HOME » NEWS » Coronavirus-latest-news » MINISTER SHASHIKALA JOLLE THAT SHE IS NOT REASON FOR DISSENT IN BJP GNR

‘ಬಿಜೆಪಿ ನಾಯಕರ ನಡುವಿನ ಭಿನ್ನಮತಕ್ಕೆ ನಾನು ಕಾರಣಳಲ್ಲ‘ - ಸಚಿವೆ ಶಶಿಕಲಾ ಜೊಲ್ಲೆ

ನನಗೆ ವಿಶ್ವಾಸವಿದೆ. ರಾಜ್ಯ ಮುಖಂಡರು, ರಾಷ್ಟ್ರೀಯ ಮುಖಂಡರು ಈ ನಿರ್ಣಯ ತೆಗೆದುಕೊಳ್ಳಲಿಕ್ಕಿಲ್ಲ. ಒಂದು ವೇಳೆ ನಿರ್ಣಯ ತೆಗೆದುಕೊಂಡರೆ ಪಕ್ಷಕ್ಕೆ ಬದ್ಧಳಾಗಿರುತ್ತೇನೆ ಎಂದು ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.

news18-kannada
Updated:June 3, 2020, 4:35 PM IST
‘ಬಿಜೆಪಿ ನಾಯಕರ ನಡುವಿನ ಭಿನ್ನಮತಕ್ಕೆ ನಾನು ಕಾರಣಳಲ್ಲ‘ - ಸಚಿವೆ ಶಶಿಕಲಾ ಜೊಲ್ಲೆ
ಸಿಎಂ ಯಡಿಯೂರಪ್ಪ ಹಾಗೂ ಸಚಿವೆ ಶಶಿಕಲಾ ಜೊಲ್ಲೆ
  • Share this:
ವಿಜಯಪುರ(ಜೂ.03): ರಾಜ್ಯ ಬಿಜೆಪಿಯಲ್ಲಿ ಈಗ ಸಿಎಂ ವಿರುದ್ಧ ಹಲವಾರು ಶಾಸಕರು ಮುಸುಕಿನ ಗುದ್ದಾಟಕ್ಕೆ ಇಳಿದಿದ್ದಾರೆ. ಅದರಲ್ಲಿಯೂ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ಸಿಎಂ ಕರೆದರೂ ಅವರನ್ನು ಭೇಟಿಯಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಯತ್ನಾಳ ಈ ರೀತಿ ಸಿಎಂ ವಿರುದ್ಧ ಸಮರ ಸಾರಲು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕಾರಣೆ ಎಂಬ ಮಾತು ಕೇಳಿ ಬಂದಿದೆ.

ಹೌದು, ಈ ಮುಂಚೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗದಗ ಜಿಲ್ಲೆಯ ಸಿ. ಸಿ. ಪಾಟೀಲ ಅವರನ್ನು ಬದಲಾಯಿಸಿ ಬೆಳಗಾವಿ ಜಿಲ್ಲೆಯ ಶಶಿಕಲಾ ಜೊಲ್ಲೆ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಸಿಎಂ ವಿರುದ್ಧ ಯತ್ನಾಳ ಬಂಡಾಯ ಸಾರಲು ತಾವು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಕಾರಣ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅಲ್ಲಗೆಳೆದಿದ್ದಾರೆ.

ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಈ ರೀತಿ ಏನಿಲ್ಲ.  ಆಥರಾ ಆಗೋದೂ ಇಲ್ಲ. ಜಗಳ ಮಾಡಿಕೊಂಡು ಹೋಗುವಷ್ಟು ಸಮರ್ಥಳಿದ್ದೇನೆ. ಬೇಕಾದರೇ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.

ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಪ್ರಯತ್ನಿಸಲಿಲ್ಲ. ರಮೇಶ್​​ ಜಾರಕಿಹೊಳಿಯವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡಿದ್ದು, ಸರಿಯಿದೆ. ಖುಷಿ ತಂದಿದೆ.  ಅವರು ಒಳ್ಳೆಯ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: COVID-19 Vaccine: ಮಂಗಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗಕ್ಕೆ ಮುಂದಾದ ಭಾರತ

ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಹಿನ್ನೆಲೆಯಲ್ಲಿ ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಡಲು ಚಿಂತನೆ ನಡೆದಿದೆ ಎಂಬುದನ್ನು ಅವರು ಅಲ್ಲಗಳೆದರು. ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವೆಯಾಗಿದ್ದೇನೆ. ನನ್ನನ್ನು ಸಚಿವ ಸಂಪುಟದಿಂದ ಕೈಬಿಡುತ್ತಾರೆ ಎಂಬುದ ಇನ್ನೂ ಗಮನಕ್ಕೆ ಬಂದಿಲ್ಲ ಎಂದರು ಜೊಲ್ಲೆ.

ಇನ್ನು, ಕೈಬಿಡುವ ಪ್ರಶ್ನೆ ಏನಿದೆ? ನಾನು ಏನು ಮಾಡಿದ್ದೇನೆ? ನಾನೊಬ್ಬ ಮಹಿಳೆಯಾಗಿದ್ದೇನೆ. ಎರಡು ಬಾರಿ ಶಾಸಕಿಯಾಗಿದ್ದೇನೆ.  ತಳಮಟ್ಟದಿಂದ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದೇನೆ. ಮೂರು ವರ್ಷ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ಈಗ ಸಚಿವೆಯಾಗಿ ಸರಕಾರಕ್ಕೆ ಹೆಸರು ತರುವಂಥ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.ನನಗೆ ವಿಶ್ವಾಸವಿದೆ. ರಾಜ್ಯ ಮುಖಂಡರು, ರಾಷ್ಟ್ರೀಯ ಮುಖಂಡರು ಈ ನಿರ್ಣಯ ತೆಗೆದುಕೊಳ್ಳಲಿಕ್ಕಿಲ್ಲ. ಒಂದು ವೇಳೆ ನಿರ್ಣಯ ತೆಗೆದುಕೊಂಡರೆ ಪಕ್ಷಕ್ಕೆ ಬದ್ಧಳಾಗಿರುತ್ತೇನೆ ಎಂದು ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.
Youtube Video
First published: June 3, 2020, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories