HOME » NEWS » Coronavirus-latest-news » MINISTER R ASHOK SAYS INSTRUCT PRIVATE MEDICAL COLLEGES TO PROVIDE BED FOR ANOTHER TWO DAYS SESR

R Ashok: ಇನ್ನೆರಡು ದಿನದಲ್ಲಿ ಬೆಡ್​ ನೀಡಲು ಖಾಸಗಿ ವೈದ್ಯಕೀಯ ಕಾಲೇಜ್​ಗಳಿಗೆ ಖಡಕ್ ಸೂಚನೆ; ಆರ್​ ಅಶೋಕ್​

ದಿನನಿತ್ಯದ ಬೆಡ್​ಗಳನ್ನು ಇನ್ನು ನೀಡಿಲ್ಲ ಈ ಹಿನ್ನಲೆ ಖಡಕ್ ಸೂಚನೆ ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಹಾಸಿಗೆ ನೀಡಬೇಕು ಎಂದು ತಿಳಿಸಲಾಗಿದೆ

news18-kannada
Updated:May 6, 2021, 4:12 PM IST
R Ashok: ಇನ್ನೆರಡು ದಿನದಲ್ಲಿ ಬೆಡ್​ ನೀಡಲು ಖಾಸಗಿ ವೈದ್ಯಕೀಯ ಕಾಲೇಜ್​ಗಳಿಗೆ ಖಡಕ್ ಸೂಚನೆ; ಆರ್​ ಅಶೋಕ್​
ಸಚಿವ ಆರ್​.ಅಶೋಕ್
  • Share this:
ಬೆಂಗಳೂರು (ಮೇ. 6): ರಾಜ್ಯದಲ್ಲಿ ಸೋಂಕು ಹೆಚ್ಚಳಗೊಂಡ ಬೆನ್ನಲ್ಲೇ ರಾಜಧಾನಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಡ್​ ಸಮಸ್ಯೆ ತಲೆದೂರಿದೆ. ಈ ಹಿನ್ನಲೆ ಬೆಡ್​ ಹಂಚಿಕೆ ವಿಚಾರವಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಚಿವರು ಸಭೆ ನಡೆಸಿದರು. ಕೋವಿಡ್​ ಉಸ್ತುವಾರಿ ಹೊಣೆ ಹೊತ್ತಿರುವ ಇಂಧನ ಸಚಿವ ಆರ್​ ಅಶೋಕ್​, ಗೃಹ ಸಚಿವ ಬಸವರಾಜ್​ ಬೊಮ್ಮಯಿ ಮತ್ತು ಆರೋಗ್ಯ ಸಚಿವ ಕೆ ಸುಧಾಕರ್​ ಸಭೆಯಲ್ಲಿ ಭಾಗಿಯಾಗಿದ್ದರು. ವಿಧಾನಸೌಧದ ಸಮ್ಮೇಳದಲ್ಲಿ ಬೆಡ್​ ನಿರ್ವಹಣೆ, ಸೂಕ್ತ ಚಿಕಿತ್ಸೆ ಕುರಿತು ಮಹತ್ವದ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಸಚಿವ ಆರ್​. ಅಶೋಕ್​, ಸಭೆಯಲ್ಲಿ ಬೆಡ್ ಸಮಸ್ಯೆಯ ಬಗ್ಗೆ ಚರ್ಚೆ ಆಗಿದೆ. ದಿನನಿತ್ಯದ ಬೆಡ್​ಗಳನ್ನು ಇನ್ನು ನೀಡಿಲ್ಲ ಈ ಹಿನ್ನಲೆ ಖಡಕ್ ಸೂಚನೆ ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಹಾಸಿಗೆ ನೀಡಬೇಕು ಎಂದು ತಿಳಿಸಲಾಗಿದೆ ಎಂದರು.

242 ಜನರಲ್ 103 ಐಸಿಯೂ ಒಟ್ಟು 1135 ಬೆಡ್ ನೀಡುವಂತೆ ತಿಳಿಸಲಾಗಿದೆ. ಅಲ್ಲದೇ ಆಕ್ಸಿಜನ್​ ಬೆಡ್ ಅಪ್ ಗ್ರೇಡ್ ಮಾಡಬೇಕು. ಆಗ 2000 ಸಾವಿರದಷ್ಟು ಬೆಡ್​ಗಳು ಸಿಗಲಿವೆ. ಆ ಬಗ್ಗೆಯೂ ಸೂಚನೆ ನೀಡಿದ್ದೇವೆ. ಬೆಡ್ ವ್ಯವಸ್ಥೆ ಪಾರದರ್ಶಕವಾಗಿ ನೀಡಲು ಸೂಚನೆ ನೀಡಲಾಗಿದ್ದು, ಸ್ವಚ್ಚತೆಗೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದ್ದೇವೆ. ಇದೇ ವೇಳೆ ಹೊರ ವಲಯ ಖಾಸಗಿ ಆಸ್ಪತ್ರೆಯಲ್ಲಿ ಡೆತ್ ರೇಟ್ ಜಾಸ್ತಿ ಇದೆ. ಡೆತ್ ರೇಟ್ ಕಡಿಮೆ ಮಾಡಲು ಸೂಚಿಸಿದ್ದೇವೆ ಎಂದರು.

ಗೃಹ ಸಚಿವ ಬಸವರಾಜ್​ ಬೊಮ್ಮಯಿ ಮಾತನಾಡಿ, ಸಭೆಯಲ್ಲಿ ಕೇವಲ ಆದೇಶ ನೀಡದೇ. ಐಸಿಯೂ, ವೆಂಟೆಲೇಟರ್ ಬೆಡ್, ಎಷ್ಟಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ಪಿಜಿ ವಿದ್ಯಾರ್ಥಿಗಳಿಗೆ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಇನ್ಸೆಂಟಿವ್ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಆದೇಶ ಮಾಡುತ್ತೇವೆ ಎಂದರು.

ಈಗಾಗಲೇ ಮೆಡಿಕಲ್​ ಕಾಲೇಜುಗಳಿಗೆ ಶೇ 75 ರಷ್ಟು ಬೆಡ್​ಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡುವಂತೆ ಸೂಚಿಸಲಾಗಿದೆ. ಆದರೆ ಇನ್ನು ಕೆಲವು ಕಾಲೇಜುಗಳು ಬೆಡ್​ಗಳನ್ನು ಬಿಟ್ಟುಕೊಟ್ಟಿಲ್ಲ. ಈ ಹಿನ್ನಲೆ ಇನ್ನೆರಡು ದಿನದೊಳಗೆ ಹಾಸಿಗೆ ನೀಡುವಂತೆ ಸೂಚನೆ ನೀಡಲಾಗಿದೆ.

ಕೊರೋನಾ ಸಂದಿಗ್ಧತೆ ಈ ಸಮಯದಲ್ಲಿ ಸರ್ಕಾರದೊಂದಿಗೆ ಖಾಸಗಿ ಆಸ್ಪತ್ರೆಗಳು ಹೋರಾಟಕ್ಕೆ ಕೈ ಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಈ ಸಭೆ ಕರೆದಿದ್ದು, ಈ ಸಭೆಗೆ ಹಾಜರಾಗಲು ವಿಫಲವಾದ ಎರಡು ಖಾಸಗಿ ಆಸ್ಪತ್ರೆಗಳಿಗೆ ಇದೇ ವೇಳೆ ನೋಟಿಸ್​ ನೀಡುವಂತೆ ಸ ಕರೆದಿರುವ ಈ ಸಭೆಗೆ ಹಾಜರಾಗಲು ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲು ಸಚಿವ ಅಶೋಕ್ ಸೂಚನೆ ನೀಡಿದರು. ಇಂದಿನ ಸಭೆಗೆ ದಯಾನಂದ್ ಮೆಡಿಕಲ್ ಕಾಲೇಜು ಮುಖ್ಯಸ್ಥರು ಹಾಗೂ ಸಿದ್ಧಾರ್ಥ ‌ಮೆಡಿಕಲ್ ಕಾಲೇಜು ಮುಖ್ಯಸ್ಥರಿಗೆ ನೋಟಿಸ್ ನೀಡಲು ಸೂಚನೆ ನೀಡಲಾಗಿದೆ.
Youtube Video

ಮೆಡಿಕಲ್​ ವಿದ್ಯಾರ್ಥಿಗಳ ಬಳಕೆಎರಡನೇ ಅಲೆ ಕೊರೋನಾ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆ ವೈದ್ಯಕೀಯ ಕೊರತೆ ಎದುರಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಈ ಹಿನ್ನಲೆ ಕೋವಿಡ್​ ಕರ್ತವ್ಯಕ್ಕಾಗಿ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ನರ್ಸಿಂಗ್​ ಕೋರ್ಸ್​ಗಳನ್ನು ಕಲಿಯುತ್ತಿರುವ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದ್ದು, ಇದಕ್ಕಾಗಿ ಅವರಿಗೆ ಇನ್ಸೆಟಿವ್​ ಕೂಡ ನೀಡಲು ಮುಂದಾಗಿದೆ.

ಇಂಟರ್ನಿಗಳು, ಪಿಜಿ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್​ ಕರ್ತವ್ಯಕ್ಕೆ ನಿಯೋಜಿಸುವ ಬಗ್ಗೆ ಈಗಾಗಲೇ ಡಿಸಿಎಂ ಅಶ್ವತ್ಥ್​ ನಾರಾಯಣ್​ ತಿಳಿಸಿದ್ದಾರೆ. ನರ್ಸಿಂಗ್​ನ 45,470, ಡೆಂಟಲ್​ ಕೋರ್ಸ್​ನ 2538, ಆಯುಷ್​ 9654 ಮತ್ತು ಫಾರ್ಮಸಿಯ 9936 ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲು ಕೇಳಲಾಗಿದೆ
Published by: Seema R
First published: May 6, 2021, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories