ಬೆಂಗಳೂರು(ಮೇ.04): ಕೇಂದ್ರ ಸರ್ಕಾರದ ಆದೇಶದ ಮೇರೆಗೆ ವಲಸೆ ಕಾರ್ಮಿಕರನ್ನು ತಮ್ಮ ತವರಿಗೆ ಕಳಿಸಲಾಗ್ತಿದೆ ಎಂದು ರಾಜ್ಯ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಹೇಳಿದರು. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಾರ್ಮಿಕರನ್ನು ಈಗಾಗಲೇ ತಮ್ಮ ರಾಜ್ಯಗಳಿಗೆ ಕಳಿಸುತ್ತಿದ್ದೇವೆ. ಇನ್ನು ಒಂದಷ್ಟು ರಾಜ್ಯಗಳು ತಮ್ಮ ಕಾರ್ಮಿಕರನ್ನು ಕರೆಸಿಕೊಳ್ಳಲು ಒಪ್ಪಿಗೆ ನೀಡಿಲ್ಲ ಎಂದರು.
ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಕೂಲಿ ಕಾರ್ಮಿಕರು ತಮ್ಮ ಊರಿಗೆ ಹೋಗಲು ಮನವಿ ಮಾಡಿದ್ದರು. ಬೇರೆ ರಾಜ್ಯ ಸರ್ಕಾರಗಳಿಗೆ ನಾವು ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಆದರೆ, ಅಲ್ಲಿನ ರಾಜ್ಯ ಸರ್ಕಾರ ಇನ್ನು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಪ್ರತಿಕ್ರಿಯೆ ಬಂದ ನಂತರ ಕಳುಹಿಸುವ ಪ್ರಕ್ರಿಯೆ ಆಗುತ್ತೆ. ಇದರ ಮಧ್ಯೆ ನಾಳೆ ಮೆಟ್ರೋ ಕಾರ್ಪೊರೇಷನ್ ಕೆಲಸ ನಡೆಸುವಂತೆ ಸೂಚನೆ ಕೊಟ್ಟಿದ್ದೇನೆ. ಕೆಲಸದ ವೇಳೆ ಅವರಿಗೆ ಉಚಿತ ಊಟ ಕೊಡುವ ವ್ಯವಸ್ಥೆ ಮಾಡುವಂತೆ ಆದೇಶಿಸಿದ್ದೇನೆ ಎಂದರು.
ಹೀಗೆ ಮುಂದುವರೆದ ಆರ್. ಅಶೋಕ್, ಇವಾಗ ನಾವು ಮಾದಾವರ ಬಳಿ ಹೋಗಿ ಅವರನ್ನ ಮನವೊಲಿಸೋ ಕೆಲಸ ಮಾಡ್ತಿವಿ. ಅವರ ಬಳಿ ಮಾತನಾಡಿ ಇಲ್ಲೇ ಉಳಿಸುವ ಕೆಲಸ ಮಾಡ್ತಿವಿ. ಸಿಎಂ ಜೊತೆ ಮಾತನಾಡಿ ಅವರ ಮಾಲೀಕರಿಂದ ಸಂಬಳ ಕೊಡಿಸುತ್ತೇವೆ. ಕಾರ್ಮಿಕರು ಊರಿಗೆ ಹೋದರೂ ತಮ್ಮ ರಾಜ್ಯದಲ್ಲಿ ಕ್ವಾರಂಟೈನ್ ಮಾಡ್ತಾರೆ. ಈ ವಿಚಾರ ಅವರಿಗೆ ಗೊತ್ತಿಲ್ಲ. ಅದನ್ನ ಅವರಿಗೆ ಮನವರಿಕೆ ಮಾಡ್ತೀವಿ ಎಂದು ಹೇಳಿದರು.
ಇದನ್ನೂ ಓದಿ: Coronavirus In Singapore: ಕೋವಿಡ್-19: ಸಿಂಗಾಪುರ್ನಲ್ಲಿ 4,800 ಭಾರತೀಯರಿಗೆ ಸೋಂಕು
ಈ ಮುನ್ನ ಕಾರ್ಮಿಕರನ್ನು ಇಲ್ಲೇ ಉಳಿಸಿಕೊಳ್ಳುವ ಕುರಿತಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕಂದಾಯ ಸಚಿವ ಆರ್ ಆಶೋಕ್, ಸಚಿವ ಸುರೇಶ್ ಕುಮಾರ್, ಶಾಸಕ ಎಸ್ ಆರ್ ವಿಶ್ವನಾಥ್, ಕಮೀಷನರ್ ಭಾಸ್ಕರ್ ರಾವ್ ಭಾಗಿಯಾಗಿದ್ದರು. ಇದೀಗ ಸಿಎಂ ಸೂಚನೆ ಮೇರೆಗೆ ಅವರನ್ನು ಮನವೊಲಿಸಲು ಸಚಿವರು ಯತ್ನಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ