• Home
 • »
 • News
 • »
 • coronavirus-latest-news
 • »
 • ಡಿಕೆಶಿಯವರೇ ಸ್ಮಾರ್ಟ್​​ ಆಗಿ, ಓವರ್​ ಸ್ಮಾರ್ಟ್​ ಬೇಡ, ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ - ಸಚಿವ ಆರ್​. ಅಶೋಕ್​​

ಡಿಕೆಶಿಯವರೇ ಸ್ಮಾರ್ಟ್​​ ಆಗಿ, ಓವರ್​ ಸ್ಮಾರ್ಟ್​ ಬೇಡ, ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ - ಸಚಿವ ಆರ್​. ಅಶೋಕ್​​

ಡಿಕೆ ಶಿವಕುಮಾರ್​ -ಆರ್ ಅಶೋಕ್​

ಡಿಕೆ ಶಿವಕುಮಾರ್​ -ಆರ್ ಅಶೋಕ್​

ರಾಜ್ಯ ಸರ್ಕಾರ ಕಾಂಗ್ರೆಸ್​ ಮಾತು ಕೇಳೋದಿಲ್ಲ. ಕಾಂಗ್ರೆಸ್​ ಕೊಟ್ಟ ಚೆಕ್​​ ನಮಗೆ ಬೇಕಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅಂತಾರೇ ಚೆಕ್​ ಮೇಲೆ ಗುಂಡೂರಾವ್​​​​ ಸಹಿ ಇದೆ. ನಿಮ್ಮ ಸಲಹೆ ನಮಗೆ ಬೇಕಿಲ್ಲ. ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎನ್ನುವರಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎನ್ನುವ ಮೂಲಕ ಡಿಕೆಶಿ ವಿರುದ್ಧ ಆರ್​​. ಅಶೋಕ್​​ ಕಿಡಿಕಾರಿದ್ಧಾರೆ.

ಮುಂದೆ ಓದಿ ...
 • Share this:

  ಬೆಂಗಳೂರು(ಮೇ.06): ನೀವು ಸ್ಮಾರ್ಟ್​ ಆಗಿ, ಓವರ್​​ ಸ್ಮಾರ್ಟ್​ ಆಗಬೇಡಿ ಎಂದು ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​​ಗೆ ರಾಜ್ಯ ಕಂದಾಯ ಇಲಾಖೆ ಸಚಿವ ಆರ್​​. ಅಶೋಕ್​​ ತಪರಾಕಿ ಬಾರಿಸಿದ್ದಾರೆ. ಈ ಸಂಬಂಧ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ನಾನು ಸರ್ಕಾರ ಕೇಳಿದರೆ ಹಣ ನೀಡುತ್ತೇನೆ ಎಂದ್ದಿದೀರಿ. ನಮಗೆ ನಿಮ್ಮ ಹಣ ಬೇಕಿಲ್ಲ. ನಿಮ್ಮ ಬಳಿ ಅಷ್ಟು ಹಣ ಇದ್ದರೆ ರಾಜ್ಯದ ಪ್ರತಿ ಮನೆಗೆ 20 ಸಾವಿರ ರೂ. ಕೊಡಿ ಎಂದು ತಿರುಗೇಟು ನೀಡಿದ್ದಾರೆ.


  ರಾಜ್ಯ ಸರ್ಕಾರ ಕಾಂಗ್ರೆಸ್​ ಮಾತು ಕೇಳೋದಿಲ್ಲ. ಕಾಂಗ್ರೆಸ್​ ಕೊಟ್ಟ ಚೆಕ್​​ ನಮಗೆ ಬೇಕಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಅಂತಾರೇ ಚೆಕ್​ ಮೇಲೆ ಗುಂಡೂರಾವ್​​​​ ಸಹಿ ಇದೆ. ನಿಮ್ಮ ಸಲಹೆ ನಮಗೆ ಬೇಕಿಲ್ಲ. ನನ್ನಿಂದಲೇ ಎಲ್ಲವೂ ನಡೆಯುತ್ತದೆ ಎನ್ನುವರಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ ಎನ್ನುವ ಮೂಲಕ ಡಿಕೆಶಿ ವಿರುದ್ಧ ಆರ್​​. ಅಶೋಕ್​​ ಕಿಡಿಕಾರಿದ್ಧಾರೆ.


  ಹೀಗೆ ಮುಂದುವರಿದ ಅವರು, ಇದುವರೆಗೆ ರಾಜ್ಯದಿಂದ ಹೊರ ರಾಜ್ಯಕ್ಕೆ 9600 ಜನ ಕಾರ್ಮಿಕರು ಹೋಗಿದ್ದಾರೆ. ಒಡಿಶಾ, ರಾಜಸ್ಥಾನ, ಬಿಹಾರ, ಜಾರ್ಖಂಡ್ ರಾಜ್ಯಗಳ ಕಾರ್ಮಿಕರು ವಾಪಸ್ ಆಗಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಕಾರ್ಮಿಕರು ಹೋಗಲು ಇನ್ನೂ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿ ಕೊಟ್ಟಿಲ್ಲ. 2 ಲಕ್ಷ ಜನ ಹೋಗಲು ನೊಂದಾಯಿಸಿಕೊಂಡಿದ್ದಾರೆ ಎಂದರು.


  ಇದನ್ನೂ ಓದಿ: BS Yediyurappa: ಲಾಕ್‌ಡೌನ್​ನಿಂದ ನಷ್ಟ ಅನುಭವಿಸಿದ ಜನರಿಗೆ 1610 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಬಿಎಸ್ ಯಡಿಯೂರಪ್ಪ


  ಇನ್ನು, ನಾವು ಯಾವ ಕಾರ್ಮಿಕರನ್ನು ತಡೆದಿಲ್ಲ. ಅವರು ಇಚ್ಚೆ ಪಟ್ರೆ ನಾವು ಕಳಿಸಿಕೊಡ್ತೀವಿ. ಬಿಹಾರ 52 ಸಾವಿರ, ಜಾರ್ಖಂಡ್ 50 ಸಾವಿರ, ಉತ್ತರ ಪ್ರದೇಶ 34 ಸಾವಿರ, ಪಶ್ಚಿಮ ಬಂಗಾಳ 18 ಸಾವಿರ, ರಾಜಸ್ಥಾನದ 24 ಸಾವಿರ ಕಾರ್ಮಿಕರು ಅಂದರೇ ಸುಮಾರು ಎರಡು ಲಕ್ಷಕ್ಕೂ ಅಧಿಕ ನೊಂದಾಯಿಸಿಕೊಂಡಿದ್ದಾರೆ. ರಾಜ್ಯದ 83 ಸಾವಿರ ಕಾರ್ಮಿಕರು ತಮ್ಮ ಜಿಲ್ಲೆ ಊರುಗಳಿಗೆ ಹೋಗಿದ್ದಾರೆ ಎಂದು ಆರ್​. ಅಶೋಕ್​​ ತಿಳಿಸಿದರು.

  Published by:Ganesh Nachikethu
  First published: