ಲಾಕ್‌ಡೌನ್ ಮುಗಿಯುವವರೆಗೆ ಎಣ್ಣೆ ನಿಮ್ದು, ಊಟ ಮಾತ್ರ ನಮ್ದು; ಸಚಿವ ಆರ್‌. ಅಶೋಕ್ ಹಾಸ್ಯ ಚಟಾಕಿ

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಚಿವ ಆರ್. ಅಶೋಕ್, ಲಾಕ್‌ಡೌನ್ ಮುಗಿಯುವವರೆಗೂ ಎಣ್ಣೆ ನಿಮ್ದು, ಊಟ ಮಾತ್ರ ನಮ್ದು ಎಂದು ಸಿನಿಮಾ ಡೈಲಾಗ್ ಹೊಡೆದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು

news18-kannada
Updated:April 1, 2020, 2:29 PM IST
ಲಾಕ್‌ಡೌನ್ ಮುಗಿಯುವವರೆಗೆ ಎಣ್ಣೆ ನಿಮ್ದು, ಊಟ ಮಾತ್ರ ನಮ್ದು; ಸಚಿವ ಆರ್‌. ಅಶೋಕ್ ಹಾಸ್ಯ ಚಟಾಕಿ
ಸಚಿವ ಆರ್. ಅಶೋಕ್
  • Share this:
ಬೆಂಗಳೂರು (ಏಪ್ರಿಲ್ 01); ಮಾರಣಾಂತಿಕ ಕೊರೋನಾ ವೈರಸ್‌ನಿಂದಾಗಿ ಈಗಾಗಲೇ ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಹೀಗಾಗಿ ಎಷ್ಟೇ ಒತ್ತಡ ಬಂದರೂ ಸಹ ಲಾಕ್‌ಡೌನ್ ಅವಧಿ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡುವ ಸಾಧ್ಯತೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ರೈತರು ಮತ್ತು ಗ್ರಾಹಕರ ಹಿತ ಕಾಯುವ ನಿಟ್ಟಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ವಿವಿಧ ಇಲಾಖೆ ಸಚಿವರುಗಳ ಮಹತ್ವದ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಹತ್ತಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಈ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ಏನೇ ಒತ್ತಡ ಬಂದರೂ ಮದ್ಯ ಮಾರಾಟಕ್ಕೆ ರಾಜ್ಯದಲ್ಲಿ ಅವಕಾಶ ನೀಡುವ ಚಿಂತನೆ ಸರಕಾರದ ಮುಂದೆ‌ ಇಲ್ಲ. ಈಗಲೇ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಇಂತಹ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರಲ್ಲ. ಹೀಗಾಗಿ ಒಂದು ವಾರದಲ್ಲಿ ಸುಮ್ಮನೆ ಇದ್ದರೆ ಏನೂ ಆಗಲ್ಲ. ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಯೂ ಇಲ್ಲ" ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಚಿವ ಆರ್. ಅಶೋಕ್, "ಲಾಕ್‌ಡೌನ್ ಮುಗಿಯುವವರೆಗೂ ಎಣ್ಣೆ ನಿಮ್ದು, ಊಟ ಮಾತ್ರ ನಮ್ದು ಎಂದು ಸಿನಿಮಾ ಡೈಲಾಗ್ ಹೊಡೆದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಅಂದಹಾಗೆ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ 6ಜನ ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ : ರೈತರು-ಗ್ರಾಹಕರ ಹಿತ ಕಾಯಲು ಕೆಲವು ಮಹತ್ವದ ತೀರ್ಮಾನ ತೆಗೆದುಕೊಂಡ ಸಿಎಂ ಬಿಎಸ್‌ವೈ; ಏನದು?
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading