನ್ ಗಳಿಂದ ಗರ್ಭಿಣಿಯರಿಗೆ ಮಾತ್ರ ಕೊರೊನಾ ಪರೀಕ್ಷೆಗೆ ಒಳಪಡಿಸಲಿ, ಇಲ್ಲದಿದ್ದರೆ ನೇರವಾಗಿ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದೇನೆ ಎಂದಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು

ಆರೋಗ್ಯ ಸಚಿವ ಶ್ರೀರಾಮುಲು

  • Share this:
ಕೊಡಗು(ಜೂ.10): ಇತ್ತೀಚೆಗೆ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ತಡ ಮಾಡಿದ್ದ ವೈದ್ಯರನ್ನು ಅಮಾನತು ಮಾಡಲಾಗಿದೆ ಎಂದು ಉಡುಪಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದರು. ಈ ಬೆನ್ನಲ್ಲೀಗ ಮತ್ತೆ ಚಿಕಿತ್ಸೆ ನೀಡಲು ವೈದ್ಯರು ತಡ ಮಾಡಿರುವ ಬಗ್ಗೆ ತನಿಖೆ ಮಾಡುವಂತೆ ನಿರ್ದೇಶಕರಿಗೆ ಆದೇಶಿಸಿದ್ದೇನೆ ಎಂದು ಮಡಿಕೇರಿಯಲ್ಲಿ ಹೇಳುವ ಮೂಲಕ ಯೂಟರ್ನ್​​ ಹೊಡೆದಿದ್ದಾರೆ.

ಈ ಸಂಬಂಧ ಮಂಗಳವಾರ ಮಡಿಕೇರಿಯಲ್ಲಿ ಮಾತಾಡಿದ್ದ ಸಚಿವ ಶ್ರೀರಾಮುಲು ಅವರು, ರಾಯಚೂರಿನ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡುವ ಬದಲಿಗೆ ಕೊರೋನಾ ಪರಿಶೀಲನೆ ನಡೆಸಬೇಕೆಂಬ ಉದ್ದೇಶದಿಂದ ತಡ ಮಾಡಿದ್ದರು ಎನ್ನಲಾಗಿದೆ. ಇದರಿಂದಾಗಿ ಮಹಿಳೆಗೆ ಗರ್ಭಪಾತವಾಗಿದೆ ಎಂದರು.

ಹೀಗೆ ಮುಂದುವರಿದ ಅವರು, ಇನ್ಮುಂದೆ ಇಂತಹ ಘಟನೆಗಳು ಆಗಬಾರದು. ಆದ್ದರಿಂದಲೇ ಕಂಟೈನ್ಮೆಂಟ್ ಮತ್ತು ರೆಡ್ ಜೋನ್ ಗಳಿಂದ ಗರ್ಭಿಣಿಯರಿಗೆ ಮಾತ್ರ ಕೊರೊನಾ ಪರೀಕ್ಷೆಗೆ ಒಳಪಡಿಸಲಿ, ಇಲ್ಲದಿದ್ದರೆ ನೇರವಾಗಿ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ವಲಸೆ ಕಾರ್ಮಿಕರನ್ನು ಇನ್ನೂ ಯಾಕೇ ಮನೆಗೆ ಕಳಿಸಿಲ್ಲ? - ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

ಒಟ್ಟಿನಲ್ಲಿ ಚಿಕಿತ್ಸೆ ನೀಡಲು ತಡ ಮಾಡಿದ ವೈದ್ಯರ ಅಮಾನತು ಮಾಡಲಾಗಿದೆ ಎಂದು ಉಡುಪಿಯಲ್ಲಿ ಹೇಳಿದ್ದ ಸಚಿವ ಶ್ರೀರಾಮುಲು ಮಡಿಕೇರಿಯಲ್ಲಿ ಮಾತ್ರ ಬೇರೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇವರು ಈ ವಿಚಾರದಲ್ಲಿ ಯೂಟರ್ನ್​​ ತೆಗೆದುಕೊಂಡ್ರಾ ಎಂಬ ಅನುಮಾನ ಶುರುವಾಗಿದೆ.
First published: