news18-kannada Updated:June 2, 2020, 2:52 PM IST
ಸಚಿವ ನಾರಾಯಣ ಗೌಡ.
ಬೆಂಗಳೂರು(ಜೂ.02): "ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ಈಗಾಗಲೇ ಒಡೆದು ಹೋಗಿದೆ, ಇನ್ಮುಂದೆ ನೋಡಿ ಏನಾಗುತ್ತೇ" ಎಂದು ಕೆ.ಆರ್ ಪೇಟೆ ಬಿಜೆಪಿ ಶಾಸಕ ಮತ್ತು ತೋಟಗಾರಿಕೆ ಸಚಿವರಾದ ನಾರಾಯಣಗೌಡ ಸವಾಲ್ ಎಸೆದಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ನಾರಾಯಣಗೌಡ, ಹಾಸನದ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗೋಪಾಲಯ್ಯರನ್ನು ಮಾಡಲಾಗಿದೆ. ಈ ಬಗ್ಗೆ ನಾನೇನು ಹೆಚ್ಚಿಗೆ ಮಾತಾಡೋದಿಲ್ಲ. ಜೆಡಿಎಸ್ ಹಾಸನ ಮತ್ತು ಮಂಡ್ಯದಲ್ಲಿ ಒಡೆದೋಗಿದೆ. ಹಾಗಾಗಿ ಇನ್ಮುಂದೆ ಏನಾಗಲಿದೆ ಎಂದು ನೀವೇ ನೋಡುತ್ತೀರಿ ಎಂದರು.
ಇನ್ನು, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಿಜೆಪಿಯಲ್ಲಿ ಎಲ್ಲಾ ಶಾಸಕರ ಕೆಲಸವೂ ಸರಿಯಾಗಿ ನಡೆಯುತ್ತಿದೆ. ಎಲ್ಲರೂ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಹೀಗಿದ್ದರೂ ಹಿಂದೆಯಿಂದಲೇ ಕೆಲವರು ರಾಜಕೀಯ ಮಾಡಲು ಹೊರಟಿದ್ಧಾರೆ. ಈ ಬಗ್ಗೆ ನಾನೇನು ಚರ್ಚೆ ಮಾಡಲ್ಲ ಎಂದರು ಸಚಿವ ನಾರಾಯಣಗೌಡ.
ಹೀಗೆ ಮುಂದುವರಿದ ಅವರು, ಮಾರಕ ಕೊರೋನಾ ವೈರಸ್ ತಡಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಹಾಗಾಗಿಯೇ ದಿನದ 24 ಗಂಟೆಗಳಲ್ಲಿ ಸಿಎಂ ಕೇವಲ 16 ಗಂಟೆ ನಿದ್ದೆ ಮಾಡುತ್ತಾರೆ ಎಂದು ಬಾಯ್ತಪ್ಪಿ ಹೇಳಿದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊನೆಗೂ ಸಿಕ್ಕಿದ ಬೆಳಗಾವಿ ಉಸ್ತುವಾರಿ; ಸಚಿವ ಕೆ.ಗೋಪಾಲಯ್ಯಗೆ ಹಾಸನ ಜವಾಬ್ದಾರಿ
ರಾಜ್ಯ ಸರ್ಕಾರದಿಂದ ಹೂವು ಹಣ್ಣು ಬೆಳೆದವರಿಗೆ 166 ಕೋಟಿ ರೂ ಪರಿಹಾರ ಕೊಡಲಾಗಿದೆ. ರೇಷ್ಮೆ ಬೆಳೆಗಾರರಿಗೆ 50 ಕೋಟಿ ರೂ ಪರಿಹಾರ ಕೊಡಲಾಗಿದೆ. ಇವತ್ತು ರೈತರ ಖಾತೆಗೆ ಹಣ ಹಾಕಲಾಗಿದೆ. ಮುಂದೆಯೂ ರೈತರು ಇದರ ಸಹಾಯ ಪಡೆದುಕೊಳ್ಳಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
First published:
June 2, 2020, 2:45 PM IST