ಬೆಂಗಳೂರಲ್ಲಿ ಇನ್ಮುಂದೆ ಕೊರೋನಾ ಜವಾಬ್ದಾರಿ ಆಯಾ ವಾರ್ಡ್ ಕಾರ್ಪೋರೇಟರ್ ಹೆಗಲಿಗೆ ; ಸಚಿವ ಆರ್ ಅಶೋಕ್

ಪಕ್ಷಾತೀತವಾಗಿ ತಮ್ಮ ವಾರ್ಡ್ ಗಳನ್ನು ರಕ್ಷಣೆ ಮಾಡುವ ಕೆಲಸ ಕಾರ್ಪೋರೇಟರ್ ಮಾಡಬೇಕು. 24 ಗಂಟೆ ಕಾರ್ಪೋರೇಟರ್‌ ಮೊಬೈಲ್ ನಲ್ಲಿ ಸಿಗಬೇಕು ಎಂದು ಕೇಳಿಕೊಂಡಿದ್ದೇವೆ.

 ಸಚಿವ ಆರ್​ ಅಶೋಕ್​​

ಸಚಿವ ಆರ್​ ಅಶೋಕ್​​

  • Share this:
ಬೆಂಗಳೂರು(ಜುಲೈ.06): ಬೆಂಗಳೂರಿನಲ್ಲಿ ಇನ್ಮುಂದೆ ಕೊರೋನಾ‌ ಸಂಬಂಧಿಸಿದ ನಂತರ ಆಯಾ ವಾರ್ಡ್ ಜವಾಬ್ದಾರಿ ಕಾರ್ಪೋರೇಟರ್ ನೋಡಿಕೊಳ್ಳುತ್ತಾರೆ. ಅವರಿಗೆ ಅನುದಾನ ನೀಡುತ್ತಿದ್ದು, ಅಧಿಕಾರಿಗಳ ಸಹಕಾರದೊಂದಿಗೆ ಕೊರೊನಾಗೆ 24 ಗಂಟೆ ಕೆಲಸ ಮಾಡಿ ನಿಮ್ಮ ವಾರ್ಡ್ ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.

ಪ್ರತಿ ವಾರ್ಡ್ ನಲ್ಲಿ ಕೊರೋನಾ ಕುರಿತು ಮಾಹಿತಿ ನೀಡಿ. ಪಾಸಿಟಿವ್ ಕೇಸ್ ಬಂದರೆ ಆಯಾ ವಾರ್ಡ್ ಕಾರ್ಪೋರೇಟರ್ ಸಹಯೋಗದಲ್ಲಿ ಕೆಲಸ ಮಾಡಬೇಕು. ಸೀಲ್ ಡೌನ್ ಆಗುವ ಏರಿಯಾದಲ್ಲಿ ಒಂದು ವಾರ್ಡ್ ಗೆ 20 ಲಕ್ಷ ನೀಡಲಾಗುವುದು. ರೋಗಿಗೆ ಆ್ಯಂಬುಲೆನ್ಸ್, ಡಯಾಲಿಸಿಸ್, ವೈದ್ಯಕೀಯ ವೆಚ್ಚಕ್ಕೆ ಕಾರ್ಪೋರೇಟರ್ ಬಳಸಬಹುದು. ಮೆಡಿಕಲ್ ಫಂಡ್ ಪ್ರತಿ ವಾರ್ಡ್ ಗೆ 10 ಲಕ್ಷ ಇದೆ. ಇದರಲ್ಲಿ ಮೊದಲ ಆದ್ಯತೆ ಮೇರೆಗೆ ಮಹಿಳೆಯರ ಹೆರಿಗೆಗೆ ಅನುದಾನ ತೆಗೆದಿರಿಸಲಾಗಿದೆ. ಇದರ ಸದ್ಬಳಿಕೆಯಾಗಲಿ ಎಂದು ಹೇಳಿದರು.

ಪ್ರತಿ ವಾರ್ಡ್‌ನಲ್ಲಿ ಕಾರ್ಪೋರೇಟರ್‌ನ ನೇತೃತ್ವದಲ್ಲಿ ಆಟೋದಲ್ಲಿ ಜಾಗೃತಿ ಮೂಡಿಸಬೇಕು. ಭಯ ಬೇಡ, ಜಾಗೃತಿ ಇರಲಿ ಎಂಬ ಘೋಷವಾಕ್ಯವಿರಬೇಕು. ಆಟೋದಲ್ಲಿ ಅನೌನ್ಸ್ ಮಾಡಬೇಕಾದರು ಸಂಬಂಧಿಸಿದವರ ಫೋನ್ ನಂಬರ್ ಹೇಳಬೇಕು. ಪಕ್ಷಾತೀತವಾಗಿ ತಮ್ಮ ವಾರ್ಡ್ ಗಳನ್ನು ರಕ್ಷಣೆ ಮಾಡುವ ಕೆಲಸ ಕಾರ್ಪೋರೇಟರ್ ಮಾಡಬೇಕು. 24 ಗಂಟೆ ಕಾರ್ಪೋರೇಟರ್‌ ಮೊಬೈಲ್ ನಲ್ಲಿ ಸಿಗಬೇಕು ಎಂದು ಕೇಳಿಕೊಂಡಿದ್ದೇವೆ. ಅದಕ್ಕೆ ಎಲ್ಲ ಕಾರ್ಪೋರೇಟರ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಕೊರೊನಾ ದಿಂದ ಚೇತರಿಕೆಯಾದವರ ವೀಡಿಯೋ ಮಾಡಿ ಎಲ್ಲರಿಗೂ ಕಳುಹಿಸಬೇಕು. ಕರಪತ್ರ ಹಂಚಿ ಇದರಲ್ಲಿ ಕೇವಲ ಕಾರ್ಪೋರೇಟರ್ ಮಾತ್ರವಲ್ಲ, ಆರು ಸಿಬ್ಬಂದಿಗಳ ನಂಬರ್ ಹಾಕಬೇಕು. ಕೊವಿಡ್ ಹಾಗೂ ನಾನ್ ಕೊವಿಡ್ ಗೆ ಪ್ರತ್ಯೇಕ ಆ್ಯಂಬುಲೆನ್ಸ್ ಬಳಕೆಯಾಗಬೇಕು ಎಂದು ತಿಳಿಸಿದರು.

ಯಾವುದೇ ವಿಚಾರವಾದರೂ ಕಾರ್ಪೊರೇಟರ್ ಗೆ ಗೊತ್ತಾಗಬೇಕು. ಯಾವುದೇ ರೋಗಿಯಾದರೂ ಕಾರ್ಪೊರೇಟರ್ ಗಳು ಧೈರ್ಯ ತುಂಬಿ. ಎಲ್ಲಾ ಪಾಲಿಕೆ ಸದಸ್ಯರು ಆರೋಗ್ಯ ಸೇತು ಆಪ್ ಹಾಕಿಕೊಳ್ಳಿ. ಒಟ್ಟು 8 ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ, ಜಂಟಿ ಆಯುಕ್ತರುಗಳಿಗೆ ಕೊಂಚ ರಿಲೀಫ್ ಕೊಡೋಣ. 20 ಲಕ್ಷವನ್ನು ಸೀಲ್ ಡೌನ್ ಆದ ಪ್ರದೇಶಗಳ ಖರ್ಚು ವೆಚ್ಚಕ್ಕೆ ಇಡಿ. 2 ಕೋವಿಡ್ ಹೆರಿಗೆ ಆಸ್ಪತ್ರೆಯನ್ನು ನೋಟಿಫೈ ಮಾಡಿ. ಉತ್ತರ ಹಾಗೂ ದಕ್ಷಿಣದಲ್ಲಿ ಒಂದೊಂದು ಆಸ್ಪತ್ರೆ ಮಾಡಲಾಗುವುದು. ಆಯಾ ವಾರ್ಡ್ ನ ಎಲ್ಲಾ ಕೋವಿಡ್ ನಾನ್ ಕೋವಿಡ್ ಜನರ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಇರಬೇಕು. ಫೋನ್ ನಲ್ಲಿ ಮಾತನಾಡಿದರೆ ಕೊರೊನಾ ಬರಲ್ಲ. ಅವರಿಗೆ ಧೈರ್ಯ ತುಂಬಿ.‌ ನಾನು ರಿಯಾಲಿಟಿ ಚೆಕ್ ಮಾಡ್ತಿನಿ. ಹೆಚ್ಚುವರಿ ಆ್ಯಂಬ್ಯುಲೆನ್ಸ್ ಇನ್ನೆರಡು ದಿನದಲ್ಲಿ ರೆಡಿ ಇರುತ್ತದೆ. ಶವಸಂಸ್ಕಾರವನ್ನು ಗೌರವಪೂರ್ವವಾಗಿ ಮಾಡುವ ಜವಾಬ್ದಾರಿ ಇನ್ಮೇಲೆ ಕಾರ್ಪೊರೇಟರ್ ಗಳದ್ದು. ಅದಕ್ಕೆ ಬೇಕಾದ ಪಿಪಿಇ ಕಿಟ್, ಮುಂತಾದ ಎಲ್ಲಾ ಸೌಕರ್ಯಗಳನ್ನು ಅವರೇ ಮಾಡ್ಬೇಕು. ಆಯಾ ವಾರ್ಡ್ ಗಳ ಕೊವಿಡ್, ನಾನ್ ಕೋವಿಡ್ ಎಲ್ಲಾ ಪ್ರಕರಣಗಳ ಜವಾಬ್ದಾರಿ ಅಲ್ಲಿನ ಕಾರ್ಪೊರೇಟರ್ ದು. ಇನ್ಮೇಲೆ ರೋಗಿಯ ಕೊರೊನಾ ರಿಪೋರ್ಟ್ ರೋಗಿಗೆ ಕೊಡುವಂತಿಲ್ಲ. ನೇರವಾಗಿ ಬಿಬಿಎಂಪಿ, ಸರ್ಕಾರಕ್ಕೆ ತಿಳಿಸಬೇಕು. ಅವರು ಚಿಕಿತ್ಸೆ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ : ರಾಜ್ಯ ಸರ್ಕಾರ ಕೊರೋನಾ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ; ವಾಟಾಳ್ ನಾಗರಾಜ್ ಆಕ್ರೋಶ

ಯಾವುದೇ ರೋಗಿಯಾಗಿರಲಿ ಅವರನ್ನು ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಕೊಡದೇ ವಾಪಾಸ್ ಕಳುಹಿಸುವಂತಿಲ್ಲ. ಆಸ್ಪತ್ರೆಗಳಲ್ಲಿ ಬಂದ ಕೊರೋನಾ ಮಾತ್ರವಲ್ಲ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲೇಬೇಕು ವಾಪಾಸ್‌ ಕಳುಹಿಸುವಂತಿಲ್ಲ. ಚಿಕಿತ್ಸೆ ನೀಡಬೇಕು. ಇಲ್ಲವಾದಲ್ಲಿ ಅವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ಬಗ್ಗೆ ಕೇವಲ ಕಟ್ಟುನಿಟ್ಟಿನ ಕ್ರಮ ಮಾತ್ರವಲ್ಲ. ಡಿಸಾಸ್ಟರ್ ಆಕ್ಟ್‌ ಮೂಲಕ ಕ್ರಮ ತೆಗೆದುಕೊಳ್ಳಿ ಎಂದು ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.

ಸಾಮಾಜಿಕ ಅಂತರ ಹಿನ್ನೆಲೆ ಇದು ಅರ್ಧದಷ್ಟು ಕಾರ್ಪೋರೇಟರ್ ಭಾಗವಹಿಸಿದ್ದು ನಾಳೆಯೂ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಕಮಿಷನರ್ ಅನಿಲ್ ಕುಮಾರ್, ಮೇಯರ್ ಗೌತಮ್ ಕುಮಾರ್ ಭಾಗವಹಿಸಲಿದ್ದಾರೆ.
Published by:G Hareeshkumar
First published: