ಬೆಂಗಳೂರು (ಏಪ್ರಿಲ್ 07); ಎಲ್ಲೆಲ್ಲೂ ಮಹಾಮಾರಿ ಕೊರೋನ ಹಟ್ಟಹಾಸದಿಂದ ಬಡವರು ನಿರ್ಗತಿಕರು ದೈನಂದಿನ ಬದುಕಿಗಾಗಿ ಪರದಾಡುವ ಸ್ಥಿತಿಗೆ ಬಂದಿದ್ದು, ರಾಜ್ಯ ಹೊರ ರಾಜ್ಯಗಳಿಂದ ಜೀವನ ಕಟ್ಟಿಕೊಳ್ಳು ಬೆಂಗಳೂರಿಗೆ ಬಂದ ಅದೆಷ್ಟೋ ಜನರ ಬದುಕನ್ನೆ ಕಿತ್ತುಕೊಂಡಿದೆ. ಈ ಕುರಿತು ನ್ಯೂಸ್18 ಸುದ್ದಿ ಮಾಡಿತ್ತು. ಈ ಸುದ್ದಿಗೆ ಸ್ಪಂದಿಸಿರುವ ಸಚಿವ ಆರ್. ಅಶೋಕ್ ಮಗ ಶರತ್ ಏರ್ಪೋರ್ಟ್ ಸುತ್ತಲಿನ ಸುಮಾರು 2,000 ಜನರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಏರ್ಪೋರ್ಟ್ ಸುತ್ತಲಿನ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನೆಲೆಸಿದ್ದಾರೆ. ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರು ಲಾಕ್ ಡೌನ್ಗೆ ಸಿಲುಕಿ ದೈನಂದಿನ ಆಹಾರಕ್ಕೂ ಇದೀಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನ್ಯೂಸ್18 ಈ ಕುರಿತು ವಿಸ್ಕೃತ ವರದಿ ಬಿತ್ತರಿಸಿತ್ತು.
ಈ ಸುದ್ದಿ ನೋಡಿ ತಕ್ಷಣ ಸ್ಪಂದಿಸಿರುವ ಸಚಿವ ಆರ್. ಅಶೋಕ್ ಮಗ ಶರತ್ ಏರ್ಪೋರ್ಟ್ ಸುತ್ತಮುತ್ತಲ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿ ದಿನಿತ್ಯ 2,000 ಜನರಿಗೆ ಆಹಾರ ವಿರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಲಾಕ್ಡೌನ್ ಅವಧಿ ಮುಗಿಯುವವರೆಗೆ ಎಲ್ಲರಿಗೂ ಊಟ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಕೇಂದ್ರದಿಂದ ಪಾವತಿಯಾಗದ ಜಿಎಸ್ಟಿ ಬಾಕಿ, ಕಾಡುತ್ತಿರುವ ಕೊರೋನಾ; ಹದಗೆಡಲಿದೆ ದಕ್ಷಿಣ ರಾಜ್ಯಗಳ ಆರ್ಥಿಕ ಪರಿಸ್ಥಿತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ