HOME » NEWS » Coronavirus-latest-news » MINISTER SHASHIKALA JOLLE SAYS TWO CHILDREN ORPHANED IN THE STATE BY COVID SESR

ಕೋವಿಡ್​ನಿಂದ ರಾಜ್ಯದಲ್ಲಿ ಇಬ್ಬರು ಮಕ್ಕಳು ಅನಾಥ; ದತ್ತು ಪಡೆಯಲು ನಿಯಮ ಸಡಿಲಿಕೆ: ಶಶಿಕಲಾ ಜೊಲ್ಲೆ

ಕೊರೋನಾ ಸೋಂಕಿನಿಂದಾಗಿ ಅನಾಥವಾಗುತ್ತಿರುವ ಮಕ್ಕಳ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಕೆಲವು ನಿಯಮಗಳಿಗೆ ಬದಲಾವಣೆ ತರುತ್ತಿದ್ದೇವೆ.

news18-kannada
Updated:May 18, 2021, 6:17 PM IST
ಕೋವಿಡ್​ನಿಂದ ರಾಜ್ಯದಲ್ಲಿ ಇಬ್ಬರು ಮಕ್ಕಳು ಅನಾಥ; ದತ್ತು ಪಡೆಯಲು ನಿಯಮ ಸಡಿಲಿಕೆ: ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ.
  • Share this:
ಬೆಂಗಳೂರು (ಮೇ. 18):  ಕೋವಿಡ್​ ಸೋಂಕು ಜನರ ಪ್ರಾಣಕ್ಕೆ ಮಾರಕವಾಗುವ ಜೊತೆಗೆ ಅನೇಕ ಪುಟ್ಟ ಪುಟ್ಟ ಮಕ್ಕಳನ್ನು ತಬ್ಬಲಿಗಳನ್ನಾಗಿ ಮಾಡುತ್ತಿದೆ. ಸೋಂಕಿಗೆ ತುತ್ತಾದ ಅಪ್ಪ ಅಮ್ಮನನ್ನು ಕಳೆದುಕೊಂಡ ಮಕ್ಕಳು ಈಗ ಕಂಗಾಲಾಗಿದ್ದಾರೆ. ಇದೇ ಹಿನ್ನಲೆ ಸರ್ಕಾರ ಈಗ ಈ ಅನಾಥ ಮಕ್ಕಳ ರಕ್ಷಣೆಗೆ ಧಾವಿಸಿದೆ. ಈ ಕುರಿತು ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ, ಕೊರೋನಾದಿಂದ ತಂದೆ, ತಾಯಿ ಕಳೆದುಕೊಂಡ ಮಕ್ಕಳ ರಕ್ಷಣೆಗೆ ಇಲಾಖೆ ಬದ್ಧವಾಗಿದೆ ಎಂಬ ಅಭಯವನ್ನು ನೀಡಿದ್ದಾರೆ. ಅನಾಥ ಮಕ್ಕಳನ್ನು ದತ್ತು ಪಡೆಯಲು ಹಲವು ನಿಯಮಗಳಿವೆ. ಕೊರೋನಾ ಸೋಂಕಿನಿಂದಾಗಿ ಅನಾಥವಾಗುತ್ತಿರುವ ಮಕ್ಕಳ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಕೆಲವು ನಿಯಮಗಳಿಗೆ ಬದಲಾವಣೆ ತರುತ್ತಿದ್ದೇವೆ. ಮಕ್ಕಳನ್ನು ದತ್ತು ಪಡೆಯಲು ಕೆಲ ನಿಯಮಗಳಿವೆ. ಈ ಹಿನ್ನಲೆ ವಾಟ್ಸಪ್​ಗಳಲ್ಲಿ ಬರುವ ವದಂತಿಗಳಿಗೆ ಕಿವಿಗೊಡಬಾರದು. ಸರ್ಕಾರದ ನಿಯಮಾವಳಿಯಂತೆ ಮಕ್ಕಳ ರಕ್ಷಣ ಮತ್ತು ದತ್ತು ಕ್ರಮ ಮಾಡಲು ಅವಕಾಶ ವಿದೆ ಎಂದರು.

ರಾಜ್ಯದಲ್ಲಿ ಪ್ರಸ್ತುತ ಕೋವಿಡ್​ನಿಂದಾಗಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಒಂದು ಚಾಮರಾಜನಗರದಲ್ಲಿ ಮತ್ತೊಂದು ಮಂಡ್ಯದಲ್ಲಿ. ಈ ಅನಾಥ ಮಕ್ಕಳ ರಕ್ಷಣೆ ಮಾಡಲಾಗಿದೆ. ಈ ಮಕ್ಕಳ ದತ್ತು ಪ್ರಕ್ರಿಯೆ ಬಗ್ಗೆ ಎಚ್ಚರಿಕೆವಹಿಸಲಾಗಿದೆ. ಯಾರೂ ಕೂಡ ನೇರವಾಗಿ ಇಂತಹ ಕಾರ್ಯಕ್ಕೆ ಕೈ ಹಾಕಬಾರದು. ಪ್ರತಿ ಜಿಲ್ಲೆಯಲ್ಲಿ ಸೇವಾ ಕಾರ್ಯ ಪಡೆ ಮಾಡುತ್ತಿದ್ದು, ಸ್ವಯಂ ಸೇವಕರು ಇದರಲ್ಲಿ ಕೈ ಜೋಡಿಸಬಹುದಾಗಿದೆ ಎಂದರು.

ನೋಡೆಲ್​ ಅಧಿಕಾರಿ ನೇಮಕ

ಅನಾಥ ಮಕ್ಕಳ ಗುರುತಿಸುವಿಕೆ ಮತ್ತು ಪುನರ್ವಸತಿ ಮಾಡಲು ಸರ್ಕಾರ ಬದ್ಧವಾಗಿದೆ. ಕೋರೋನಾ ಬಾಧಿತರಾದ ಮಕ್ಕಳನ್ನು ಗುರುತಿಸಲು 1098 ಮಕ್ಕಳ ಸಹಾಯವಾಣಿ ಮಾಡಲಾಗಿದೆ. ಕೋವಿಡ್ ಸೋಂಕಿತ ರಾದ ಮಕ್ಕಳನ್ನು ಗುರುತಿಸುವ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಐಎಎಸ್​​ ಅಧಿಕಾರಿ ಮೋಹನ್ ರಾಜ್ ರನ್ನು ನೋಡೇಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು.

ನಿಯಮ ಸಡಿಲಿಕೆ

ಅನಾಥ ಮಕ್ಕಳನ್ನು ದತ್ತು ಪಡೆಯುವ ನಿಯಮ ಬದಲಾವಣೆ ಮಾಡಿದ್ದೇವೆ. ದತ್ತು ನಿಯಮ ತುಂಬಾ ಕಠಿಣವಾಗಿದೆ. ವರ್ಷಗಟ್ಟಲೆಯಿಂದ ಕಾಯುತ್ತಿದ್ದಾರೆ. ಈ ಹಿನ್ನಲೆ ಇದಕ್ಕೆ ಮಾರ್ಪಡು ತರಲಾಗುತ್ತಿದೆ. ತಂದೆ ತಾಯಿ ಕಳೆದುಕೊಂಡ ಮಗುವನ್ನು ಮೊದಲು ಇಲಾಖೆಯ ಮೂಲಕ ಪಡೆದುಕೊಳ್ಳಲಾಗುವುದು. ನಂತರ ಆ ಮಗುವನ್ನು ಅವರನ್ನು ನೋಡಿಕೊಳ್ಳುವವರಿಗೆ ನೀಡುತ್ತೇವೆ. ಕೋವಿಡ್ ನಿಂದ ಬಾಧಿತರಾದ ಮಕ್ಕಳ ಆರೈಕೆಯನ್ನು ಆದ್ಯತೆಯ ಮೇರೆಗೆ ಕುಟುಂಬದ ವಾತಾವರಣದಲ್ಲಿ ಒದಗಿಸುವುದು ಇಲಾಖೆಯ ಕರ್ತವ್ಯವಾಗಿದೆ. ರಕ್ಷಣೆ ಅಗತ್ಯತೆ ಇರುವ ಮಕ್ಕಳಿಗೆ ಮಗುವಿನ ಹತ್ತಿರದ ಸಂಬಂಧಿ ಗಳು ಆರೈಕೆ ಮಾಡಲು ಇಚ್ಛಿಸಿದ್ದಲ್ಲಿ ಅವರನ್ನು *ಬಾಲನ್ಯಾಯ ಕಾಯಿದೆ 2015 ರ ಅನ್ವಯ ಫಿಟ್ ಪರ್ಸನ್ ಎಂದು ಗುರುತಿಸಿ ಮಗುವಿನ ತಾತ್ಕಾಲಿಕ ಆರೈಕೆಯನ್ನು ಅವರಿಗೆ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
Youtube Video
ಮೂರನೇ ಅಲೆ ಬಗ್ಗೆ ಎಚ್ಚರಿಕೆ

ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೂರನೇ ಅಲೆಯನ್ನು ಎದುರಿಸುವ ಬಗ್ಗೆ ತಳಮಟ್ಟದಲ್ಲಿ ಜಾಗೃತಿ ವಹಿಸಿದ್ದೇವೆ. ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಪೌಷ್ಠಿಕ ಆಹಾರ ನೀಡಲು ಕ್ರಮ ಕೈಗೊಂಡಿದ್ದೇವೆ. ಅನಾಥ ಮಕ್ಕಳಿಗೆ ಭಾಗ್ಯಲಕ್ಷ್ಮೀ ಮಾದರಿ ಯೋಜನೆಯ ನೆರವು ನೀಡಲು ಸಿಎಂ ಅವರನ್ನು ಕೋರಲಾಗುವುದು. ದಾನಿಗಳ ಮೂಲಕವೂ ನೆರವು ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿ ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಆದೇಶ ನಿರೀಕ್ಷಿಸಲಾಗಿದೆ.

ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ

ಕೋವಿಡ್ ಬಾಧಿತ 0-6 ವಯೋಮಾನದ ಮಕ್ಕಳಿಗಾಗಿ ಕ್ವಾರಂಟೈನ್ ಸೌಲಭ್ಯ ಮಾಡುತ್ತಿದ್ದೇವೆ. ತಾತ್ಕಾಲಿಕ ಆರೈಕೆ ಸೌಲಭ್ಯಕ್ಕಾಗಿ 30 ಜಿಲ್ಲೆಗಳಲ್ಲಿ ವಿಶೇಷ ದತ್ತು ಸಂಸ್ಥೆಗಳಲ್ಲಿ ಪ್ರತ್ಯೇಕ ಸೌಲಭ್ಯವನ್ನು ಮಾಡಲಾಗುವುದು. 7-18 ವಯಸ್ಸಿನಲ್ಲಿ ಮಕ್ಕಳ ಕ್ವಾರಂಟೈನ್ ಸೌಲಭ್ಯ ಮತ್ತು ತಾತ್ಕಾಲಿಕ ಸೌಲಭ್ಯಕ್ಕಾಗಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಫಿಟ್ ಫೆಸಿಲಿಟಿಸ್ ಸೆಂಟರ್ ಮಾಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಒಂದು ರೆಸಿಡೆನ್ಸಿಯಲ್ ಶಾಲೆಯಲ್ಲಿ 0-18 ವಯೋಮಾನದ ಗುಂಪಿನ ಎಲ್ಲಾ ಮಕ್ಕಳ ಕ್ವಾರಂಟೈನ್ ಹಾಗೂ ತಾತ್ಕಾಲಿಕ ಪುನರ್ವಸತಿ ಸೌಲಭ್ಯಕ್ಕಾಗಿ ಸಿದ್ಧಪಡಿಸಲಾಗುತ್ತಿದೆ.

ಕೋವಿಡ್ ಸೋಂಕಿತರಾಗಿದ್ದರೂ ಯಾವುದೇ ಲಕ್ಷಣಗಳಿಲ್ಲದ ಮಕ್ಕಳನ್ನು ಪ್ರತ್ಯೇಕವಾದ ಪೀಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳಲ್ಲಿ ಚಿಕಿತ್ಸೆ ನೀಡುವ ಕುರಿತು ಚಿಂತನೆ ಡೆಸಲಾಗಿದೆ.
Published by: Seema R
First published: May 18, 2021, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories