ಮಂಡ್ಯದಲ್ಲಿ ತಪ್ಪಿದ ಭಾರೀ ಅಪಾಯ: ಕೂದಲೆಳೆ ಅಂತರದಲ್ಲಿ ಪಾರಾದ ಸಚಿವ ನಾರಾಯಣಗೌಡ

ಸದ್ಯ ಸಚಿವರ ಸೂಚನೆ ಮೇರೆಗೆ ಕಲ್ಲುಬಂಡೆ ಸ್ಪೋಟ ಮಾಡಿದ ಕೆಶಿಫ್ ಕಾಮಗಾರಿ ನಡೆಸುತ್ತಿದ್ದ ಮೈಸೂರಿನ‌ ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ. ದೇವರ ದಯೆಯಿಂದ ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲೇ ಪಾರಾದೆ ಎಂದು ಸಚವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಚಿವ ನಾರಾಯಣಗೌಡ

ಸಚಿವ ನಾರಾಯಣಗೌಡ

  • Share this:
ಮಂಡ್ಯ(ಜೂ.08): ರಾಜ್ಯ ತೋಟಗಾರಿಕೆ ಸಚಿವ ನಾರಾಯಣಗೌಡ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಭಾನುವಾರ ನಡೆದಿದೆ. ಜಿಲ್ಲೆಯ ಕೆ. ಆರ್ ಪೇಟೆಯ ಪ್ರವಾಸ ನಿಮಿತ್ತ ಸಚಿವರು ಬೆಂಗಳೂರು ಜಲಸೂರು ರಸ್ತೆಯ ಮಾರ್ಗದ ಮೂಲಕ ಕಾರ್​​ನಲ್ಲಿ ಆಗಮಿಸುತ್ತಿದ್ದರು. ಈ ವೇಳೆ ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರಿನಲ್ಲಿ ಬರುತ್ತಿದ್ದ ವೇಳೆ ರಸ್ತೆ ಬದಿ ಕಲ್ಲುಬಂಡೆ ಸ್ಫೋಟಗೊಂಡಿದೆ. ಆಗ ಸ್ವಲ್ಪದರಲ್ಲಿಯೇ ಭಾರೀ ಅಪಾಯದಿಂದ ಸಚಿವ ನಾರಾಯಣಗೌಡ ಪಾರಾಗಿದ್ದಾರೆ.

ಇನ್ನು, ನಾಗಮಂಗಲದ ಬಂಕಾಪುರ ಬಳಿ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಸ್ಥಳದಲ್ಲಿ ಮಧ್ಯಾಹ್ನದ ಹೊತ್ತಲ್ಲೇ ಕಲ್ಲು ಬಂಡೆಯನ್ನು ಸ್ಫೋಟಗೊಳಿಸಲಾಗಿದೆ. ಕೆ.ಆರ್.ಪೇಟೆಗೆ ಸಚಿವ ನಾರಾಯಣಗೌಡ ಕಾರಿನಲ್ಲಿ ಬರುತ್ತಿದ್ದ ವೇಳೆ ಕಲ್ಲುಬಂಡೆ ಸ್ಫೋಟವಾದ್ದರಿಂದ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಹಿಂದೆಯೇ ಕಾರು ನಿಲ್ಲಿಸಿದ್ದಾನೆ. ಹೀಗಾಗಿ ಸಚಿವರು ಬಚಾವ್​​ ಆಗಿದ್ಧಾರೆ.

ತಮ್ಮ ಕಣ್ಣೆದುರೇ ಈ ಘಟನೆ ನಡೆದ ಕಾರಣ ಸಚಿವರು ಕೆಲಕಾಲ ವಿಚಲಿತರಾಗಿದ್ದಾರೆ. ಹಗಲು ವೇಳೆಯೇ ಕಾಮಗಾರಿ ಹೆಸರಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಹೀಗೆ ಹೆದ್ದಾರಿ ಬದಿ ಸ್ಫೋಟಕ ಬಳಸಿ ಬಂಡೆ ಸಿಡಿಸಿದ್ದಕ್ಕೆ ಸಚಿವರು ಗರಂ ಆಗಿದ್ದಾರೆ.

ಇದನ್ನೂ ಓದಿ: Chiranjeevi Sarja Death: ಚಿರಂಜೀವಿ ಸರ್ಜಾಗೆ ಕೊರೋನಾ ಇರಲಿಲ್ಲ; ಅಪೋಲೋ ವೈದ್ಯರಿಂದ ಸ್ಪಷ್ಟನೆ

ಸದ್ಯ ಸಚಿವರ ಸೂಚನೆ ಮೇರೆಗೆ ಕಲ್ಲುಬಂಡೆ ಸ್ಪೋಟ ಮಾಡಿದ ಕೆಶಿಫ್ ಕಾಮಗಾರಿ ನಡೆಸುತ್ತಿದ್ದ ಮೈಸೂರಿನ‌ ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ. ದೇವರ ದಯೆಯಿಂದ ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲೇ ಪಾರಾದೆ ಎಂದು ಸಚವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
First published: